Virat Kohli and Anushka Sharma Net Worth: ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ.. ಇಬ್ಬರೂ  ಖ್ಯಾತ ಸೆಲೆಬ್ರಿಟಿಗಳು. ಒಬ್ಬರು ಕ್ರೀಡಾ ಲೋಕವಾದರೆ, ಇನ್ನೊಬ್ಬರು ಮನರಂಜನಾ ಉದ್ಯಮ. ಇಬ್ಬರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಗಣನೀಯವಾದ ಸಾಧನೆ ಮಾಡಿದ್ದಾರೆ. ಅವರಿಬ್ಬರೂ ವಾರ್ಷಿಕವಾಗಿ ಎಷ್ಟು ಸಂಪಾದಿಸುತ್ತಾರೆ ಎಂದು ತಿಳಿಯುವುದು ಅನೇಕ ಜನರ ಕುತೂಹಲವಾಗಿದೆ. ಅವರು ಎಷ್ಟು ಸಂಪಾದಿಸುತ್ತಾರೆ ಮತ್ತು ಅವರ ಆಸ್ತಿ ಎಷ್ಟು ಎಂದು ತಿಳಿದರೆ ನೀವು ಶಾಕ್ ಆಗುತ್ತೀರಿ.  


COMMERCIAL BREAK
SCROLL TO CONTINUE READING

ವರದಿ ಪ್ರಕಾರ, ಕ್ರಿಕೆಟರ್‌ ವಿರಾಟ್ ಕೊಹ್ಲಿಯ ನಿವ್ವಳ ಆದಾಯ 1,050 ಕೋಟಿ ರೂಪಾಯಿ ಆಗಿದೆ. ಅನುಷ್ಕಾ ಶರ್ಮಾರ ನಿವ್ವಳ ಆದಾಯ 250-300 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಒಟ್ಟಾಗಿ ಇಬ್ಬರ ನಿವ್ವಳ ಆದಾಯ ಸೇರಿದರೆ 1,300 ಕೋಟಿ ರೂಪಾಯಿ ಆಗಿದೆ.


ಕೊಹ್ಲಿ- ಶರ್ಮಾರ ವ್ಯಾಪಾರಗಳು


ವಿರಾಟ್ ಕೊಹ್ಲಿ ಎಂಪಿಎಲ್, ಸ್ಪೋರ್ಟ್ಸ್‌ ಕಾನ್ವೊ, ಯುನಿವರ್ಸಲ್ ಸ್ಪೋರ್ಟ್ಸ್‌ಬಿಜ್ ಸೇರಿದಂತೆ ಹಲವಾರು ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ. ಒನ್‌8, Wrogn ಮತ್ತು ಸ್ಟೆಪಥ್ಲಾನ್ ಎಂಬ ಕ್ಲೋಥಿಂಗ್ ಬ್ರ್ಯಾಂಡ್‌ಗಳ ಜೊತೆಗೆ ಒನ್8 ಕಮ್ಯೂನ್‌ ಮತ್ತು ನ್ಯೂವಾ ಎಂಬ ರೆಸ್ಟೋರೆಂಟ್‌ಗಳನ್ನು ಸಹ ನಡೆಸುತ್ತಾರೆ. ಎಫ್‌ಸಿ ಗೋವಾ ಫುಟ್‌ಬಾಲ್ ಕ್ಲಬ್ ಹಾಗೂ ಟೆನ್ನಿಲ್ ಮತ್ತು ಪ್ರೋ-ವ್ರೆಸ್ಲಿಂಗ್ ತಂಡವನ್ನು ವಿರಾಟ್‌ ನಡೆಸುತ್ತಾರೆ. ಇದು ಕೂಡ ಅವರ ಆದಾಯದ ಮೂಲವಗಿದೆ. ಅನುಷ್ಕಾ ಶರ್ಮಾ ಆರ್ಗನಿಕ್ ಫುಡ್ ಸಂಸ್ಥೆಯಾದ ಸ್ಲರ್ಪ್ ಫಾರ್ಮ್‌, ಕ್ಲೋಥಿಂಗ್ ಸಂಸ್ಥೆ ನುಶ್, ಕ್ಲೀನ್‌ ಸ್ಲೇಟ್‌ ಫಿಲ್ಮ್ಜ್‌ ಪ್ರೊಡಕ್ಷನ್‌ ಹೌಸ್ ಅನ್ನು ನಡೆಸುವ ಮೂಲಕವೂ ಆದಾಯ ಗಳಿಸುತ್ತಾರೆ. 


ಇದನ್ನೂ ಓದಿ :  ಬಹುನಿರೀಕ್ಷಿತ Emergency ಚಿತ್ರದ ರಿಲೀಸ್‌ ಡೇಟ್‌ ಫಿಕ್ಸ್..‌ 'ಇಂದಿರಾ ಈಸ್ ಇಂಡಿಯಾ, ಇಂಡಿಯಾ ಈಸ್ ಇಂದಿರಾ' ಎಂದ ಕಂಗನಾ


ಈ ಬ್ರ್ಯಾಂಡ್‌ಗಳ ಪ್ರಚಾರ ಮಾಡ್ತಾರೆ ವಿರುಷ್ಕಾ 


ವಿವೋ, ಸ್ಟಾರ್ ಸ್ಪೋರ್ಟ್ಸ್, ಪೂಮಾ, ಎಂಆರ್‌ಎಫ್‌, ಡಿಜಿಟ್ ಇನ್ಶುರೆನ್ಸ್, ಸಿಂಥಾಲ್, ಊಬರ್ ಸೇರಿದಂತೆ ಒಟ್ಟಾಗಿ 26 ಬ್ರ್ಯಾಂಡ್‌ಗಳನ್ನು ವಿರಾಟ್ ಕೊಹ್ಲಿ ಪ್ರಚಾರ ಮಾಡುತ್ತಾರೆ. ಪೂಮಾ, ಮಿಂತ್ರಾ, ಕ್ಲಿಯರ್, ಲಕ್ಸ್‌ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ಅನುಷ್ಕಾ ಶರ್ಮಾ ಆದಾಯ ಗಳಿಸುತ್ತಾರೆ. 


