ನವದೆಹಲಿ: ಸೆಲೆಬ್ರಿಟಿ ದಂಪತಿಗಳಾದ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇತ್ತೀಚೆಗೆ ಸೋಶಿಯಲ್ ಮೀಡಿಯಾ ಇನ್‌ಸ್ಟಾಗ್ರಾಮ್‌ನ ಜನಪ್ರಿಯ ‘ಟೇಕ್ ಎ ಬ್ರೇಕ್’ ಸರಣಿಯಲ್ಲಿ ಕಾಣಿಸಿಕೊಂಡ ಮೊದಲ ಭಾರತೀಯರು ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದೇ ವೇಳೆ ವಿಶ್ವದ ಅತಿದೊಡ್ಡ ಸಾಮಾಜಿಕ ಮಾಧ್ಯಮ ವೇದಿಕೆಯೂ ಸಹ ಅವರನ್ನು ಫಾಲೋ ಮಾಡುತ್ತಿರುವುದು ಬೆಳಕಿಗೆ ಬಂದಿದೆ!


COMMERCIAL BREAK
SCROLL TO CONTINUE READING

ಇನ್‌ಸ್ಟಾಗ್ರಾಮ್ ಹ್ಯಾಂಡಲ್ ವಿಶ್ವದ 59 ಐಕಾನ್‌ಗಳನ್ನು ಮಾತ್ರ ಅನುಸರಿಸುತ್ತದೆ ಮತ್ತು ವಿರಾಟ್ ಮತ್ತು ಅನುಷ್ಕಾ ಈಗ ಈ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.


ಇದನ್ನು ಓದಿ: ವಿರಾಟ್ ಕೊಹ್ಲಿ ಜೀವನವನ್ನೇ ಬದಲಿಸಿತಂತೆ ಈ ಒಂದು ನಿರ್ಧಾರ


ಲಕ್ಷಾಂತರ ಅಭಿಮಾನಿಗಳಿಂದ ವಿರುಷ್ಕಾ ಎಂದು ಕರೆಯಲ್ಪಡುವ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ತಮ್ಮ ಕ್ಷೇತ್ರಗಳಲ್ಲಿ ಹೆಚ್ಚು ಪ್ರಭಾವಶಾಲಿ ವ್ಯಕ್ತಿಗಳಾಗಿದ್ದಾರೆ ಮತ್ತು ಇವರಿಬ್ಬರು ತಮ್ಮ ವೃತ್ತಿಜೀವನದಲ್ಲಿ ತಮ್ಮದೇ ಆದ ರೀತಿಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಮತ್ತು ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ. ಅವರ ಇತ್ತೀಚಿನ ಐಜಿಟಿವಿ ವೀಡಿಯೊದಲ್ಲಿ, ಅವರು ಪರಸ್ಪರ ಕ್ವಿಜ್ ಪ್ರಶ್ನೆಗಳನ್ನು ಕೇಳುವುದು ಮತ್ತು ಅವರ ಬಗ್ಗೆ ಕೆಲವು ಮೋಜಿನ ಸಂಗತಿಗಳನ್ನು ಮೆಲುಕು ಹಾಕುವುದು ಕಂಡುಬಂತು.


ಈ ದಂಪತಿಗಳು ಸೆಲೆನಾ ಗೊಮೆಜ್, ಮಿಲೀ ಸೈರಸ್ ಮತ್ತು ನವೋಮಿ ಕ್ಯಾಂಪ್‌ಬೆಲ್ ಅವರಂತಹ ಜಾಗತಿಕ ಐಕಾನ್‌ಗಳಿಗೆ ಸೇರಿಕೊಂಡರು, ಈ ಹಿಂದೆ ಅದೇ 'ಟೇಕ್ ಎ ಬ್ರೇಕ್' ಸರಣಿಯಲ್ಲಿ ಕಾಣಿಸಿಕೊಂಡಿದ್ದಾರೆ.