ನವದೆಹಲಿ: ಬಾಲಿವುಡ್ ನ ಹಿರಿಯ ನಟ ಈಗ ಪುಣೆ ಫಿಲ್ಮ್ ಸಂಸ್ಥೆಗೆ ರಾಜೀನಾಮೆ ನೀಡಿದ್ದಾರೆ.ಈಗ ಅವರು ರಾಜೀನಾಮೆ ನೀಡಿರುವ ವಿಷಯವನ್ನು ಅವರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಅಂತರಾಷ್ಟ್ರೀಯ ಟಿವಿ ಕಾರ್ಯಕ್ರಮಗಳಲ್ಲಿ ತಾವು ಕಾರ್ಯ ಪ್ರವೃತ್ತರಾಗಿರುವುದರಿಂದ ಸಂಸ್ಥೆ ಕಾರ್ಯಕ್ಕಾಗಿ ತಮಗೆ ಹೆಚ್ಚಿನ ಸಮಯವಿಲ್ಲ ಎಂದು ಅವರು ತಿಳಿಸಿದ್ದಾರೆ.ಈಗ ಅವರು ರಾಜೀನಾಮೆ ಪತ್ರವನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋರ್ ಗೆ ಸಲ್ಲಿಸಿದ್ದಾರೆ.



ಈ ಹಿಂದೆ ಸಚಿವರಾಗಿದ್ದ ಸ್ಮೃತಿ ಇರಾನಿ ಅವರು ಪುಣೆ ಫಿಲ್ಮ್ ಸಂಸ್ಥೆಗೆ ಚೇರ್ಮನ್ ಆಗುವುದಕ್ಕೆ ಅಹ್ವಾನ ನೀಡಿದ್ದಾಗ ತಾವು ಅಂತರಾಷ್ಟ್ರೀಯ ಟಿವಿ ಕಾರ್ಯಕ್ರಮಕ್ಕೆ ಕಮಿಟ್ ಆಗಿರುವ  ಬಗ್ಗೆ ತಿಳಿಸಿದ್ದರು ಎಂದು ಅವರು ಹೇಳಿದ್ದಾರೆ. ಆದರೆ ಈಗ ಈ ಟಿವಿ ಅವಧಿ ವಿಸ್ತರಣೆಯಾಗಿರುವ ಕಾರಣ ತಾವು 2018 ಮತ್ತು 2019 ರ ನಡುವೆ ಸುಮಾರು ಇನ್ನು ಒಂಬತ್ತು ತಿಂಗಳುಗಳ ಕಾಲ ಯುಎಸ್ ನಲ್ಲಿರಬೇಕಾಗುತ್ತದೆ. ಇದರಿಂದ ಸಂಸ್ಥೆಯ ಕಾರ್ಯ ಚಟುವಟಿಕೆಗೆ ಅಡ್ಡಿಯಾಗುತ್ತದೆ ಎನ್ನುವ ದೃಷ್ಟಿಯಿಂದ ತಾವು ರಾಜಿನಾಮೆ ನೀಡುತ್ತಿರುವುದಾಗಿ ಎಂದು ಅನುಪಮ್ ಖೇರ್ ತಿಳಿಸಿದ್ದಾರೆ. 


ಅನುಪಮ್ ಖೇರ್ ಅವರು ಗಜೇಂದ್ರ ಚೌಹಾನ್ ಅವರು ಪುಣೆ ಸಂಸ್ಥೆಯ ಚೇರ್ಮನ್ ಹುದ್ದೆಯಿಂದ ನಿರ್ಗಮಿಸಿದ ನಂತರ ಅಕ್ಟೋಬರ್ ತಿಂಗಳಲ್ಲಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು.ಈಗ ಅವರು ಅಮೆರಿಕಾದ ಟಿವಿ ಷೋ ನ್ಯೂ ಅಮಸ್ಟೆರ್ಡ್ಯಾಮ್ ನಲ್ಲಿ ಬ್ಯುಸಿಯಾಗಿದ್ದಾರೆ ಎಂದು ತಿಳಿದು ಬಂದಿದೆ.