ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸಾಮೂಹಿಕ ಹಿಂಸಾಚಾರದ ವಿಚಾರವಾಗಿ ಪತ್ರ ಬರೆದ 49 ವ್ಯಕ್ತಿಗಳಲ್ಲಿ ಈಗ 9 ವ್ಯಕ್ತಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.


COMMERCIAL BREAK
SCROLL TO CONTINUE READING

ಈ ಹಿನ್ನಲೆಯಲ್ಲಿ ಈಗ ಟ್ವಿಟ್ ಮಾಡಿರುವ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ' ಒಂದು ಪತ್ರ ಎಷ್ಟು ಪ್ರಮಾಣದಲ್ಲಿ ಪ್ರಭಾವ ಬಿರಿದೆ ಎಂದರೆ ಇಡೀ ಟ್ರೋಲ್ ಆರ್ಮಿ ಈಗ ಸುಳ್ಳು ನಿರೂಪನೆಗಳನ್ನು ಹಾಗೂ ಆರೋಪಗಳನ್ನು ಪ್ರಧಾನಿಗೆ ಬರೆದಿರುವ ಪತ್ರದಲ್ಲಿ ಸಹಿ ಮಾಡಿರುವ ವ್ಯಕ್ತಿಗಳ ಮೇಲೆ ಸತ್ಯಕ್ಕೆ ಪ್ರತಿಯಾಗಿ ಮಾಡಲಾಗಿದೆ. ಒಂದು ವೇಳೆ ನಾವೆಲ್ಲರು ಆಡಳಿತದ ಎಲ್ಲ ಕಾರ್ಯಗಳನ್ನು ಪ್ರಶ್ನೆ ಮಾಡಲು ಪ್ರಾರಂಭಿಸಿದರೆ ಏನಾಗಬಹುದು ಎಂದು ನೀವೇ ಕಲ್ಪಿಸಿಕೊಳ್ಳಿ ' ಎಂದು ಅವರು ಟ್ವಿಟ್ ಮಾಡಿದ್ದಾರೆ.



ಅನುರಾಗ್ ಕಶ್ಯಪ್ ಅವರ ಹೇಳಿಕೆ ಪ್ರಮುಖವಾಗಿ ಸುಧೀರ್ ಓಜಾ ಎನ್ನುವ ವಕೀಲೊಬ್ಬರು ಶನಿವಾರದಂದು ಕೊಂಕಣ ಸೆನ್ ಶರ್ಮಾ ಹಾಗೂ ಅಪರ್ಣಾ ಸೆನ್ ಸಹಿತ 9 ವ್ಯಕ್ತಿಗಳ ಮೇಲೆ ದೂರನ್ನು ದಾಖಲಿಸಿರುವ ಹಿನ್ನಲೆಯಲ್ಲಿ ಬಂದಿದೆ. ಈ ಕುರಿತಾಗಿ ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ವಕೀಲ ಈ ಪ್ರಕರಣದ ವಿಚಾರಣೆ ಅಗಸ್ಟ್ 3 ಕ್ಕೆ ಬರಲಿದೆ ಎಂದು ಹೇಳಿದ್ದಾರೆ.ವಕೀಲನು ತಮ್ಮ ದೂರಿನಲ್ಲಿ ಭಾರತದ ಸಮಗ್ರತೆ ಹಾಗೂ ವಿದೇಶದಲ್ಲಿ ದೇಶದ ಚಿತ್ರಣಕ್ಕೆ ಧಕ್ಕೆಯನ್ನುಂಟು ಮಾಡುತ್ತದೆ ಎಂದು ಆರೋಪಿಸಿದ್ದಾರೆ.


ದೇಶದಲ್ಲಿ ದಲಿತರು, ಅಲ್ಪಸಂಖ್ಯಾತರು,ಮೇಲೆ ಹೆಚ್ಚುತ್ತಿರುವ ಸಾಮೂಹಿಕ ಹಿಂಸಾಚಾರವನ್ನು ಖಂಡಿಸಿ 49 ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಜ್ಞರು ಪ್ರಧಾನಿ ನರೇಂದ್ರ ಮೋದಿಯವರಿಗೆ ಜುಲೈ 23 ರಂದು ಪತ್ರ ಬರೆದಿದ್ದರು. ಈ ಹಿನ್ನಲೆಯಲ್ಲಿ ಈಗ ವಕೀಲರೊಬ್ಬರು ಅವರ ಮೇಲೆ ದೂರನ್ನು ದಾಖಲಿಸಿದ್ದಾರೆ.