Pregnant ಪತ್ನಿ Anushka Sharmaಳಿಂದ ಶಿರ್ಷಾಸನ ಮಾಡಿಸಿದ ಪತಿ Virat Kohli, PIC ವಿಕ್ಷೀಸಿ
ಖ್ಯಾತ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಿಂದ ವಿರಾಟ್ ಕೊಹ್ಲಿ ಜೊತೆಗಿರುವ ಭಾವಚಿತ್ರವೊಂದನ್ನು ಹಂಚಿಕೊಂಡಿದ್ದಾಳೆ. ಈ ಭಾವಚಿತ್ರದಲ್ಲಿ ವಿರಾಟ್ ಕೊಹ್ಲಿ ತನ್ನ ಗರ್ಭಿಣಿ ಪತ್ನಿ ಅನುಷ್ಕಾ ಅವರಿಗೆ ಶೀರ್ಷಾಸನ ಮಾಡಿರುವಲ್ಲಿ ಸಹಾಯ ಮಾಡುತ್ತಿರುವುದನ್ನು ನೀವು ನೋಡಬಹುದು.
ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ (Anushka Sharma) 2021 ರ ಜನವರಿಯಲ್ಲಿ ಪೋಷಕರಾಗಲಿದ್ದಾರೆ. ಗರ್ಭಾವಸ್ಥೆಯಲ್ಲಿ, ಲಾಕ್ ಡೌನ್ ಸಮಯದಲ್ಲಿ ಅನುಷ್ಕಾ ತಮ್ಮನ್ನು ತಾವು ತುಂಬಾ ಫಿಟ್ ಆಗಿ ಇಟ್ಟು ಕೊಂಡಿದ್ದಾರೆ. ಇದೆ ಕಾರಣದಿಂದ ಗರ್ಭಾವಸ್ಥೆಯ ಕೊನೆಯಲ್ಲಿಯೂ ಸಹ ಅವಳು ಆರಾಮವಾಗಿ ಶೂಟ್ ಮಾಡಿದ್ದಾರೆ. ಅನುಷ್ಕಾ ತನ್ನ ಅಧಿಕೃತ ಇನ್ಸ್ಟಾಗ್ರಾಮ್ನಿಂದ ವಿರಾಟ್ ಕೊಹ್ಲಿ ಅವರೊಂದಿಗೆ ಒಂದು ಭಾವಚಿತ್ರವನ್ನು ಹಂಚಿಕೊಂಡಿದ್ದಾರೆ. ಈ ಭಾವಚಿತ್ರದಲ್ಲಿ ವಿರಾಟ್ ಕೊಹ್ಲಿ ತಮ್ಮ ಗರ್ಭಿಣಿ ಪತ್ನಿ ಅನುಷ್ಕಾ ಶರ್ಮಾಗೆ ಶೀರ್ಷಾಸನ ಮಾಡುವಲ್ಲಿ ಸಹಾಯ ಮಾಡುತ್ತಿದ್ದಾರೆ.
ಇದನ್ನು ಓದಿ- ವಿರಾಟ್ ಕೊಹ್ಲಿ ಟ್ವೀಟ್ ಗೆ Netflix ಪ್ರತಿಕ್ರಿಯಿಸಿದ್ದು ಹೀಗೆ...!
ಚಿತ್ರವನ್ನು ಪೋಸ್ಟ್ ಮಾಡಿರುವ ಅನುಷ್ಕಾ ಶರ್ಮಾ (Anushka Sharma), 'ಈ ವ್ಯಾಯಾಮ (ಇದರಲ್ಲಿ ಕೈಗಳು ಕೆಳಗಿವೆ ಮತ್ತು ಕಾಲುಗಳು ಮೇಲಕ್ಕೆ ಇರುತ್ತವೆ) ಅತ್ಯಂತ ಕಷ್ಟಕರವಾಗಿತ್ತು. ಇದು ಹಳೇ ಭಾವಚಿತ್ರವಾಗಿದೆ. ಯೋಗವು ನನ್ನ ಜೀವನದ ಒಂದು ದೊಡ್ಡ ಭಾಗ, ಗರ್ಭಾವಸ್ಥೆಯಲ್ಲಿಯೂ ಕೂಡ ನಾನು ಮಾಡುತ್ತಿದ್ದ ಎಲ್ಲಾ ಆಸನಗಳನ್ನು ಮುಂದುವರೆಸಬೇಕು ಎಂದು ನನ್ನ ವೈದ್ಯರು ಸಲಹೆ ನೀಡಿದ್ದರು. ಹೆಚ್ಚು ಬಾಗುವುದು ಮತ್ತು ಬಗ್ಗುವದನ್ನು ಹೊರತುಪಡಿಸಿ ಆಸನಗಳನ್ನು ಯಾರಾದರೊಬ್ಬರ ಸಹಾಯ ಪಡೆದು ಮಾಡಬಹುದು ಎಂದು ಹೇಳಿದ್ದರು. ಕಳೆದ ಹಲವಾರು ವರ್ಷಗಳಿಂದ ನಾನು ಮಾಡುತ್ತಿರುವ ಶೀರ್ಷಾಸನಕಾಗಿ ನಾನು ಗೋಡೆ ಮತ್ತು ನನ್ನ ಸಮರ್ಥ ಪತಿ ವಿರಾಟ್ ಕೊಹ್ಲಿ(Virat Kohli) ಅವರ ಬೆಂಬಲದೊಂದಿಗೆ ಸಮತೋಲನವನ್ನು ಮಾಡಿದ್ದೇನೆ, ಇದು ನನಗೆ ಹೆಚ್ಚುವರಿ ಸುರಕ್ಷತೆ ಒದಗಿಸಿದೆ' ಎಂದು ಬರೆದುಕೊಂಡಿದ್ದಾರೆ.
