Nanu Nandini New Reel : ಇತ್ತೀಚಿನ ದಿನಗಳಲ್ಲಿ ಯಾವುದೇ ಸೋಷಿಯಲ್‌ ಮೀಡಿಯಾ ಆಪ್ಲಿಕೇಶನ್‌ ಓಪನ್‌ ಮಾಡಿದರೂ ಸಾಕು ಕೇಳಿ ಬರುತ್ತಿದ್ದದು ಒಂದೇ ಅದೇ ʼನಾನು ನಂದಿನಿ ಬೆಂಗಳೂರಿಗ ಬಂದಿನಿʼ ಅನ್ನುವ ರೀಲ್‌


COMMERCIAL BREAK
SCROLL TO CONTINUE READING

ಸಾಮಾಜಿಕ ಜಾಲತಾಣದಲ್ಲಿ ಹೊಸ ರೀತಿಯ ವಿಭಿನ್ನ ರೀಲ್‌ಗಳನ್ನು ಮಾಡುತ್ತಿದ್ದ ವಿಕಿಪೀಡಿಯಾ ಅಲಿಯಾಸ್‌ ವಿಕಾಸ್‌ ಅವರು ಇತ್ತೀಗಷ್ಟೇ  ʼನಾನು ನಂದಿನಿ ಬೆಂಗಳೂರಿಗ ಬಂದಿನಿʼ ಎನ್ನುವ ರೀಲ್‌ ಒಂದನ್ನು ಮಾಡಿ ತಮ್ಮ ಇನ್ಸಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದರು. 


ಇದನ್ನು ಓದಿ - ರಾಜಕಾರಣಿ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಹೊರಿಸಿದ ವಿಜಯಲಕ್ಷ್ಮಿಗೆ ಸಂಕಷ್ಟ!


ಟ್ರಾಫಿಕ್‌ನ ತವರಾದ ಬೆಂಗಳೂರು, ಅಲ್ಲಿ ಪಿಜಿ ವಾಸವಾಗಿರುವ ಹುಡುಗಿಯರು, ಕಾರ್ಪೋರೇಟ್‌ ಜಗತ್ತಾಗಿರುವ ಸಿಲಿಕಾನ್‌ ಸಿಟಿಯ ಕುರಿತಾಗಿ "ಐಯಾಮ್ ಎ ಬಾರ್ಬಿ ಗರ್ಲ್ ಇನ್ ಎ ಬಾರ್ಬಿ ವರ್ಲ್ಡ್" ಎನ್ನುವ ಟ್ಯೂನ್‌ಗೆ ಹೋಲುವ ರೀತಿಯಲ್ಲಿ ಸಾಹಿತ್ಯ ರಚಿಸಿ, ಅದಕ್ಕೆ ಹೊಂದುವಂತೆ ಆಕ್ಟಿಂಗ್‌ ಮಾಡಿ ಜನಮನ ಸೆಳೆದಿದ್ದರು.



ವಿಕ್ಕಿಯ ಈ ವಿಡಿಯೋ ಸಾಕಷ್ಟು ಜನಪ್ರಿಯವಾಗಿದ್ದು, ಇದೇ ಟ್ಯೂನ್‌ಗೆ ಸಾಕಷ್ಟು ಬೇರೆ ರೀಲ್‌ಗಳೂ ಸಹ ಸೃಷ್ಟಿಯಾಗಿದ್ದವು. ಇದೇ ಸೆಪ್ಟೆಂಬರ್‌ 11ರಂದು ಪೋಸ್ಟ್‌ ಮಾಡಿದ್ದ ʼನಾನು ನಂದಿನಿ ಬೆಂಗಳೂರಿಗ ಬಂದಿನಿʼ ರೀಲ್‌ 21ಮಿಲಿಯನ್‌ ಗೂ ಹೆಚ್ಚಿನ ವೀಕ್ಷಣೆಯಾಗಿದ್ದು, ಒಂದೂವರೇ ಮಿಲಿಯನ್‌ಗಿಂತ ಅಧಿಕ ಲೈಕ್‌ಗಳನ್ನು ಪಡೆದುಕೊಂಡಿದೆ.


ಇದನ್ನು ಓದಿ - ʼಗಣಪತ್‌ʼಯ ಮತ್ತೊಂದು ಪೋಸ್ಟರ್‌ ಔಟ್‌ : ಟೀಸರ್‌ ರಿಲೀಸ್‌ಗೆ ಡೇಟ್‌ ಅನೌನ್ಸ್‌


ಈಗ ವಿಕಿಪೀಡಿಯಾ ಇಂದು (ಸೆ.27)ರಂದು ತಮ್ಮ ಇನ್ಸಸ್ಟಾಗ್ರಾಂ ಖಾತೆಯಲ್ಲಿ ಇನ್ನೊಂದು ರೀಲ್‌ ʼನಾನು ನಂದಿನಿ ಬೆಂಗಳೂರಿಗ ಬಂದಿನಿʼ ಎಂಬ ಲಿರಿಕ್ಸ್‌ ಅನ್ನು ಬದಲಾಯಿಸಿ ಅದೇ ಟ್ಯೂನ್‌ಗೆ ʼʼನಾನು ನಂದಿನಿʼ ಎಂದೇ ಪ್ರಾರಂಭವಾಗಿ ಶೋರೂಮ್‌ ಗೆ ಬಂದಿನಿ ಎಂದು ಮುಂದುವರೆಯುತ್ತದೆ. 


ಮಧ್ಯಾಹ್ನ ಸುಮಾರು 1 ಗಂಟೆಯ ಆಸುಪಾಸಿನಲ್ಲಿ ಈ ರೀಲ್‌ನ್ನು ಪೋಸ್ಟ್‌ ಮಾಡಲಾಗಿದ್ದು, ಕೇವಲ 3 ಗಂಟೆಯಲ್ಲೇ  75 ಸಾವಿರಕ್ಕೂ ಅಧಿಕ ಲೈಕ್‌ಗಳನ್ನು ಪಡೆದುಕೊಂಡಿದ್ದು, 2,79,000 ವೀಕ್ಷಣೆಯಾಗಿದೆ. ರೀಲ್‌ ಸಂಪೂರ್ಣವಾಗಿ ಒಂದು ಎಲೆಕ್ಟ್ರಿಕ್‌ ದ್ವಿಚಕ್ರ ವಾಹನದ ಕುರಿತು ತಿಳಿಸಿದ್ದು, ಅದರೊಂದಿಗೆ ಜನರಿಗೆ ಮನರಂಜನೆಯನ್ನು ನೀಡುತ್ತಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.