ನವದೆಹಲಿ: ಕ್ರಿಕೆಟ್ ನಲ್ಲಿ  ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿ ಸಹ ಆಟಗಾರರು ಎನ್ನುವುದು ಎಲ್ಲರಿಗೂ ಮತ್ತು ಇಡೀ ಜಗತ್ತಿಗೂ ತಿಳಿದಿರುವ ವಿಷಯ. ದರೆ ಈಗ ನಾವು ಇಲ್ಲಿ ಹೇಳ ಹೊರಟಿರುವ ವಿಷಯ ಇದಲ್ಲ. ಬದಲಾಗಿ ಇವರಿಬ್ಬರ ಪತ್ನಿಯರು ಶಾಲೆಯೊಂದರಲ್ಲಿ ಸಹಪಾಠಿಗಳು ಎನ್ನುವುದನ್ನು ನಾವು ಹೇಳುತ್ತಿದ್ದೇವೆ.


COMMERCIAL BREAK
SCROLL TO CONTINUE READING

ಹೌದು, ಈ ಇದಕ್ಕೆ ಸಾಕ್ಷಿ ಎನ್ನುವಂತೆ ಇಬ್ಬರ ಬಾಲ್ಯದಲ್ಲಿರುವ ಫೋಟೋಗಳು ಕೂಡ ಈಗ ವೈರಲ್ ಆಗಿವೆ. ವರದಿಗಳ ಪ್ರಕಾರ ಇಬ್ಬರು ಕೂಡ ಅಸ್ಸಾಂ ನಲ್ಲಿರುವ ಮಾರ್ಗೆರಿಟಾದ ಸೆಂಟ್ ಮೇರಿ ಸ್ಕೂಲ್ ನಲ್ಲಿ ಸಹಪಾಠಿಗಳು ಎನ್ನುವ ವಿಷಯ ಈಗ ತಿಳಿದುಬಂದಿದೆ. 



ಈ ವಿಚಾರವಾಗಿ 2013 ರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅನುಷ್ಕಾ ಶರ್ಮಾ, ಸಾಕ್ಷಿ ಧೋನಿ ಯವರ ಸಹಪಾಠಿಯಾಗಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ.ಈ ಹೇಳಿಕೆಯಲ್ಲಿ ದಾಖಲಾಗಿರುವಂತೆ " ಸಾಕ್ಷಿ ಮತ್ತು ನಾನು ಇಬ್ಬರು ಅಸ್ಸಾಂ ನಲ್ಲಿರುವ ಒಂದು ಸಣ್ಣ ಪಟ್ಟಣದಲ್ಲಿ ವಾಸಿಸುತ್ತಿದ್ದೆವು. ಆಗ ಆಕೆ ಎಲ್ಲಿ ಎಂದು  ಕೇಳಿದಾಗ ನಾನು ಓ ! ಎಂದು ನಾನು ಕೂಡ ಅಲ್ಲಿಯೇ ವಾಸಿಸುತ್ತಿದ್ದೆ ಎಂದೇ, ಆಗ ನಾನು ಈ ಶಾಲೆಗೇ ಹೋಗಿದ್ದೆ ಎಂದರು, ಆಗ ನಾನು ಕೂಡ ಇದೇ ಶಾಲೆಗೇ ಹೋಗಿದ್ದು ಎಂದು ಹೇಳಿದೆ" ಎಂದು ಅನುಷ್ಕಾ ಈ ಹಿಂದೆ ಈ ವಿಚಾರವಾಗಿ ಹೇಳಿಕೊಂಡಿದ್ದಾರೆ.


ಇನ್ನು ಮುಂದುವರೆದು "ಅನಂತರ ನಾನು ಸಾಕ್ಷಿ ಆಕರ್ಷಕ ಬಟ್ಟೆಯಲ್ಲಿದ್ದರೆ ನಾನು ನನ್ನ ಫೆವರೆಟ್ ಮಾಧುರಿ ದೀಕ್ಷಿತ್ ರ ಘಘರಾ ರೀತಿಯಲ್ಲಿ ಉಡುಗೆ ಧರಿಸಿದ್ದೆನೆ, ಸಾಕ್ಷಿ ನಿಜಕ್ಕೂ ಫನ್ನಿ" ಎಂದು ಅನುಷ್ಕಾ ಹಳೆಯ ನೆನಪು ಹಂಚಿಕೊಂಡಿದ್ದಾರೆ.