ವೇಗದ ಬೌಲರ್ ಆಗಿ 200 ವಿಕೆಟ್ ಪಡೆದು ಇತಿಹಾಸ ಬರೆಯಲು ಹೊರಟ ಕೊಹ್ಲಿ ಪತ್ನಿ
ಇತ್ತೀಚೆಗಷ್ಟೇ ಖ್ಯಾತ ಬಾಲಿವುಡ್ ಬೆಡಗಿ ಹಾಗೂ ವಿರಾಟ್ ಕೊಹ್ಲಿ ಪತ್ನಿ ಕೊಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ಮಹಿಳೆಯರ ಟೀಮ್ ಇಂಡಿಯಾ ವೇಗಿ ಝೂಲನ್ ಗೋಸ್ವಾಮಿ ಅವರ ಜೊತೆಗೆ ಮಾತುಕತೆ ನಡೆಸಿದ್ದರು.
ನವದೆಹಲಿ: 'ಸೂರಮಾ' ಚಿತ್ರದಲ್ಲಿ ಹಾಕಿ ಆಟಗಾರ್ತಿಯಾಗಿ ಪಾತ್ರ ನಿರ್ವಹಿಸಿದ್ದ ಖ್ಯಾತ ಬಾಲಿವುಡ್ ನಟಿ ತಾಪಸಿ ಪನ್ನು ಶೀಘ್ರದಲ್ಲಿಯೇ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿತಾಲಿ ರಾಜ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿಕ್ಕಂದಿನಿಂದಲೂ ಆಟಗಳಲ್ಲಿ ಆಸಕ್ತಿ ಹೊಂದಿರುವ ತಾಪಸಿ ಪನ್ನೂಗೆ ಬ್ಯಾಡ್ಮಿಂಟನ್ ನೆಚ್ಚಿನ ಆಟ. ಚಿತ್ರಗಳ ಆಯ್ಕೆಯ ವಿಷಯದಲ್ಲಿ ಆಟಗಳ ಪ್ರತಿ ಇರುವ ತಾಪಸಿ ಅಭಿರುಚಿಯನ್ನು ನೀವು ಗಮನಿಸಬಹುದಾಗಿದೆ. ಏತನ್ಮಧ್ಯೆ ಇನ್ನೋರ್ವ ಖ್ಯಾತ ಬಾಲಿವುಡ್ ನಟಿ ಮತ್ತು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಕೂಡ ಮಹಿಳಾ ವೇಗದ ಬೌಲರ್ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ವರದಿಯಾಗಿದೆ. ಮಾಧ್ಯಮಗಳ ವರದಿ ಪ್ರಕಾರ ಅನುಷ್ಕಾ ಶರ್ಮಾ ಭಾರತದ ರಾಷ್ಟ್ರೀಯ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಹಾಗೂ ವೇಗದ ಬೌಲರ್ ಆಗಿರುವ ಝೂಲನ್ ಗೋಸ್ವಾಮಿ ಅವರ ಬಯೋಪಿಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಈ ದಾಖಲೆ ತನ್ನದಾಗಿಸಿಕೊಂಡಿದ್ದಾರೆ ಝೂಲನ್
ಇತ್ತೀಚೆಗಷ್ಟೇ ಖ್ಯಾತ ಬಾಲಿವುಡ್ ಬೆಡಗಿ ಹಾಗೂ ವಿರಾಟ್ ಕೊಹ್ಲಿ ಪತ್ನಿ ಕೊಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ಮಹಿಳೆಯರ ಟೀಮ್ ಇಂಡಿಯಾ ವೇಗಿ ಝೂಲನ್ ಗೋಸ್ವಾಮಿ ಅವರ ಜೊತೆಗೆ ಮಾತುಕತೆ ನಡೆಸಿದ್ದರು. ಬಳಿಕ ಈ ಬಯೋಪಿಕ್ ಕುರಿತು ಚರ್ಚೆಗಳು ಆರಂಭಗೊಂಡಿವೆ. ಅಷ್ಟೇ ಅಲ್ಲ ಅನುಷ್ಕಾ ಈಗಾಗಲೇ ಇಂಡಿಯನ್ ಮೋಶನ್ ಪಿಕ್ಚರ್ಸ್ ಪ್ರೊಡಕ್ಷನ್ ಅಸೋಸಿಯೇಶನ್ ನಲ್ಲಿ 'ಚಕದಾಹ ಎಕ್ಸ್ಪ್ರೆಸ್' ಟೈಟಲ್ ಕೂಡ ರಜಿಸ್ಟರ್ ಮಾಡಿದ್ದಾರೆ ಎನ್ನಲಾಗಿದೆ. ಇಲ್ಲಿ ವಿಶೇಷತೆ ಎಂದರೆ ಅನುಷ್ಕಾ ಪತಿ ವಿರಾಟ್ ಕೊಹ್ಲಿ ಕೂಡ ಓರ್ವ ಕ್ರಿಕೆಟ್ ಆಟಗಾರರಾಗಿದ್ದು, ಓರ್ವ ಕ್ರಿಕೆಟ್ ಆಟಗಾರ್ತಿಯಾಗಿ ಅನುಷ್ಕಾ ಹೇಗೆ ಪ್ರದರ್ಶನ ನೀಡಲಿದ್ದಾರೆ ಎಂಬುದು ಇದೀಗ ಅವರ ಅಭಿಮಾನಿಗಳಲ್ಲಿ ಕುತೂಹಲಕ್ಕೆ ಕಾರಣವಾಗಿದೆ. 2018 ರಲ್ಲಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ನಲ್ಲಿ 200 ವಿಕೆಟ್ ಪಡೆದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಝೂಲನ್ ಪಾತ್ರರಾಗಿದ್ದಾರೆ.
ಮಾಧ್ಯಮಗಳ ವರದಿ ಪ್ರಕಾರ ಅನುಷ್ಕಾ ಶರ್ಮಾ ಶೀಘ್ರದಲ್ಲಿಯೇ ತಮ್ಮ ಈ ಚಿತ್ರದ ಕುರಿತು ಘೋಷಣೆ ಮಾಡುವ ಸಾಧ್ಯತೆ ಇದೆ. ಈ ವರದಿಗಳು ಒಂದು ವೇಳೆ ನಿಜ ಎಂದು ಸಾಬೀತಾದಲ್ಲಿ ಪ್ರೇಕ್ಷಕರಿಗೆ ಒಂದೇ ಬಾರಿಗೆ ಎರಡು ಮಹಿಳಾ ಕ್ರಿಕೆಟ್ ಆಟಗಾರರ್ತಿಯರ ಕಥೆ ಬೆಳ್ಳಿ ಪರದೆಯ ಮೇಲೆ ವಿಕ್ಷೀಸುವ ಅವಕಾಶ ಸಿಗಲಿದೆ. ಅಷ್ಟೇ ಅಲ್ಲ ಅನುಷ್ಕಾ ಹಾಗೂ ತಾಪಸಿ ಪನ್ನು ಈ ಇಬ್ಬರಲ್ಲಿ ಯಾರು ಉತ್ತಮವಾಗಿ ಪಾತ್ರ ನಿರ್ವಹಿಸುವರು ಎಂಬುದೂ ಕೂಡ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.