Anupama Gowda Shares About Casting Couch: ಕನ್ನಡ ಕಿರುತೆರೆ ನಟಿ-ನಿರೂಪಕಿ ಅನುಪಮಾ ಗೌಡ ಚಿತ್ರರಂಗದಲ್ಲಿರುವ ಕಾಸ್ಟಿಂಗ್ ಕೌಚ್ ಎನ್ನುವ ಹೀನ ಸಂಸ್ಕೃತಿ ಬಗ್ಗೆ ತಮಗಾದ ಕೆಟ್ಟ ಅನುಭವದ ಬಗ್ಗೆ ಮಾತನಾಡಿದ್ದಾರೆ. ಅನುಪಮಾ ಗೌಡ ನಟಿಯಾಗುವ ಆಸೆಯಿಂದ ಬಂದವರು ನಿರೂಪಕಿಯಾಗಿಯೂ ಗಮನ ಸೆಳೆದರು. ಇಂದಿಗೂ ಈಕೆಗೆ ಒಳ್ಳೆ ನಟಿಯಾಗಬೇಕು ಎನ್ನುವ ತುಡಿತಯಿದ್ದು, ಇಲ್ಲಿಯವರೆಗೂ ಮೂರು ನಾಲಕ್ಕು ಧಾರವಾಹಿಯಲ್ಲಿ ಅಭಿನಯಿಸುವುದರ ಜೊತೆಗೆ ಹಲವಾರು ಸಿನಿಮಾಗಳಲ್ಲಿಯೂ ಬಣ್ಣ ಹಚ್ಚಿದ್ದಾರೆ.


COMMERCIAL BREAK
SCROLL TO CONTINUE READING

ಸಂದರ್ಶನವೊಂದರಲ್ಲಿ ನಟಿ ಅನುಪಮಾ ಗೌಡ, "ನಟನೆ ನನ್ನ ಮೊದಲ ಆದ್ಯತೆ. ನಿರೂಪಣೆ ನಂತರ. ಆದರೆ ನಟನೆಯಲ್ಲಿ ಏನನ್ನಾದರೂ ಸಾಧಿಸಬೇಕು ಎಂದು ಇವತ್ತಿಗೂ ಅನಿಸುತ್ತದೆ. ಧಾರಾವಾಹಿಗಳಲ್ಲಿ ನಟಿಸುವಂತೆ ಕೇಳುತ್ತಾರೆ. ಕೆಲವರು ಇವತ್ತಿಗೂ ನನ್ನ ಪಾತ್ರಗಳನ್ನು ನೆನಪಿಟ್ಟುಕೊಂಡಿದ್ದಾರೆ. ಚಿತ್ರರಂಗಕ್ಕೆ ಬರುವ ಉದ್ದೇಶ ಇರಲಿಲ್ಲ. ಇಲ್ಲಿ ಏನೇನೋ ಕೇಳುತ್ತಾರೆ. ಅವರನ್ನು ಭೇಟಿ ಆಗಬೇಕು, ಇವರ ಜೊತೆ ಮಾತನಾಡಬೇಕು ಎಂದು ಹೇಳುತ್ತಾರೆ. ಕಾಸ್ಟಿಂಗ್ ಕೌಚ್ ಎನ್ನುವುದು ಇತ್ತೀಚೆಗೆ ಕೇಳಿಲ್ಲ. ಆದರೆ ಮೀಟು ಅಭಿಯಾನ ಬಂದಾಗ ಶಾಕ್ ಆಗಿತ್ತು" ಎಂದು ಹೇಳಿದ್ದಾರೆ.


ಇದನ್ನೂ ಓದಿ: ರತ್ನಂ ವಿಮರ್ಶೆ : ಸಿನಿಮಾ ಹೇಳಲು ಹೊರಟಿರುವ ಕಥೆ ಪುರಾತನವಾದದ್ದು


ಅನುಪಮಾ ತಮಗಾದ ಕೆಟ್ಟ ಅನುಭವದ ಬಗ್ಗೆ ಮಾತನಾಡುತ್ತಾ, "ನನಗೂ ಇಂತಹ ಅನುಭವ ಆಗಿದೆ. ಒಮ್ಮೆ ನಿರ್ದೇಶಕರೊಬ್ಬರು ಕಥೆ ಹೇಳಬೇಕು ಎಂದಾಗ ಸ್ವಲ್ಪ ಅಡ್ಜೆಟ್ ಮಾಡ್ಕೊಬೇಕು ಅಂದ್ರು. ಏನು ಅಡ್ಜೆಟ್ ಮಾಡ್ಕೊಬೇಕು ಎಂದಾಗ ಎಲ್ಲಾ ಗೊತ್ತಲ್ವಾ ನಿಮ್ಗೆ ಎಂದಿದ್ದರು. ಇದು 'ಅಕ್ಕ' ಧಾರಾವಾಹಿ ಮಾಡುವಾಗ ನಡೆದಿದ್ದು. ಆಗಷ್ಟೆ 'ಮದರಂಗಿ' ಚಿತ್ರದಲ್ಲಿ ಕೃಷ್ಣ ಸಹೋದರಿ ಪಾತ್ರದಲ್ಲಿ ನಟಿಸಿದ್ದೆ. ಆ ಬಳಿಕ ಒಂದು ಚಿತ್ರಕ್ಕೆ ಕೇಳಿದರು. ಹೊಸಬರ ತಂಡ. ಪ್ರೊಡ್ಯೂಸರ್ ಜೊತೆ ಗೊತ್ತಲ್ವಾ? ಎಂದು ಕೇಳಿದರು. ನಾನು ಅಂತಹ ಸಿನ್ಮಾ ಬೇಡ ಎಂದೆ" ಎಂದು ವಿವರಿಸಿದ್ದಾರೆ.