ವರದಿಯ ಪ್ರಕಾರ, ಒಂದು ಜಾಹೀರಾತಿಗೆ ಪ್ರತಿ ವರ್ಷಕ್ಕೆ 7.50-10 ಕೋಟಿ ರೂಪಾಯಿ ಶುಲ್ಕ ವಿಧಿಸುತ್ತಾರೆ ವಿರಾಟ್ ಕೊಹ್ಲಿ. ಇನ್‌ಸ್ಟಾಗ್ರಾಂ ಪೋಸ್ಟ್‌ಗಾಗಿ ಸುಮಾರು 8.9 ಕೋಟಿ ರೂಪಾಯಿ ಮತ್ತು ಟ್ವಿಟ್ಟರ್‌ ಪೋಸ್ಟ್‌ನಲ್ಲಿ 2.5 ಕೋಟಿ ರೂಪಾಯಿ ಆದಾಯವನ್ನು ಕೊಹ್ಲಿ ಗಳಿಸುತ್ತಾರೆ. ಅಲ್ಲದೇ, "A+" ಗ್ರೇಡ್ ಕಾಂಟ್ರಾಕ್ಟ್ ಅಡಿಯಲ್ಲಿ ಬಿಸಿಸಿಐನಿಂದ ಕೊಹ್ಲಿ ವಾರ್ಷಿಕವಾಗಿ 7 ಕೋಟಿ ರೂಪಾಯಿ ಪಡೆಯುತ್ತಾರೆ. ಟೆಸ್ಟ್‌ ಮ್ಯಾಚ್‌ಗಾಗಿ 15 ಲಕ್ಷ ರೂಪಾಯಿ, ಒಡಿಐಗೆ 6 ಲಕ್ಷ ರೂಪಾಯಿ, T20  ಗೆ 3 ಲಕ್ಷ ರೂಪಾಯಿ ಮತ್ತು ಐಪಿಎಲ್‌ನಲ್ಲಿ ವಿರಾಟ್‌ ಕೊಹ್ಲಿ ವಾರ್ಷಿಕವಾಗಿ ಆರ್‌ಸಿಬಿ ತಂಡದಿಂದ ಸುಮಾರು 15 ಕೋಟಿ ರೂಪಾಯಿ ಆದಾಯ ಕೊಹ್ಲಿಗೆ ಬರುತ್ತದೆ. 


ಅನುಷ್ಕಾ ಶರ್ಮಾ ಪ್ರತಿ ಸಿನಿಮಾಕ್ಕೆ 7 ಕೋಟಿ ರೂಪಾಯಿ ಸಂಭಾವನೆ, ಜಾಹೀರಾತಿನಿಂದ 5-10 ಕೋಟಿ ರೂಪಾಯಿ ಆದಾಯ ಪಡೆಯುವರು.  


ವಿರಾಟ್ - ಅನುಷ್ಕಾ ಕಾರು, ಬಂಗಲೆ


ವರದಿ ಪ್ರಕಾರ, ವಿರಾಟ್ ಮತ್ತು ಅನುಷ್ಕಾ ಮುಂಬೈನಲ್ಲಿ 34 ಕೋಟಿ ರೂಪಾಯಿ ಮೌಲ್ಯದ ಮನೆ ಮತ್ತು ಗುರ್ಗಾಂವ್‌ನಲ್ಲಿ 80 ಕೋಟಿ ರೂಪಾಯಿ ಮೌಲ್ಯದ ಬಂಗಲೆ, ಅಲಿಬಾಗ್‌ನಲ್ಲಿ 19 ಕೋಟಿ ರೂಪಾಯಿಗಳ ಫಾರ್ಮ್‌ಹೌಸ್‌ನ ಒಡೆಯರಾಗಿದ್ದಾರೆ. ಹಲವಾರು ಐಷಾರಾಮಿ ಕಾರುಗಳು ಇವರ ಬಳಿಯಿವೆ. ಆಡಿ R8, ಆಡಿ A8 L, ಆಡಿ Q8, ಆಡಿ Q7, ಆಡಿ RS 5, ಆಡಿ S5, ರೇಂಜ್ ರೋವರ್ ವೋಗ್, ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಮತ್ತು ಬೆಂಟ್ಲಿ ಕಾಂಟಿನೆಂಟಲ್ GT ಸೇರಿದಂತೆ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಕಾರುಗಳಿವೆ. 


ಇದನ್ನೂ ಓದಿ : Actors Who Were cricketers: ನಟನೆಗೂ ಮೊದಲು ವೃತ್ತಿಪರ ಕ್ರಿಕೆಟಿಗರಾಗಿದ್ದ ಸೆಲೆಬ್ರಿಟಿಗಳಿವರು!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.