Kannada Serial: ಈಗಾಗಲೇ ೬೦೦ರ ಗಡಿ ದಾಟಿ ಕನ್ನಡಿಗರ ಮನೆಮಾತಾಗಿರುವ “ಕನ್ಯಾದಾನ” ತನ್ನ ಕಥಾಹಂದರದ ಮೂಲಕ ದಿನನಿತ್ಯದ ಬದುಕಿಗೆ ಕೈಗನ್ನಡಿಯಾಗಿದೆ. ಹೆಣ್ಣಿನ ಜೀವನದ ವಿವಿಧ ಮಜಲುಗಳನ್ನು, ಗಂಡನ ಮನೆಯಲ್ಲಿ ಎದುರಿಸಬೇಕಾದ ಗೋಜಲುಗಳನ್ನು “ಕನ್ಯಾದಾನ” ಧಾರಾವಾಹಿಯು ತುಂಬಾ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದೆ. 


COMMERCIAL BREAK
SCROLL TO CONTINUE READING

ವೀಕ್ಷಕರ ಮನರಂಜನೆಗೆ ಮೊದಲ ಆದ್ಯತೆ ನೀಡುವ ಈ ಜನಪ್ರಿಯ ಧಾರಾವಾಹಿಯಲ್ಲಿ ವಿಶೇಷ ಸಂಚಿಕೆಗಳ ಪ್ರಯೋಗ ಇದೇ ಮೊದಲೇನಲ್ಲ. ಈ ಹಿಂದೆ ಸ್ಯಾಂಡಲ್‌ವುಡ್‌ನ ಖ್ಯಾತ ನಟಿಯರಾದ ಸುಧಾರಾಣಿ ಹಾಗೂ ನೀತು ಶೆಟ್ಟಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡು ಧಾರಾವಾಹಿಗೆ ಮೆರುಗು ನೀಡಿದ್ದರು. ಸದ್ಯ ಧಾರಾವಾಹಿಯಲ್ಲಿ ಬರುವ ಅನಿರೀಕ್ಷಿತ ತಿರುವೊಂದರಲ್ಲಿ ಸ್ಯಾಂಡಲ್‌ವುಡ್‌ನ ಜನಪ್ರಿಯ ನಟಿ ಅನಿತಾ ಭಟ್‌ವಿಶೇಷ ಪಾತ್ರದಲ್ಲಿ ಮಿಂಚಿದ್ದಾರೆ.


ಇದನ್ನೂ ಓದಿ-Nora Fatehi: ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ನೋರಾ.. ʼKDʼ ಅಡ್ಡಾದಲ್ಲಿ ಕೆನೆಡಿಯನ್ ಬ್ಯೂಟಿ!


ವೈಜ್ಞಾನಿಕವಾಗಿ ಮನುಷ್ಯ ಎಷ್ಟೇ ಮುಂದುವರೆದರೂ ಸಾಮಾಜಿಕ ಅನಿಷ್ಠ ಪಿಡುಗುಗಳಿಂದ ಹೆಣ್ಣುಮಕ್ಕಳಿಗೆ ಇನ್ನೂ ಸ್ವಾತಂತ್ರ ಸಿಕ್ಕಿಲ್ಲ. ಹೆಣ್ಣು ಭ್ರೂಣ ಹತ್ಯೆಯಂತಹ ಅನಿಷ್ಠ ಪದ್ದತಿ ವಿದ್ಯಾವಂತ ನಾಗರಿಕ ಸಮಾಜದಿಂದ ಇನ್ನೂ ಮರೆಯಾಗಿಲ್ಲ. ಮಾನವ ಸಮಾಜ ತಲೆ ತಗ್ಗಿಸುವಂತಹ ಈ ಪದ್ದತಿಯನ್ನು ತಡೆಗಟ್ಟುವ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅನಿತಾ ಭಟ್‌ ಈ ಕುರಿತು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಕುರಿತ ಕೆಲವು ಮುಖ್ಯ ಪ್ರಶ್ನೆಗಳಿಗೆ ತಮ್ಮ ನಿಲುವುಗಳ ಮೂಲಕ ಉತ್ತರಿಸಿದ್ದಾರೆ.


1. ಕನ್ಯಾದಾನ ಧಾರಾವಾಹಿಯಲ್ಲಿ ನಿಮ್ಮ ಪಾತ್ರ ಏನು? ಅದರ ಬಗ್ಗೆ ಸ್ವಲ್ಪ ಹೇಳಿ. ನಾನು ಉದಯ ಟಿ.ವಿಯಲ್ಲಿ ಪ್ರಸಾರ ಆಗುವ ಕನ್ಯಾದಾನ ಧಾರಾವಾಹಿಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಆಗಿ ನಿಮ್ಮ ಮುಂದೆ ಬರ್ತಾ ಇದ್ದೀನಿ. ಪಾತ್ರದ ಬಗ್ಗೆ ಜಾಸ್ತಿ ಹೇಳಲ್ಲ. ಇನ್ನಷ್ಟು ತಿಳ್ಕೊಳೋಕೆ ನೀವು ಧಾರಾವಾಹಿ ನೋಡ್ಬೇಕು. 


