ಬೆಂಗಳೂರು: ಚಂದನವನದಿಂದ ಅದ್ಭುತ ಮತ್ತು ವಿಭಿನ್ನ ಕಥಾಹಂದರ ಹೊಂದಿರೋ ‘ಅಬ್ಬರ’ ಸಿನಿಮಾ ಇದೇ ನವೆಂಬರ್ 18ರಂದು 'ಅಬ್ಬರಿ'ಸುತ್ತಾ  ಭರ್ಜರಿಯಾಗಿ ರಿಲೀಸ್ ಆಗುತ್ತಿದೆ. ಟ್ರೈಲರ್ ಮತ್ತು ಹಾಡುಗಳಿಂದ ಸಖತ್ ಸುದ್ದಿಯಲ್ಲಿರೋ ‘ಅಬ್ಬರ’ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ನಿಮಗೆ ಬೇರೆಯದ್ದೇ ಲೋಕವನ್ನು ತೋರಿಸಲು ರೆಡಿಯಾಗಿ ನಿಂತಿದ್ದಾರೆ.


COMMERCIAL BREAK
SCROLL TO CONTINUE READING

‘ಅಬ್ಬರ’ ಸಿನಿಮಾ ಬಗ್ಗೆ ‘ಜೀ ಕನ್ನಡ ನ್ಯೂಸ್’ ಜೊತೆ ಮಾತನಾಡಿದ ಪ್ರಜ್ವಲ್ ದೇವರಾಜ್ ನಮ್ಮ ಕನ್ನಡ ಇಂಡಸ್ಟ್ರಿ ಈಗ ಹೆಮ್ಮರವಾಗಿ ಬೆಳೆದು ನಿಂತಿದೆ. ‘ಕಾಂತಾರ’ದಂತಹ  ಸಿನಿಮಾ ಈಗ ನಮ್ಮ ಇಂಡಸ್ಟ್ರಿ ಹೆಸರನ್ನು ಬೇರೆ ಲೆವೆಲ್ಲಿಗೆ ತೆಗೆದುಕೊಂಡು ಹೋಗಿದೆ ಅಂತಾ ಪ್ರಜ್ವಲ್ ಹೆಮ್ಮೆ ವ್ಯಕ್ತಪಡಿಸಿದ್ರು. ಜೊತೆಗೆ ‘ಅಪ್ಪು’ ಸರ್ ನಮ್ಮ ಎಮೋಷನ್… ಅವರ ಕನಸಿನ ಕೂಸು ‘ಗಂಧದಗುಡಿ’ ಸಿನಿಮಾ ನೋಡಿ ತುಂಬಾ ಖುಷಿ ಆಯ್ತು’ ಎಂದು ತಿಳಿಸಿದ್ರು.


ಇದನ್ನೂ ಓದಿ: ನೋಡುಗರ ಬಾಡಿ ಹಿಟ್‌ ಹೆಚ್ಚಿಸುತ್ತಿದೆ ನೋರಾ, ಟೆರೆನ್ಸ್‌ ಡ್ಯಾನ್ಸ್‌ : ವಿಡಿಯೋ ನೋಡಿ..!


‘ಡಿ ಬಾಸ್’ ನಮ್ಮ ಅಣ್ಣ… ಅವರ ‘ಕ್ರಾಂತಿ’ ಸಿನಿಮಾವನ್ನು ಅಭಿಮಾನಿಗಳು ಪ್ರಮೋಷನ್ ಮಾಡೋದು ನೋಡಿ ಖುಷಿ ಆಯ್ತು ಅನ್ನೋದನ್ನು ಇದೇ ವೇಳೆ ಪ್ರಜ್ವಲ್ ‘ಜೀ ಕನ್ನಡ ನ್ಯೂಸ್’ ಜೊತೆಗೆ ಹಂಚಿಕೊಂಡರು.


ಇನ್ನು ‘ಅಬ್ಬರ’ ಚಿತ್ರದಲ್ಲಿ ಮೂವರು ನಾಯಕಿಯರ ಜೊತೆಗೆ ಪ್ರಜ್ವಲ್ ಡ್ಯುಯೆಟ್ ಹಾಡಿದ್ದಾರೆ. ಈ ಚಿತ್ರದಲ್ಲಿ ಪ್ರಜ್ವಲ್‌ಗೆ ನಾಯಕಿಯರಾಗಿ ಲೇಖಾ ಚಂದ್ರ, ನಿಮಿಕಾ ರತ್ನಾಕರ್, ರಾಜಶ್ರೀ ಪೊನ್ನಪ್ಪ ನಟಿಸಿದ್ದಾರೆ. ಜನಪ್ರಿಯ ಡೈರೆಕ್ಟರ್ ರಾಮ್‌ನಾರಾಯಣ್ ಅವರು ಇದೀಗ ಪ್ರಜ್ವಲ್ ದೇವರಾಜ್ ಜೊತೆ ಸೇರಿ ‘ಅಬ್ಬರ’ ಚಿತ್ರವನ್ನು ಮಾಡಿದ್ದಾರೆ. C & M ಮೂವೀಸ್ ಲಾಂಛನದಲ್ಲಿ ಬಸವರಾಜ್ ಮಂಚಯ್ಯ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಪಟಪಟ ಪಂಚಿಂಗ್ ಡೈಲಾಗ್ ಹೇಳೋ ಮತ್ತು ಆಕ್ಷನ್ ಮೂಲಕ ಬಿರುಗಾಳಿ ಎಬ್ಬಿಸೋ ಪ್ರಜ್ವಲ್ ನಟನೆಯ ‘ಅಬ್ಬರ’ ಸಿನಿಮಾ ನೋಡಲು ಲಕ್ಷಾಂತರ ಫ್ಯಾನ್ಸ್ ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ.


ಇದನ್ನೂ ಓದಿ: ಪುಪ್ಪ 2 ಶೂಟಿಂಗ್‌ ಸ್ಟಾರ್ಟ್‌: ಅಲ್ಲು ಅರ್ಜುನ್‌ ಸಿನಿಮಾದಲ್ಲಿ RRR ಸೀನ್‌ ರಿಪೀಟ್‌..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.