AR Rahman Saira Banu Divorce : ಚಿತ್ರರಂಗದ ಪ್ರಸಿದ್ಧ ಗಾಯಕ ಮತ್ತು ಸಂಯೋಜಕ, ಎಆರ್.ರೆಹಮಾನ್ 29 ವರ್ಷಗಳ ದಾಂಪತ್ಯ ಜೀವನಕ್ಕೆ ತೆರೆ ಎಳೆದಿದ್ದಾರೆ. ನವೆಂಬರ್ 19 ರ ಮಂಗಳವಾರ ಸಂಜೆ ರೆಹಮಾನ್ ಮತ್ತು ಅವರ ಪತ್ನಿ ಸಾಯಿರಾ ಬಾನು ವಿಚ್ಚೇದನವನ್ನು ಘೋಷಿಸಿದ್ದಾರೆ. ವಿಶೇಷವೆಂದರೆ ಅದೇ ದಿನ, ರೆಹಮಾನ್ ತಂಡದ ಸದಸ್ಯೆಯಾಗಿರುವ ಮೋಹಿನಿ ಡೇ, ಕೂಡಾ ಪತಿ ಮಾರ್ಕ್ ಹಾರ್ಟ್ಸುಚ್‌ನಿಂದ ಬೇರ್ಪಡುವುದಾಗಿ ಘೋಷಿಸಿದ್ದಾರೆ. ಇಬ್ಬರೂ ಒಂದೇ ದಿನ ವಿಚ್ಚೇದನ ಘೋಷಿಸಿರುವ ಕಾರಣ  ಈ ಸುದ್ದಿ ಚರ್ಚೆಗೆ ಗ್ರಾಸವಾಗಿತ್ತು. 


COMMERCIAL BREAK
SCROLL TO CONTINUE READING

ಇದೀಗ ಇಬ್ಬರೂ ಒಂದೇ ದಿನ ವಿಚ್ಛೇದನ ಘೋಷಿಸಿರುವ ಬಗ್ಗೆ ಸಾಯಿರಾ ಪರ ವಕೀಲ ಸ್ಪಷ್ಟನೆ ನೀಡಿದ್ದಾರೆ. ರೆಹಮಾನ್ ಮತ್ತು ಮೋಹಿನಿ ನಡುವಿನ ಯಾವುದೇ ರೀತಿಯ ಸಂಬಂಧ ಇರುವುದನ್ನು ವಕೀಲರು ಸ್ಪಷ್ಟ ಶಬ್ದಗಳಲ್ಲಿ ನಿರಾಕರಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ರೆಹಮಾನ್ ಮತ್ತು ಸಾಯಿರಾ ಪರ ವಕೀಲ 'ಇವರಿಬ್ಬರ ನಡುವೆ ಯಾವುದೇ ಸಂಬಂಧವಿಲ್ಲ. ವಿಚ್ಛೇದನದ ಬಗ್ಗೆ ಸಾಯಿರಾ ಮತ್ತು ರೆಹಮಾನ್ ಅವರೇ ನಿರ್ಧಾರ ತೆಗೆದುಕೊಂಡಿದ್ದಾರೆ. ರೆಹಮಾನ್ ಮತ್ತು ಸಾಯಿರಾ ಬಾನು ತಮ್ಮ ವಿಚ್ಛೇದನಕ್ಕೆ 'ಭಾವನಾತ್ಮಕ ಒತ್ತಡವೇ 'ಕಾರಣ ಎಂದು ಹೇಳಿದ್ದಾರೆ. ಇವರ ವಿಚ್ಚೇದನಕ್ಕೂ ಮೋಹಿನಿ ಡೇ ಡಿವೋರ್ಸ್ ಗೂ ಯಾವುದೇ ಸಂಬಧ ಇಲ್ಲ ಎಂದು ಹೇಳಿದ್ದಾರೆ.  


ಇದನ್ನೂ ಓದಿ : 44ನೇ ವಯಸ್ಸಿನಲ್ಲಿ ಖ್ಯಾತ ಕಿರಿಯ ನಟನೊಂದಿಗೆ ಮೂರನೇ ಮದುವೆಯಾದ ನಟಿ ಶ್ವೇತಾ ತಿವಾರಿ! ಫೋಟೋ ವೈರಲ್!!


ಇನ್ನು ವಿಚ್ಚೇದನದ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ  ಪೋಸ್ಟ್ ಮಾಡಿರುವ ರೆಹಮಾನ್, ನಾವು ತೆಗೆದುಕೊಳ್ಳುವ ನಿರ್ಧಾರ ಮತ್ತು ಗೌಪ್ಯತೆಯನ್ನು ಗೌರವಿಸುವಂತೆ ಕೇಳಿ ಕೊಂಡಿದ್ದಾರೆ. ಅಲ್ಲದೆ, ರೆಹಮಾನ್ ಮತ್ತು ಸಾಯಿರಾ ಪ್ರತ್ಯೇಕವಾದ ನಂತರ ಹಣಕಾಸಿನ ವಿಷಯಗಳ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎನ್ನುವುದನ್ನು ರೆಹಮಾನ್ ಮತ್ತು ಸಾಯಿರಾ ಪರ ವಕೀಲ ವಂದನಾ ಶಾ ಸ್ಪಷ್ಟಪಡಿಸಿದ್ದಾರೆ. ಈ ವಿಚ್ಛೇದನ ಶಾಂತಿಯುತವಾಗಿ ನಡೆಯಲಿದ್ದು, ಇಬ್ಬರೂ ಈ ನಿರ್ಧಾರವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎಂದಿದ್ದಾರೆ.  


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.