Rashmika Mandanna Vijay Devarakonda : ಗೀತಾ ಗೋವಿಂದಂ.. ಒಂದ್ ಐದ್ ವರ್ಷಗಳ ಹಿಂದೆ ಟಾಲಿವುಡ್‌ನಲ್ಲಿ ಸನ್ಸೇಷನಲ್ ಕ್ರಿಯೆಟ್ ಮಾಡಿದ್ದ ಹೆಸರು. ಆ ಗೀತ ಗೋವಿಂದ ಜೋಡಿ ನೋಡಿ ಚಿತ್ರರಸಿಕರಂತೂ ಖುಷಿ ಪಟ್ಟಿದ್ರು.. ಈಗ ಮತ್ತೆ ಗೀತ ಗೋವಿಂದ ಒಂದಾಗೋ ಟೈಂ ಬಂದಿದೆ.. ಮತ್ತೆ ಯಾವಾಗಪ್ಪಾ ಇವರಿಬ್ಬರ ಟಾಮ್ ಅಂಡ್ ಜೆರ್ರಿ ಆಟವನ್ನ ಸ್ಕ್ರೀನ್ ಮೇಲೆ ನೋಡ್ಬಹುದು ಅಂತ ಕಾಯ್ತಿದ್ದ ಅಭಿಮಾನಿಗಳಿಗೆ ಬಿಗ್ ಸಪ್ರೈಸ್ ಕೊಡೋಕೆ ರೆಡಿಯಾಗಿದೆ ಗೀತ ಗೋವಿದಂ ಟೀಂ.


COMMERCIAL BREAK
SCROLL TO CONTINUE READING

ವಿಜಯ್ ದೇವರಕೊಂಡ.. ಈ ನಾಯಕನ ಹೆಸ್ರು ಕೇಳಿದ ತಕ್ಷಣ ಅಲ್ಲಿ ರಶ್ಮಿಕಾ ಹೆಸ್ರು ಬಂದ್ ಹೋಗುತ್ತೆ.. ಅಷ್ಟರ ಮಟ್ಟಿಗೆ ಸದ್ದು, ಸುದ್ದಿ ಮಾಡಿದ್ರು ವಿಜಯ್ ಮತ್ತು ರಶ್ಮಿಕಾ.. ಗೀತ ಗೋವಿಂದಂ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡು, ಚಿತ್ರರಸಿಕರ ಮನಸ್ಸು ಕದ್ದ ಈ ಜೋಡಿ ಟಾಲಿವುಡ್‌ನ ಫೇಮಸ್ ಜೋಡಿ ಅಂತ ಕರೆಸಿಕೊಳ್ತು. ಜೊತೆಗೆ ಆನ್ ಸ್ಕ್ರೀನ್‌ನಲ್ಲಿ ಶುರುವಾದ ಸ್ನೇಹ ಪ್ರೀತಿ ಎಲ್ಲವೂ ಆಫ್ ಸ್ಕ್ರೀನ್‌ನಲ್ಲೂ ಮುಂದುವರೆದವು.. ರಶ್ಮಿಕಾ ವಿಜಯ್ ಇನ್ನೇನು ಮದ್ವೆ ಆಗೇ ಬಿಟ್ಟರು ಅನ್ನುವಷ್ಟರ ಮಟ್ಟಿಗೆ ಸುದ್ದಿ ಓಡಾಡಿತ್ತು.


ಇದನ್ನೂ ಓದಿ:  ಶಾರುಖ್ ಖಾನ್‌ಗೂ ಕಿಯಾರಾ - ಸಿದ್ಧಾರ್ಥ್ ಮದುವೆಗೂ ಇದೆ ವಿಶೇಷ ನಂಟು!


ಆದ್ರೆ ಇಬ್ರೂ ಈ ಪ್ರೀತಿ ಪ್ರೇಮವನ್ನೆಲ್ಲಾ ಸ್ವಲ್ಪ ಸೈಡಿಗಿಟ್ಟು ತಮ್ಮ ಕೆರಿಯರ್ ಬಗ್ಗೆ ಗಮ್ನ ಕೊಟ್ರು.. ರಶ್ಮಿಕಾ ಅಂತೂ ಟಾಲಿವುಡ್‌ನ ಲಕ್ಕಿ ನಾಯಕಿಯಾಗಿ ಹೆಸ್ರು ಮಾಡಿದ್ರು.. ಕಾಲಿವುಡ್, ಬಾಲಿವುಡ್ ಅಂತ ಎಲ್ಲಾ ಭಾಷೆಯ ಸಿನಿಮಾ ರಂಗದಲ್ಲೂ ಒಂದ್ ರೌಂಡ್ ಹಾಕಿ ಬಂದ್ರು. ಆದ್ರೆ ರಶ್ಮಿಕಾಗೆ ತೆಲುಗು ಚಿತ್ರರಂಗದಲ್ಲಿ ಸಿಕ್ಕಷ್ಟು ಯಶಸ್ಸು ಇನ್ನೆಲ್ಲೂ ಸಿಗಲೇ ಇಲ್ಲ.. ಈಗಂತೂ ರಶ್ಮಿಕಾ ಡಿಮ್ಯಾಂಡ್ ಕಡಿಮೆ ಆಗಿದೆ. ರಶ್ಮಿಕಾ ಕ್ರೇಜ್‌ನಿಂದ ಚಿತ್ರರಸಿಕರು ಹೊರಬಂದಿದ್ದಾರೆ. ಇದೆಲ್ಲವನ್ನೂ ಗಮನಿಸಿರೋ ರಶ್ಮಿಕಾ ಮತ್ತೆ ತೆಲುಗು ಸಿನಿಮಾಗಳ ಕಡೆ ಮುಖ ಮಾಡಿದ್ದಾರೆ. 


