ಮಲೈಕಾ - ಅರ್ಜುನ್ ಕಥೆಗೆ ಬಿಗ್ ಟ್ವಿಸ್ಟ್, ಗಾಸಿಪ್ಗೆ ಬ್ರೇಕ್!
Arjun Kapoor And Malaika Arora : ಮಲೈಕಾ ಮತ್ತು ಅರ್ಜುನ್ ತಮ್ಮ ಬ್ರೇಕಪ್ ಸುದ್ದಿಯ ಬಗ್ಗೆ ಮೌನವನ್ನು ಮುಂದುವರೆಸಿದರು. ಇದು ವದಂತಿಗಳಿಗೆ ಕಾರಣವಾಯಿತು.
Malaika Arora and Arjun Kapoor : ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಅವರ 6 ವರ್ಷಗಳ ಸಂಬಂಧ ಮುರಿದುಬಿದ್ದಿದೆ ಎಂಬ ಸುದ್ದಿ ಕೆಲವು ದಿನಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಆದರೆ ಇದೀಗ ನಟನ ಕಾಮೆಂಟ್‌ನಿಂದ ಬ್ರೇಕಪ್ ಸುದ್ದಿಗೆ ತೆರೆ ಬಿದ್ದಿದೆ. ಅದೇ ಸಮಯದಲ್ಲಿ, ಮುಂಬೈನ ಮಳೆಯ ನಡುವೆ ಮಲೈಕಾ ಮತ್ತು ಅರ್ಜುನ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಬ್ರೇಕಪ್ ಸುದ್ದಿ ಹಲವಾರು ದಿನಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಕೆಲವು ದಿನಗಳ ಹಿಂದೆ ಅರ್ಜುನ್ ಕಪೂರ್ ಒಂಟಿಯಾಗಿ ವಿಹಾರಕ್ಕೆ ಹೋದಾಗ ಬ್ರೇಕಪ್ ಸುದ್ದಿ ಗಾಳಿ ಬೀಸಿತು.
ಇದನ್ನೂ ಓದಿ: ಸಮಂತಾ ಖುಶಿ ಟ್ರೇಲರ್ ಪ್ಲೇ ಆಗ್ತಿದ್ದಂತೆ ಎದ್ದು ಹೊರನಡೆದ ನಾಗ ಚೈತನ್ಯ!!
ಅಷ್ಟೇ ಅಲ್ಲ ಸಾಮಾಜಿಕ ಜಾಲತಾಣದಲ್ಲಿ ನಟಿ ಕುಶಾ ಕಪಿಲಾ ಜೊತೆ ಅರ್ಜುನ್ ಕಪೂರ್ ಹೆಸರು ಕೂಡ ಕೇಳಿ ಬರುತ್ತಿದೆ. ಕುಶಾ ಕಪಿಲಾ ಅವರು ಪೋಸ್ಟ್‌ಗೆ ಕಾಮೆಂಟ್ ಮಾಡುವ ಮೂಲಕ ವದಂತಿಗಳಿಗೆ ಅಂತ್ಯ ಹಾಡಿದ್ದಾರೆ.
ಮಲೈಕಾ ಮತ್ತು ಅರ್ಜುನ್ ತಮ್ಮ ಬ್ರೇಕಪ್ ಸುದ್ದಿಯ ಬಗ್ಗೆ ಮೌನವನ್ನು ಮುಂದುವರೆಸಿದರು. ಇದು ವದಂತಿಗಳಿಗೆ ಕಾರಣವಾಯಿತು. ಬ್ರೇಕಪ್ ಆದ ಕಾರಣ ಮಲೈಕಾ ಮತ್ತು ಅರ್ಜುನ್ ಅವರ ತಂದೆ ಮತ್ತು ಸಹೋದರಿಯರನ್ನು ಅನ್ ಫಾಲೋ ಮಾಡಿದ್ದಾರೆ ಎಂಬ ವರದಿಗಳು ವೈರಲ್ ಆಗಿವೆ.
ಇದನ್ನೂ ಓದಿ: Salaar : ಸಲಾರ್ ಸಿನಿಮಾದಲ್ಲಿ ಪ್ರಭಾಸ್ ಡಬಲ್ ರೋಲ್.!
ಆದರೆ ಕಳೆದ ದಿನ ಅಂತಾರಾಷ್ಟ್ರೀಯ ಶ್ವಾನ ದಿನದಂದು ಮಲೈಕಾ ಅರೋರಾ ತನ್ನ ನಾಯಿಯ ಜೊತೆಗಿನ ವಿಡಿಯೋವನ್ನು ಪೋಸ್ಟ್ ಮಾಡಿದಾಗ ಅರ್ಜುನ್ ಕಪೂರ್ ಅದಕ್ಕೆ ಪ್ರೀತಿಯಿಂದ ಕಾಮೆಂಟ್ ಮಾಡುವ ಮೂಲಕ ಬ್ರೇಕಪ್ ಸುದ್ದಿಗಳನ್ನೆಲ್ಲಾ ತಳ್ಳಿ ಹಾಕಿದ್ದರು.
ಬ್ರೇಕಪ್ ಸುದ್ದಿಗಳು ಹರಿದಾಡುತ್ತಿರುವ ಹೊತ್ತಲ್ಲಿ, ಭಾನುವಾರ ಮಧ್ಯಾಹ್ನ ಮುಂಬೈನ ಮಳೆಯ ನಡುವೆ ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಒಟ್ಟಿಗೆ ಕಾಣಿಸಿಕೊಂಡರು. ಅರ್ಜುನ್ ಕಪೂರ್ ಕಪ್ಪು ಟಿ-ಶರ್ಟ್ ಮತ್ತು ಪ್ಯಾಂಟ್‌ನಲ್ಲಿ ಸ್ಪೋರ್ಟಿ ಲುಕ್‌ನಲ್ಲಿ ಕಾಣಿಸಿಕೊಂಡರು. ಬಿಳಿ ಟಾಪ್‌ನೊಂದಿಗೆ ಮ್ಯಾಚಿಂಗ್ ಶಾರ್ಟ್ಸ್‌ನಲ್ಲಿ ಮಲೈಕಾ ಅವರು ಕಾಣಿಸಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