Anushka Shetty - Prabhas : ಅನುಷ್ಕಾ ಶೆಟ್ಟಿ ಅವರ ಮುಂಬರುವ ಚಿತ್ರ 'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' ಟೀಸರ್ ಬಿಡುಗಡೆಯಾಗಿದೆ. ನಟ ಪ್ರಭಾಸ್ ಅವರು ಅನುಷ್ಕಾ ಶೆಟ್ಟಿ ಅವರ ಉತ್ತಮ ಸ್ನೇಹಿತರಾಗಿದ್ದಾರೆ. 'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' ಟೀಸರ್ ರಿಲೀಸ್‌ ಬಳಿಕ ಪ್ರಭಾಸ್‌ ತಮ್ಮ ಗುಡ್‌ ಫ್ರೆಂಡ್‌ ಅನುಷ್ಕಾ ಶೆಟ್ಟಿಗೆ ಶುಭ ಕೋರಿದ್ದಾರೆ. ಅನುಷ್ಕಾ ತಕ್ಷಣವೇ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ ಅನುಷ್ಕಾ ಶೆಟ್ಟಿ ಅವರು ಪ್ರಭಾಸ್‌ ಅವರಿಗೆ ನಿಕ್‌ ನೇಮ್‌ಯಿಂದ ಕರೆದಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಲಕ್ಷಣ ಧಾರಾವಾಹಿಯ ವಿಲನ್‌ ಶ್ವೇತಾ ಕಿರುತೆರೆ ಜರ್ನಿ ಹೇಗಿತ್ತು ಗೊತ್ತಾ?


ಅನುಷ್ಕಾ ಶೆಟ್ಟಿ ಅವರ ಈ ಕಾಮೆಂಟ್‌ ಎಲ್ಲರ ಗಮನ ಸೆಳೆದಿದೆ. ಪ್ರಭಾಸ್ ಗೆ ಅನುಷ್ಕಾ ಬಳಸಿರುವ ಮುದ್ದಾದ ನಿಕ್‌ ನೇಮ್‌ ನೋಡು ಎಲ್ಲರೂ ಅಚ್ಚರಿಪಟ್ಟಿದ್ದಾರೆ. ಅನುಷ್ಕಾ ಶೆಟ್ಟಿ 'ಪಪ್ಸು' ಎಂದು ಕರೆದಿದ್ದಾರೆ. ಈ ನಿಕ್‌ ನೇಮ್‌ ಅವರಿಬ್ಬರ ಸಿಹಿ ಬಂಧವನ್ನು ವಿವರಿಸುತ್ತದೆ.


ಮಿರ್ಚಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ಒಟ್ಟಾಗಿ ನಟಿಸಿದ್ದಾರೆ. ಬಾಹುಬಲಿ ಮತ್ತು ಬಾಹುಬಲಿ 2 ಇವರಿಬ್ಬರ ಜೋಡಿಯ ಸಿನಿಮಾಗಳಲ್ಲಿ ಅರಿ ದೊಡ್ಡ ಹಿಟ್‌ ನೀಡಿತು. ಈ ಚಿತ್ರದಲ್ಲಿ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಕೆಮಿಸ್ಟ್ರಿ ತುಂಬಾ ಚೆನ್ನಾಗಿ ವರ್ಕೌಟ್‌ ಮಾಡಿತು. ಆ ಬಳಿಕ ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ಪ್ರೀತಿಯಲ್ಲಿದ್ದಾರೆ ಎಂದು ಗಾಸಿಪ್‌ ಶುರುವಾಗಿತ್ತು. ಆದರೆ ಪ್ರಭಾಸ್ ಆಗಲಿ ಅಥವಾ ಅನುಷ್ಕಾ ಆಗಲಿ ಈ ಬಗ್ಗೆ ವಿಚಾರವಾಗಿ ಏನೂ ಮಾತನಾಡಲಿಲ್ಲ. ಆದರೆ ಈ ವಿಚಾರ ಅಧಿಕೃತ ಆಗುವುದಕ್ಕೂ ಮೊದಲೇ ಇಬ್ಬರೂ ದೂರವಾದರು ಎಂದು ಸುದ್ದಿಗಳು ಹರಿದಾಡಲು ಆರಂಭಿಸಿದವು. 


