ರಾಕಿಂಗ್‌ ಸ್ಟಾರ್‌ ಯಶ್‌ (Yash) ಅಭಿನಯದ ಕೆಜಿಎಫ್‌ (KGF) ಹೆಸರು ಕೇವಲ ಸಿನಿಮಾ ಮಾತ್ರವಲ್ಲ ಅದೊಂದು ಬ್ರ್ಯಾಂಡ್‌ ಕ್ರಿಯೇಟ್‌ ಮಾಡಿದೆ. ಪ್ರಶಾಂತ್‌ ನೀಲ್‌ (Prashanth Neel) ನಿರ್ದೇಶನದ ಕೆಜಿಎಫ್‌ 1 ಹಾಗೂ 2 ಸಿನಿಮಾ ಜನರಲ್ಲಿ ಸಖತ್‌ ಕ್ರೇಜ್‌ ಹುಟ್ಟುಹಾಕಿದೆ. 2018ರಲ್ಲಿ ಬಂದ ಕೆಜಿಎಫ್‌ ಚಾಪ್ಟರ್‌ 1 ಮಾಡಿದ ಮೋಡಿ ಅಷ್ಟಿಷ್ಟಲ್ಲ. ಇದೀಗ ನರಾಚಿ ಲೋಕದ ಮತ್ತೊಂದು ಅಧ್ಯಾಯ ಹೊತ್ತು ಕೆಜಿಎಫ್‌ ಚಾಪ್ಟರ್‌ 2 ಬರುತ್ತಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ‘ಹೊಂದಿಸಿ ಬರೆಯಿರಿ’ ಟೀಸರ್ ರಿಲೀಸ್! ನಿಮ್ಮ ವಿದ್ಯಾರ್ಥಿ ಜೀವನ ನೆನಪಿಸುತ್ತೆ ಈ ಕತೆ


ನರಾಚಿ ಲೋಕದಲ್ಲಿ ಗರುಡನ ಹತ್ಯೆ ಬಳಿಕ ಏನಾಯ್ತು? ಎಂಬ ಕುತೂಹಲಕ್ಕೆ ಶೀಘ್ರದಲ್ಲೇ ಉತ್ತರ ಸಿಗಲಿದೆ. ಕೇವಲ ಪೋಸ್ಟರ್‌ ಮತ್ತು ಟೀಸರ್‌ ಮೂಲಕ ಸಿನಿ ಪ್ರಿಯರ ಕಾತುರ ಹೆಚ್ಚಿಸಿದ್ದ ಚಿತ್ರತಂಡ ಮಾರ್ಚ್‌ನಲ್ಲಿ ತೂಫಾನ್‌ ಲಿರಿಕಲ್‌ ಸಾಂಗ್‌ (Toofan Lyrical Song) ಮತ್ತು ಟ್ರೇಲರ್ ಮೂಲಕ ಅಭಿಮಾನಿಗಳಿಗೆ ಸಂತಸದ ಸುದ್ದಿ ನೀಡಿತು. 


ಇದೀಗ ಕೆಜಿಎಫ್ ತಂಡ ಹೊಸ ಅಪ್ಡೇಟ್ ನೀಡಿದೆ. ಚಿತ್ರದ ಮತ್ತೊಂದು ಹಾಡು ಇಂದು (ಏಪ್ರಿಲ್ 6) ಮಧ್ಯಾಹ್ನ 1 ಗಂಟೆಗೆ ಬಿಡುಗಡೆ ಆಗಲಿದೆ. "ಗಗನ ನೀ.." ಎಂಬ ಹಾಡು ಇಂದು ರಿಲೀಸ್‌ ಆಗಲಿದೆ. ಇದನ್ನು ವಾಯ್ಸ್ ಆಫ್ ಎವರಿ ಮದರ್ ಎಂದು ಚಿತ್ರತಂಡ ಬಣ್ಣಿಸಿದೆ.


 


Alia-Ranbir Marriage: ಕೊನೆಗೂ ಫಿಕ್ಸ್‌ ಆಯ್ತು ಬಾಲಿವುಡ್‌ ಕ್ಯೂಟ್‌ ಕಪಲ್‌ ವಿವಾಹ ದಿನಾಂಕ..! 


ಕೆಜಿಎಫ್ ಚಿತ್ರದ ಎರಡನೇ ಲಿರಿಕಲ್ ವಿಡಿಯೋ ಇಂದು ಮಧ್ಯಾಹ್ನ 1 ಗಂಟೆಗೆ ಬಿಡುಗಡೆ ಆಗಲಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ‌ನಾಲ್ಕು ಭಾಷೆಗಳಲ್ಲಿ ಈ ಹಾಡು ರಿಲೀಸ್ ಆಗುತ್ತಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.