IPL 2020: ವಿರಾಟ್ ಕೊಹ್ಲಿಗೆ Flying Kiss ಕೊಟ್ಟ ಅನುಷ್ಕಾ ಶರ್ಮಾ, ಫೋಟೋಸ್ ವೈರಲ್
ಅಷ್ಟೇ ಅಲ್ಲ 'ಇದನ್ನು ಕೂಡ ನಾನು ನನ್ನ ಯೋಗ ಶಿಕ್ಷಕರ ನಿಗಾ ವಹಿಸುವಿಕೆಯಲ್ಲಿ ಮಾಡಿದ್ದೆ. ಅವರು ಆನ್ಲೈನ್ ಸೆಶನ್ ಮೂಲಕ ನನ್ನೊಂದಿಗೆ ಸಂಪರ್ಕದಲ್ಲಿದ್ದರು. ನನ್ನ ಗರ್ಭಾವಸ್ಥೆಯಲ್ಲಿಯೂ ಕೂಡ ನಾನು ನನ್ನ ಪ್ರ್ಯಾಕ್ಟಿಸ್ ನಡೆಸಿದ್ದು ನನಗೆ ಖುಷಿ ತಂದಿದೆ' ಎಂದು ಅನುಷ್ಕಾ ಹೇಳಿದ್ದಾರೆ. ಒಂದೆಡೆ ವಿರಾಟ್ ಕೊಹ್ಲಿ ಸದ್ಯ ಟೀಂ ಇಂಡಿಯಾ ಜೊತೆಗೆ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದರೆ, ಅನುಷ್ಕಾ ಮುಂಬೈನಲ್ಲಿ ತಮ್ಮ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.
ಇದನ್ನು ಓದಿ-PICS: ದುಬೈನಲ್ಲಿ ವಿರಾಟ್-ಅನುಷ್ಕಾ ಚುಂಬನ
ವಿರಾಟ್ ಕೊಹ್ಲಿ ಅಡಿಲೇಡ್ ನಲ್ಲಿನ ತಮ್ಮ ಮೊದಲ ಟೆಸ್ಟ್ ಪಂದ್ಯವನ್ನಾಡಿದ ಬಳಿಕ ತಮ್ಮ ಮಗುವಿನ ಜನ್ಮಕ್ಕಾಗಿ ಭಾರತಕ್ಕೆ ವಪಾಸ್ಸಾಗಲಿದ್ದಾರೆ. ಅವರು ಸಲ್ಲಿಸಿದ್ದ ಪ್ಯಾಟರ್ನಿಟಿ ರಜಾ ಅರ್ಜಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಸ್ವೀಕರಿಸಿದೆ. ಇನ್ನೊಂದೆಡೆ ಭಾರತ ಹಾಗೂ ಆಸ್ಟ್ರೇಲಿಯ ನಡುವಿನ ಏಕದಿನ ಸರಣಿಯ ಮೂರನೇ ಪಂದ್ಯ ಡಿಸೆಂಬರ್ 2 ರಂದು ನಡೆಯಲಿದೆ. ಒಂದು ದಿನ ಸರಣಿಯ ಮೊದಲ ಎರಡು ಪಂದ್ಯಗಳನ್ನು ಭಾರತ ಸೋತಿದ್ದು, ಆಸ್ಟ್ರೇಲಿಯ ಈ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಮೊದಲ ಏಕ ದಿನ ಪಂದ್ಯ 66 ಹಾಗೂ ಎರಡನೇ ಏಕದಿನ ಪಂದ್ಯ 51 ರನ್ಸ್ ಗಳಿಂದ ಭಾರತ ಸೋತಿದೆ. ಏಕದಿನ ಸರಣಿಯ ಬಳಿಕ ಉಭಯ ತಂಡಗಳ ನಡುವೆ 3 ಪಂದ್ಯಗಳ ಟಿ20 ಸರಣಿ ನಡೆಯಲಿದೆ ಹಾಗೂ ಆ ಬಳಿಕ ಒಟ್ಟು ನಾಲ್ಕು ಪಂದ್ಯಗಳ ಟೆಸ್ಟ್ ಸಿರೀಸ್ ನಡೆಯಲಿದೆ.