ಇದನ್ನೂ ಓದಿ: ರಶ್ಮಿಕಾ ಮಂದಣ್ಣ ರಿಜೆಕ್ಟ್‌ ಮಾಡಿದ್ದ ಈ 5 ಸಿನಿಮಾಗಳೂ ಸೂಪರ್‌ ಹಿಟ್‌!


"#MissShettyMrPolishetty ಅವರ ಟೀಸರ್ ತುಂಬಾ ಮನರಂಜನೆಯಾಗಿದೆ! ಇಡೀ ಪಾತ್ರವರ್ಗ ಮತ್ತು ಸಿಬ್ಬಂದಿಗೆ ಆಲ್ ದಿ ಬೆಸ್ಟ್!  ಎಂದು ನಟ ಪ್ರಭಾಸ್‌ ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ನಟಿ ಅನುಷ್ಕಾ ಶೆಟ್ಟಿ 'ಧನ್ಯವಾದಗಳು ಪಪ್ಸು' ಎಂದು ಪ್ರತಿಕ್ರಿಯಿಸಿದ್ದಾರೆ. 


ಅನುಷ್ಕಾ ಮತ್ತು ಪ್ರಭಾಸ್ ದೀರ್ಘಕಾಲ ಸ್ನೇಹಿತರಾಗಿದ್ದರು ಮತ್ತು ಅವರ ಸ್ನೇಹವು ವರ್ಷಗಳಲ್ಲಿ ಗಟ್ಟಿಯಾಗುತ್ತಿದೆ. ಅವರು ಯಾವಾಗಲೂ ಪರಸ್ಪರ ಬೆಂಬಲಿಸುತ್ತಾರೆ. ಅವರ ಸಂಬಂಧದ ಬಗ್ಗೆ ನಿರಂತರ ವದಂತಿಗಳ ಹೊರತಾಗಿಯೂ, ಅವರು ತಮ್ಮ ಸ್ನೇಹದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಅನುಷ್ಕಾ ಮತ್ತು ಪ್ರಭಾಸ್ ನಡುವಿನ ಒಡನಾಟವನ್ನು ನೋಡಲು ಫ್ಯಾನ್ಸ್‌ಗೆ ಸಂತಸವಾಗುತ್ತದೆ.  


ಇದನ್ನೂ ಓದಿ: ಪ್ರೀತಿ, ಜಗಳ.. ಮದುವೆಗೂ ಮುನ್ನ ಬ್ರೇಕಪ್! ಅನುಷ್ಕಾ - ವಿರಾಟ್‌ ಮತ್ತೆ ಒಂದಾಗಿದ್ದೇ ಅಚ್ಚರಿ!!


'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' ಕುರಿತು ಹೇಳುವುದಾದರೆ, ಪಿ ಮಹೇಶ್ ಬಾಬು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಮಿಸ್ ಶೆಟ್ಟಿಯಾಗಿ ಅನುಷ್ಕಾ ಶೆಟ್ಟಿ ಮತ್ತು ಪೋಲಿಶೆಟ್ಟಿಯಾಗಿ ನವೀನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಟೀಸರ್‌ನಲ್ಲಿ ಅನುಷ್ಕಾ ಬಾಣಸಿಗರಾಗಿ ಮತ್ತು ನವೀನ್ ಸ್ಟ್ಯಾಂಡ್‌ಅಪ್ ಕಾಮಿಡಿಯನ್ ಆಗಿ ಕಾಣಿಸಿಕೊಂಡಿದ್ದಾರೆ. ಜಯಸುಧಾ, ಮುರಳಿ ಶರ್ಮಾ ಮತ್ತು ಇತರರು ಪೋಷಕ ಪಾತ್ರವನ್ನು ನಿರ್ವಹಿಸಿದರೆ, ರಾಧನ್ ಸಂಗೀತ ಸಂಯೋಜಿಸಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.