Entertainment : ಜೂಲಿಯೆಟ್-2 ಚಿತ್ರ ಹೆಸರೇ ಹೇಳುವಂತೆ ಇದೊಂದು ಮಹಿಳಾ ಪ್ರಧಾನ ಚಿತ್ರ ಆಗಿದೆ. ಇಲ್ಲಿ ಹೆಣ್ಣು ಮಕ್ಕಳು ಎಷ್ಟು ಸ್ಟ್ರಾಂಗ್ ಅನ್ನೋದನ್ನ ತೋರಿಸಲಾಗಿದೆ. ಈಗಾಗಲೇ ಅಶ್ವಿನಿ ಪುನೀತ್ ರಿಲೀಸ್ ಮಾಡಿರೋ ಟೀಸರ್ ನೋಡಿ ಫ್ಯಾನ್ಸ್ ಫಿದಾ ಆಗಿರೋ ಮ್ಯಾಟರ್ ನಿಮ್ಗೆ ಗೊತ್ತೇ ಇದೆ. ಟೀಸರ್ ನೋಡಿ ಅಶ್ವಿನಿ ಪುನೀತ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ನೀವೆಲ್ಲಾ ತಂದೆಗೆ ಸಂಬಂಧಪಟ್ಟ 'ಅಪ್ಪ ಐ ಲವ್ ಯು', 'ನಿನ್ನಂತ ಅಪ್ಪ ಇಲ್ಲ', ಹಾಡಿನ ನಂತರ ಇದೀಗ ಜೂಲಿಯಟ್2 ಸಿನಿಮಾದ ತಂದೆ ಮಗಳ ಬಾಂಧವ್ಯದ ಹಾಡು ರಿಲೀಸ್ ಆಗಿದ್ದು,ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. 'ನೆನಪೆಲ್ಲಿ ಈಗ ಅವಳಿರದ ಜಾಗ,ಆ ಜಗಕೆ ಈಗ ನೀನೇ ಅಪ್ಪನೆಂಬ ರಾಜ' ಅನ್ನೋ ಜೂಲಿಯಟ್2 ಸಿನಿಮಾದ ಹಾಡು ಭಾವನಾತ್ಮಕವಾಗಿ ನಮ್ಮನ್ನ ಕಾಡುತ್ತೆ. ಸೋ ಹಾಡೇ ಈ ಲೆವೆಲ್ಲಿಗೆ ಕಿಕ್ ಕೊಟ್ಟಿದೆ ಅಂದ್ರೆ ಸಿನಿಮಾ ಹೆಂಗೇ ಹವಾ ಕ್ರಿಯೇಟ್ ಮಾಡಬೋದು ಅನ್ನೋ ಚರ್ಚೆ ಜೋರಾಗಿ ನಡೆಯುತ್ತಿದೆ.


ಇದನ್ನೂ ಓದಿ: Thunivu Varisu OTT : ʼವಾರಿಸುʼ, ʼತುನಿವುʼ ಓಟಿಟಿ ಬಿಡುಗಡೆ ಡೇಟ್‌ ಫಿಕ್ಸ್‌..! ಎಲ್ಲಿ.. ಯಾವಾಗ..?
ಜೂಲಿಯಟ್2 ಸಿನಿಮಾದಲ್ಲೂ ಭಯ ಹುಟ್ಟಿಸೋ ದೃಶ್ಯಗಳಿವೆ. Behind the Dark Door ಅನ್ನುವ ಸಬ್ ಟೈಟಲ್ ಇಡೀ ಚಿತ್ರದ ಬಗ್ಗೆ ಬೇರೆ ಫೀಲ್ ಕೊಡುತ್ತದೆ.ತಂದೆಯ ಕನಸುಗಳನ್ನ ನನಸು ಮಾಡಲು ಹೊರಟ ಹುಡಿಗಿ ಈ ಜೂಲಿಯೆಟ್ ಅನ್ನೋದು ಒಟ್ಟು ಕಥೆಯ ತಾತ್ಪರ್ಯ ಆಗಿದೆ. ಇದರ ಟೀಸರ್​ ನೋಡಿರೋ ಪುನೀತ್ ರಾಜ್​ಕುಮಾರ್ ಪತ್ನಿ ಅಶ್ವಿನಿ ಪುನೀತ್​ ರಾಜ್​ಕುಮಾರ್ ತುಂಬಾ ಇಷ್ಟಪಟ್ಟಿದ್ದಾರೆ.


ಇದನ್ನೂ ಓದಿ: ದೋಸ್ತ್‌ಗಳಲ್ಲ.. ದುಶ್ಮನ್‌ಗಳು ಎಷ್ಟಿದಾರೆ ಅಂತ ಗೊತ್ತಾಗ್ತಿದೆ.. ಥೂ..ಥೂ..!


ಜೂಲಿಯೆಟ್-2 ಚಿತ್ರವನ್ನ ವಿರಾಟ್. ಬಿ. ಗೌಡ ನಿರ್ದೇಶನ ಮಾಡಿದ್ದಾರೆ. ಸಂದೀಪ್. ಆರ್. ಬಲ್ಲಾಳ್ ಮತ್ತು ರಜತ್ ರಾವ್ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ಇನ್ನು ಬರುವ ಫೆಬ್ರವರಿ ತಿಂಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಸದ್ಯಕ್ಕೆ ಚಿತ್ರದ ಟೀಸರ್ ರಿಲೀಸ್ ಆಗಿ ಹೊಸ ಭರವಸೆ ಮೂಡಿಸಿದೆ.ಸಿನಿಮಾ ನೋಡಲು ಒಂದಷ್ಟು ಅಭಿಮಾನಿಗಳು ಕಾದುಕುಳಿತಿದ್ದಾರೆ.ಫೆಬ್ರವರಿ 24ಕ್ಕೆ ಸಿನಿಮಾ ಭರ್ಜರಿಯಾಗಿ ರಿಲೀಸ್ ಆಗುತ್ತಿದೆ. ಸೋ ವೇಟ್ ಮಾಡಿ ಸಿನಿಮಾ ನೋಡಿ ಎಂಜಾಯ್ ಮಾಡೋಣ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.