2. ಗಂಡು-ಹೆಣ್ಣಿನ ಮಧ್ಯೆ ನಡೆಯುವ ತಾರತಮ್ಯದ ಬಗ್ಗೆ ನಿಮ್ಮ ಅಭಿಪ್ರಾಯ ಏನು? 
ನಾವು 21 ನೇ ಶತಕದಲ್ಲಿ ಇದ್ದು, ಎಷ್ಟೇ ಆಧುನಿಕತೆಯ ಬಗ್ಗೆ ಮಾತನಾಡಿದ್ರು ಗಂಡು-ಹೆಣ್ಣಿನ ಮಧ್ಯೆ ತಾರತಮ್ಯ ಇದೆ ಮತ್ತು ಇದು ಸಮಾಜಕ್ಕೆ ಅಂಟಿಕೊಂಡಿರುವ ಒಂದು ಪಿಡುಗು. ಹಾಂ, ಹಿಂದಿನ ಕಾಲಕ್ಕೆ ಹೋಲಿಸಿದರೆ ಹೆಣ್ಣು ಭ್ರೂಣಹತ್ಯೆ, ಹೆಣ್ಣನ್ನು ಕೀಳಾಗಿ ನೋಡುವುದು ಕಡಿಮೆ ಆಗಿದೆ ಹಾಗಂತ ಸಂಪೂರ್ಣವಾಗಿ ಹೋಗಿಲ್ಲ. ಇದನ್ನು ಹೋಗಲಾಡಿಸಬೇಕು ಅಂದ್ರೆ ನಮ್ಮೆಲ್ಲರ ವಿಚಾರಧಾರೆಗಳು ಬದಲಾಗಬೇಕು. ಅದಕ್ಕೆ ಹೆಣ್ಣುಮಕ್ಕಳಿಗೆ ಶಿಕ್ಷಣ ಅತ್ಯಗತ್ಯ. ಇದರಿಂದ ಈ ತಾರತಮ್ಯ ನಿಧಾನವಾಗಿ ಆದರೂ ಕಡಿಮೆ ಆಗಬಹುದು. 


ಇದನ್ನೂ ಓದಿ-ಈ ದಾಖಲೆಯೊಂದಿಗೆ Biggboss Final ಪ್ರವೇಶಿಸಿರುವ ಸ್ಪರ್ಧಿ!ಕಾರ್ತಿಕ್, ಸಂಗೀತಾ ಕೂಡಾ ಮಾಡಿಲ್ಲ ಈ ಸಾಧನೆ


3. ಗಂಡು-ಹೆಣ್ಣು ಅನ್ನುವ ತಾರತಮ್ಯ ನಿಮ್ಮ ಜೀವನದಲ್ಲೂ ನಡೆದಿದೆಯಾ? 
ನಾನು ಮತ್ತು ನನ್ನ ಅಣ್ಣನ ನಡುವೆ ಆ ತರಹದ ತಾರತಮ್ಯ ನಮ್ಮ ಅಪ್ಪ-ಅಮ್ಮ ಮಾಡಿರದೇ ಇದ್ದರೂ, ನಾನು ಹೆಣ್ಣು ಮಗಳಾಗಿರುವ ಕಾರಣ ಮನೆಗೆ ಬೇಗ ಬರಬೇಕಿತ್ತು, ಅದೇ ಅಣ್ಣನಿಗೆ ಆ ತರಹದ ಯಾವುದೇ ಕಟ್ಟುಪಾಡುಗಳು ಇರ್ಲಿಲ್ಲ. ಅದು ಬಹುಷಃ ನನ್ನ ಮೇಲಿನ ಕಾಳಜಿಯಿಂದಲೂ ಇರಬಹುದು. ಅದು ಬಿಟ್ರೆ, ಆ ತರಹದ ಕೆಟ್ಟ ಘಟನೆ ನನ್ನ ಜೀವನದಲ್ಲಿ ನಡೆದಿಲ್ಲ. 


4. ನಿಮ್ಮ ಪ್ರಕಾರ ಕನ್ಯಾದಾನ ಧಾರಾವಾಹಿಯನ್ನು ಪ್ರೇಕ್ಷಕರು ಯಾಕೆ ನೋಡಬೇಕು? 
ಕನ್ಯಾದಾನ ಧಾರಾವಾಹಿಯಲ್ಲಿ ಬರುವ ಎಲ್ಲಾ ಪಾತ್ರಗಳು ನಮ್ಮ ಜೀವನಕ್ಕೆ ಬಹಳ ಹತ್ತಿರವಾಗುತ್ತದೆ. ನಿಮಗೆ ಯಾವುದೋ ಧಾರಾವಾಹಿ ನೋಡ್ತಾ ಇದ್ದೀರಾ ಅನ್ನುವ ಫೀಲ್ ಕೊಡಲ್ಲ ಇದು, ಎಲ್ಲೋ ನಮ್ಮ ಅಕ್ಕ-ಅಪಕ್ಕದಲ್ಲಿ ನಡೆಯುವ ಕಥೆಯೇನೋ ಅಂತ ಅನ್ಸುತ್ತೆ. ಭಾವನೆಗಳನ್ನು ಮತ್ತು ಸಂಬಂಧಗಳನ್ನು ತುಂಬಾ ಸೂಕ್ಷ್ಮವಾಗಿ ಮತ್ತು ವಿಸ್ತಾರವಾಗಿ ತೋರ್ಸಿದ್ದಾರೆ. ಹಾಗಾಗಿ, ಕನ್ಯಾದಾನ ಧಾರಾವಾಹಿ ಪ್ರತಿಯೊಬ್ಬ ಪ್ರೇಕ್ಷಕನಿಗೂ ಹತ್ತಿರವಾಗುತ್ತೆ. ಕನ್ಯಾದಾನ ಸೋಮವಾರದಿಂದ ಶನಿವಾರದವರೆಗೆ ಸಂಜೆ 6ಕ್ಕೆ ’ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.