ಕಾಸ್ಟಿಂಗ್‌ ಕೌಚ್‌ ಬಗ್ಗೆ ಹೇಳುತ್ತಾ "ಆ ಘಟನೆಗೂ ಮುನ್ನ ಇಂಥದ್ದೆ ಒಂದು ಘಟನೆ ಆಗಿತ್ತು. ಸಾಮ್ ದುಬೈ ಕಾರ್ಯಕ್ರಮಕ್ಕೆ ಗೆಸ್ಟ್ ಆಗಿ ಬರಬೇಕು. ಆ ಬಗ್ಗೆ ಮಾತನಾಡಲು ಕಾಫಿಡೇ ಅಲ್ಲಿ ಭೇಟಿ ಆಗಿದ್ದರು. ಈವೆಂಟ್ ಬಳಿಕ ಓನರ್ ಜೊತೆ ನೀವು ಡಿನ್ನರ್‌ಗೆ ಬರಬೇಕು ಅಂದ್ರು. ನಾನು ಓನರ್ ಜೊತೆ ಯಾಕೆ ಡಿನ್ನರ್‌ಗೆ ಎಂದು ಕೇಳಿದೆ. ಗೊತ್ತಲ್ಲ, ಇದಕ್ಕಿಂತ ಹೆಚ್ಚು ಹಣ ಕೊಡುತ್ತಾರೆ. ಹೇ ಎಷ್ಟು ಜನ ಮಾಡ್ತಾರೆ. ನಿಮಗೆ ಗೊತ್ತಿಲ್ವಾ? ಅಂದ್ರು. ಆತ ಒಂದಷ್ಟು ಹೆಸರುಗಳನ್ನು ಹೇಳಿದ್ದ" ಎಂದು ಅಚ್ಚರಿ ಸಂಗತಿಗಳನ್ನು ಹೊರಹಾಕಿದ್ದರು. 


ಇದನ್ನೂ ಓದಿ: ಪ್ರಜ್ವಲ್ ಪ್ರಕರಣವನ್ನು 'ಸಾವಿರಾರು ನಿರ್ಭಯಾ’ ಗಳಿಗೆ ಹೋಲಿಸಿ, ಅದಕ್ಕೆ ಮೋದಿ, ಬಿಜೆಪಿ ಹೊಣೆ ಮಾಡುವುದು ಹಾಸ್ಯಾಸ್ಪದ: ನಟ ಚೇತನ್


ನಟಿ ಅನುಪಮಾ ಗೌಡ "ಆತ ಹೇಳಿದ ಹೆಸರುಗಳನ್ನು ಕೇಳಿ ಶಾಕ್ ಆಗಿತ್ತು. ಅವತ್ತು ಕಾಫಿಡೇಯಿಂದ ಎದ್ದು ಹೊರ ಬರಲು ಕಷ್ಟವಾಯಿತು. ಬಹಳ ಅತ್ತಿದ್ದೆ. ಕಲಾವಿದರನ್ನೇ ಯಾಕೆ ಹೀಗೆ ಕೇಳುತ್ತಾರೆ? ನಡೆಸಿಕೊಳ್ಳುತ್ತಾರೆ ಎಂದು ಬೇಸರವಾಗಿತ್ತು. 2 ವರ್ಷದ ಹಿಂದೆ ಯಾರೋ ಹೇರ್‌ ಡ್ರೆಸರ್ ಎಂದು ಹೇಳಿ ಕರೆ ಮಾಡಿದ್ದರು. ಆಕೆ ಮೈಸೂರಿಂದ ಫೋನ್ ಮಾಡಿ, ಒಬ್ಬರು ನಿಮ್ಮನ್ನು ಕೇಳುತ್ತಿದ್ದಾರೆ. ಇಷ್ಟು ಕೊಡ್ತಾರಂತೆ ಎಂದು ಆಕೆ ಮೆಸೇಜ್ ಸಹ ಮಾಡಿದ್ದಳು. ನಾನು ಬೈದಿದ್ದೆ. ಕಾಲ್ ರೆಕಾರ್ಡ್ ಮಾಡಿದ್ದೆ" ಎಂದು ಫಟನೆ ಬಗ್ಗೆ ವಿವರವಾಗಿ ಬಿಚ್ಚಿಟ್ಟಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.