ಗೀತ ಗೋವಿಂದಂ ಸಿನಿಮಾದಲ್ಲಿ ಒಟ್ಟಿಗೆ ನಟಿಸಿ ಹೆಸ್ರು ಮಾಡಿದ್ಮೇಲೆ ಡಿಯರ್ ಕಾಂಮ್ರೆಡ್ ಚಿತ್ರದಲ್ಲೂ ಒಟ್ಟಿಗೆ ನಟಿಸಿದ್ರು. ಆ ಸಿನಿಮಾ ಕೂಡ ಸೌಂಡ್ ಮಾಡ್ತು. ನಂತರ ಇಬ್ರೂ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾದ್ರು. ಹಾಗ್ ನೋಡಿದ್ರೆ ವಿಜಯ್ ದೇವರಕೊಂಡ ಕೂಡ ಪ್ಯಾನ್ ಇಂಡಿಯಾ ಸಿನಿಮಾ ಮಾಡಿದ್ರು. ಆ ಚಿತ್ರ ಅಟ್ಟರ್ ಫ್ಲಾಪ್ ಆದ್ಮೇಲೆ ವಿಜಯ್‌ಗೆ ಈಗ ಮತ್ತೆ ರಶ್ಮಿಕಾ ನೆನಪಾಗಿದೆ. ಜೊತೆಗೆ ರಶ್ಮಿಕಾಗೂ ಕೂಡ ಈಗ ಒಂದು ಯಶಸ್ಸು ಬೇಕಾಗಿದೆ ಹಾಗಾಗಿ ಮತ್ತೆ ವಿಜಯ್ ಜೊತೆ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಜೋರಾಗಿಯೇ ಹರಿದಾಡ್ತಿದೆ.


ಇದನ್ನೂ ಓದಿ:  K Viswanath Passed Away: ʻಕಲಾ ತಪಸ್ವಿʼ ಬಿರುದಾಂಕಿತ ನಿರ್ದೇಶಕ ಕೆ. ವಿಶ್ವನಾಥನ್ ಇನ್ನಿಲ್ಲ


ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮತ್ತೆ ಒಟ್ಟಿಗೆ ತೆರೆಯ ಮೇಲೆ ಬರಲು ಸಜ್ಜಾಗಿದ್ದಾರೆ.. ಈ ಜೋಡಿಯ ಸೂಪರ ಹಿಟ್ ಸಿನಿಮಾದ ಸೀಕ್ವೆಲ್‌ನಲ್ಲಿ ಇಬ್ಬರೂ ನಾಯಕ, ನಾಯಕಿಯಾಗಿ ನಟಿಸುತ್ತಿದ್ದಾರೆ.. ’ಗೀತಾ ಗೋವಿಂದಂ’ ಸಿನಿಮಾದ ಸೀಕ್ವೆಲ್‌ಗೆ ತಯಾರಿ ನಡೆಯುತ್ತಿದ್ದು, ರಶ್ಮಿಕಾ ಮತ್ತು ವಿಜಯ್ ಈ ಸಿನಿಮಾದಲ್ಲಿ ನಟಿಸಲು ಕಾತರರಾಗಿದ್ದಾರೆ. ಗೀತಾ ಗೋವಿಂದಂ ೨ ಸಿನಿಮಾ ಸದ್ಯದಲ್ಲೆ ಸೆಟ್ಟೇರಲಿದೆ.. ಎಲ್ಲಾ ಅಂದುಕೊಂಡಂತೆ ಆದ್ರೆ ಡಿಸೆಂಬರ್ ವೇಳೆಗೆ ಸಿನಿಮಾ ರಿಲೀಸ್ ಆಗುತ್ತೆ.


ರಶ್ಮಿಕಾಗೆ ವಿಜಯ್ ಲಕ್ಕಿಯಾದ್ರೆ, ವಿಜಯ್‌ಗೂ ರಶ್ಮಿಕಾ ಲಕ್ಕಿ ನಾಯಕಿ, ಹಾಗಾಗಿ ಈ ಜೋಡಿ ಮತ್ತೆ ಒಂದಾದ್ರೆ ತೆರೆಯ ಮೇಲೆ ಮೋಡಿ ಆಗೋದಂತೂ ಗ್ಯಾರಂಟಿ.. ಈ ಸಲ ಗೀತ ಗೋವಿಂದನ ಆಟ ತುಂಟಾಟಗಳನ್ನ ನೋಡೋಕೆ ಅಭಿಮಾನಿಗಳು ಕಾಯುತ್ತಿದ್ದು, ಸಿನಿಮಾ ಹೆಗೆಲ್ಲಾ ಮೂಡಿಬರಬಹುದು ಅನ್ನೋ ಕುತೂಹಲವಂತೂ ಇದ್ದೇಇದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.