`ಅಪ್ಪು ಎಂದೆದಿಗೂ ಶಾಶ್ವತ`- ಬಾಲ್ಯದ ಫೋಟೋ ಹಂಚಿಕೊಂಡ ಅರ್ಜುನ್ ಸರ್ಜಾ
ನಮ್ಮೆಲರ ಪ್ರೀತಿಯ ಅಪ್ಪು ಅಗಲುವಿಕೆ ನಿಜಗೂ ಅಭಿಮಾನಿಗಳಿಗೆ ಎಂದು ಆರದ ಗಾಯವಾಗಿದೆ.ಪ್ರತಿದಿನವೂ ಕೂಡ ಅವರ ಜೊತೆಗೆ ಕಳೆದ ನೆನಪಿನ ಬುತ್ತಿಗಳನ್ನು ಎಲ್ಲ ನಟರು ಕೂಡ ಸ್ಮರಿಸುತ್ತಲೇ ಇದ್ದಾರೆ.
ಬೆಂಗಳೂರು: ನಮ್ಮೆಲರ ಪ್ರೀತಿಯ ಅಪ್ಪು ಅಗಲುವಿಕೆ ನಿಜಗೂ ಅಭಿಮಾನಿಗಳಿಗೆ ಎಂದು ಆರದ ಗಾಯವಾಗಿದೆ.ಪ್ರತಿದಿನವೂ ಕೂಡ ಅವರ ಜೊತೆಗೆ ಕಳೆದ ನೆನಪಿನ ಬುತ್ತಿಗಳನ್ನು ಎಲ್ಲ ನಟರು ಕೂಡ ಸ್ಮರಿಸುತ್ತಲೇ ಇದ್ದಾರೆ.
ಈಗ ಪುನೀತ್ ರಾಜ್ ಕುಮಾರ್ ಅವರು ಬಾಲ್ಯದಲ್ಲಿದ್ದಾಗಿನ ಫೋಟೋವೊಂದನ್ನು ನಟ ಅರ್ಜುನ್ ಸರ್ಜಾ ಅವರು ತಮ್ಮ ಅಧಿಕೃತ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡು ಅಪ್ಪು ಎಂದೆದಿಗೂ ಶಾಶ್ವತ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ : IIT-Bombay Placement: ಮೊದಲ ದಿನದಂದೇ 2.05 ಕೋಟಿ ರೂ ಪ್ಯಾಕೇಜ್ ನೀಡಿದ Uber
ಅಪ್ಪು ಅವರ ನಿಧನ ಕೇವಲ ಇಡೀ ಭಾರತೀಯ ಚಿತ್ರರಂಗಕ್ಕೆ ಆಗಿರುವ ನಷ್ಟ ಮಾತ್ರವಲ್ಲದೆ ಇಡೀ ಮಾನವೀಯತೆಗೆ ಆಗಿರುವ ನಷ್ಟವಾಗಿದೆ.ಸದಾ ಇನ್ನೊಬ್ಬರಿಗೆ ಒಳಿತನ್ನು ಮಾಡುತ್ತಲೇ ಜನರ ಪದವಾಗಿರುವ ಅಪ್ಪು ಸಾಮಾಜಿಕ ಕಾರ್ಯಗಳಂತೂ ಯಾವುದೇ ಪ್ರಚಾರವನ್ನು ಬಯಸದೆ ಮಾಡಿರುವ ಸೇವೆಗಳಾಗಿವೆ.ಅವರು ನಮ್ಮನ್ನು ಆಗಲಿ ಒಂದು ತಿಂಗಳಿಗೂ ಅಧಿಕವಾಯಿತು, ಆದಾಗ್ಯೂ ಕೂಡ ಪ್ರತಿದಿನ ಅವರ ಸಮಾಧಿಗೆ ಜನಸಾಗರವೇ ಹರಿದು ಬರುತ್ತಿದೆ.
OMG: ಈ ಸ್ವೆಟರ್ ಬೆಲೆ 30 ಲಕ್ಷ ರೂಪಾಯಿಯಂತೆ, ಅಂಥದ್ದೇನಿದೆ ಇದರಲ್ಲಿ?
ಸ್ಟಾರ್ ನಟನಾಗಿದ್ದರೂ ಕೂಡ ಅವರು ಹೊಸ ಪೀಳಿಗೆ ನಟರನ್ನು ಬೆಳೆಸಲು ಪಿಆರ್ಕೆ ಪ್ರೊಡಕ್ಷನ್ ನ್ನು ಹುಟ್ಟು ಹಾಕಿದರು.ಆ ಮೂಲಕ ಸದಭಿರುಚಿಯ ಚಿತ್ರಗಳನ್ನು ಹಾಗೂ ಪ್ರಯೋಗಾತ್ಮಕ ಚಿತ್ರಗಳನ್ನು ಅವರು ನಿರ್ಮಿಸುತ್ತಿದ್ದರು, ಇತ್ತೀಚಿಗೆ ಕನ್ನಡ ನಾಡಿನ ಪಕೃತಿ ಕುರಿತಾಗಿನ ಅವರ ಸಾಕ್ಷ್ಯಚಿತ್ರ ಗಂಧದ ಗುಡಿ ಆವರಿಗಿದ್ದ ಪರಿಸರ ಪ್ರೀತಿ ಹಾಗೂ ನಾಡಿನ ಬಗೆಗಿನ ಪ್ರೀತಿಯನ್ನು ತೋರಿಸುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.