ರಾಮ್ ಪೋತಿನೇನಿ ಜೊತೆ ಮದುವೆಗೆ ಸಜ್ಜಾದ್ರಾ ಅನುಪಮಾ ಪರಮೇಶ್ವರನ್?
Anupama-Ram Potineni: ಪ್ರೇಮಂ ಸಿನಿಮಾದ ಮೂಲಕ ಅಭಿಮಾನಿಗಳ ಹೃದಯ ಕದ್ದ ನಟಿ ಅನುಪಮಾ ಪರಮೇಶ್ವರನ್ ರಾಮ್ ಪೋತಿನೇನಿ ಜೊತೆ ಮದುವೆಗೆ ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ.
Tollywood News: ಸಿನಿರಂಗದಲ್ಲಿ ಇತ್ತೀಚೆಗಂತೂ ಹಲವಾರು ನಟ ನಟಿಯರ ಹೆಸರು ಮದುವೆ ಗಾಸಿಪ್ನಲ್ಲಿ ತಳುಕುಹಾಕಿಕೊಳ್ಳುತ್ತಿವೆ. ಕೆಲವು ದಿನಗಳ ಹಿಂದೆ ಕೀರ್ತಿ ಸುರೇಶ್ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ ಜೊತೆ ಮದುವೆಯಾಗಲಿದ್ದಾರೆ ಎನ್ನುವ ಗುಸುಗುಸು ಹರಿದಾಡುತ್ತಿದ್ದವು. ಆದರೆ ಇದಕ್ಕೆ ಸ್ವತಃ ಅವರೇ ಪ್ರತಿಕ್ರಿಯಿಸಿ ಫುಲ್ಸ್ಟಾಪ್ ಇಟ್ಟಿದ್ದರು.
ಅದೇ ರೀತಿ ಇದೀಗ ಟಾಲಿವುಡ್ ಅಂಗಳದಲ್ಲಿ ಮತ್ತೊಂದು ಗಾಸಿಪ್ ಹರಿದಾಡುತ್ತಿದ್ದು, ಅದೇ ‘ಪ್ರೇಮಂ’ ಚಿತ್ರದ ನಾಯಕಿ ಅನುಪಮಾ ಪರಮೇಶ್ವರನ್ ಹಾಗೂ ರಾಮ್ ಪೋತಿನೇನಿ ಮದುವೆಯಾಗಲಿದ್ದಾರೆ ಅನ್ನೋದು. ಹೌದು ತೆಲುಗಿನ ನಟ ರಾಮ್ ಪೋತಿನೇನಿ ಜೊತೆ ಅನುಪಮಾ ಮದುವೆ ಆಗಲಿದ್ದಾರೆ ಎನ್ನುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ಜೋರಾಗಿದೆ.
ಇದನ್ನೂ ಓದಿ-Prabhas Anushka : ಹೆಂಡತಿ ಮಕ್ಕಳೊಂದಿಗಿನ ಪ್ರಭಾಸ್ ಫೋಟೋ ವೈರಲ್..!
ಹೀಗೆ ಈ ಹಿಂದೆಯೊಂದು ಬಾರಿ ಕ್ರಿಕೆಟರ್ ಜಸ್ಟ್ರಿತ್ ಬುಮ್ರಾ ಜೊತೆ ಅನುಪಮಾ ಹೆಸರು ತಳುಕುಹಾಕಿಕೊಂಡಿತ್ತು. ಆದರೆ ಅದು ಸುಳ್ಳು ಎಂದು ಸ್ವತಃ ಅವರೇ ಸ್ಪಷ್ಟನೆ ನೀಡಿದ್ದರು. ಇದೀಗ ತೆಲುಗು ನಟ ರಾಮ್ ಪೋತಿನೇನಿ ಜತೆ ಸಪ್ತಪದಿ ತುಳಿಯಲಿದ್ದಾರೆ ಎನ್ನಲಾಗುತ್ತಿದೆ.
ಈ ಜೋಡಿ 2018ರಲ್ಲಿ ‘ಹಲೋ ಗುರು ಪ್ರೇಮ ಕೋಸಮೆ’ ಎನ್ನುವ ಸಿನಿಮಾದಲ್ಲಿ ತೆರೆಹಂಚಿಕೊಂಡಿದ್ದರು. ಚಿತ್ರೀಕರಣದ ಸಂದರ್ಭದಲ್ಲಿ ರಾಮ್ ಹಾಗೂ ಅನುಪಮಾಗೆ ಲವ್ ಆಗಿದ್ದು, ಹಲವಾರು ವರ್ಷಗಳಿಂದ ಡೇಟಿಂಗ್ನಲ್ಲಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ-Vijay Thalapathy: ಲಿಯೋದಲ್ಲಿ ಅಷ್ಟೊಂದು ಅಶ್ಲೀಲತೆ? ವಿಜಯ್ ಚಿತ್ರಕ್ಕೆ ಸೆನ್ಸಾರ್ ಶಾಕ್!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.