The Kerala Story : ʼದಿ ಕೇರಳ ಸ್ಟೋರಿʼ ಸಿನಿಮಾ ಸಾಕಷ್ಟು ಗೊಂದಲಗಳಿಗೆ ಕಾರಣವಾಗಿರುವ ಸಿನಿಮಾ. ಈ ಸಿನಿಮಾ ವಿರುದ್ಧ ಅನೇಕ ಕೂಗುಗಳು ಕೇಳಿಬರುತ್ತಿವೆ. ಇದೆಲ್ಲದರ ಮದ್ಯವೇ ಆಸ್ಕರ್‌ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎಆರ್‌ ರೆಹಮಾನ್‌ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಶೇರ್‌ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಹಿಂದೂ ಜೋಡಿಗಳು ಕೇರಳದ ಮಸೀದಿಯಲ್ಲಿ ಮದುವೆಯಾಗಿದ್ದಾರೆ. 


COMMERCIAL BREAK
SCROLL TO CONTINUE READING

ಹಿಂದೂ ಜೋಡಿಗಳು ಕೇರಳದ ಮಸೀದಿಯಲ್ಲಿ ಮದುವೆಯಾಗಿರುವ ವಿಡಿಯೋವೊಂದನ್ನು ಎಆರ್‌ ರೆಹಮಾನ್‌ ಅವರು ಹಂಚಿಕೊಂಡಿದ್ದು, ʼಮಾನವೀಯತೆ ಮೇಲಿನ ಪ್ರೀತಿ ನಿರಂತರವಾಗಿರಬೇಕು ಮತ್ತು ಆರೋಗ್ಯಕರವಾಗಿರಬೇಕುʼ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋವನ್ನು ಮೊದಲು ಕಾಮ್ರೆಡ್‌ ಆಫ್‌ ಕೇರಳ ಎಂಬ ಟ್ವೀಟರ್‌ ಅಕೌಂಟ್‌ ಮೂಲಕ ಈ ವಿಡಿಯೋವನ್ನು ಶೇರ್‌ ಮಾಡಲಾಗಿತ್ತು. 


ಚುನಾವಣೆ ಬೆನ್ನಲ್ಲೆ ʼಟಿಪ್ಪುʼ ಸಿನಿಮಾ, ಮತ್ತೆ ಶುರುವಾಗುತ್ತಾ ಉರಿ ನಂಜು ವಾರ್?


ಇದೇ ವಿಡಿಯೋವನ್ನು ಖ್ಯಾತ ಸಂಗೀತ ನಿರ್ದೇಶಕ ಎಆರ್‌ ರೆಹಮಾನ್‌ ತಮ್ಮ ಖಾತೆಯಲ್ಲಿ ಶೇರ್‌ ಮಾಡಿಕೊಂಡು ಪ್ರೀತಿ ಮತ್ತು ಮಾನವೀಯತೆಯ ಬಗ್ಗೆ ಬರೆದುಕೊಂಡಿದ್ದಾರೆ. ವರದಿಗಳ ಪ್ರಕಾರ ಈ ವಿಡಿಯೋದಲ್ಲಿನ ವಧುವಿನ ತಾಯಿ ಹಣಕಾಸಿನ ಸಮಸೆಯನ್ನು ಮಸೀದಿಯಲ್ಲಿ ಹೇಳಿಕೊಂಡಿಡಿದ್ದು, ಮಗಳ ಮದುವೆಗೆ ಮಸೀದಿಯಲ್ಲಿ ಸಹಾಯ ಯಾಚಿಸಿದ್ದರು. 


ʼದಿ ಕೇರಳ ಸ್ಟೋರಿʼ ಸಿನಿಮಾ ಇದು ಖಾಣೆಯಾದ 32 ಸಾವಿರ ಮಹಿಳೆಯರ ಕಥೆ. ಈ ಸಿನಿಮಾಗೆ ಬಾರೀ ವಿರೋಧಗಳು ವ್ಯಕ್ತವಾಗುತ್ತಿವೆ. ರಾಜಕೀಯದಲ್ಲಿಯೂ ಈ ಸಿನಿಮಾ ಗೊಂದಲಗಳನ್ನು ಸೃಷ್ಟಿಸಿದೆ. ಕೇರಳದ ಸಾಕಷ್ಟು ರಾಜಕೀಯ ಮುಖಂಡರು ಈ ಸಿನಿಮಾದ ವಿರುದ್ಧ ಸಿಡಿದೆದ್ದು ಆಕ್ರೋಶ ವ್ಯಕ್ತಪಡಿಸಿದ್ದರು. ʼಲವ್‌ ಜಿಹಾದ್‌ನ್ನು ಹೊರತೆಗೆದು ಕೇರಳ ರಾಜ್ಯವನ್ನು ಧಾರ್ಮಿಕ ಉಗ್ರವಾದದ ಕೇಂದ್ರವೆಂದು ಹಬ್ಬಿಸುತ್ತಿದೆʼ ಎಂದು ಕೇರಳದ ಮುಖ್ಯಮಂತ್ರಿ ಆರೋಪಿಸಿದ್ದರು.


ಇದನ್ನೂ ಓದಿ-ʼಇಲಿಯಾನʼದಿಂದ ಹಿಡಿದು ಮದುವೆಯಾಗದೇ ತಾಯಂದಿರಾದ ಸ್ಟಾರ್‌ ನಟಿಯರು ಇವರು..!


ಈ ವಿವಾದಾತ್ಮಕ ಸಿನಿಮಾದಲ್ಲಿ ರಣವಿಕ್ರಮ ಸಿನಿಮಾದ ನಾಯಕಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದು, ವಿಫುಲ್‌ ಶಾ ಚಿತ್ರವನ್ನು ನಿರ್ಮಾಣಮಾಡಿದ್ದಾರೆ, ಮತ್ತು ಸುದೀಪ್ತೋ ಸೇನ್‌ ಆಕ್ಷನ್‌ ಕಟ್‌ ಹೇಳಿದ್ದಾರೆ. ಈ ಸಿನಿಮಾ ಎಲ್ಲ ವಿವಾದಗಳನ್ನು ಮೀರಿ ಇಂದು (ಮೇ5) ದೇಶದಾದ್ಯಂತ ಬಿಡುಗಡೆಗೆ ರೆಡಿಯಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.