ಬೆಂಗಳೂರು: ಕೊರೊನಾವೈರಸ್ ದೇಶದಲ್ಲಿ ವೇಗವಾಗಿ ಹರಡುತ್ತಿದೆ. ಈವರೆಗೆ ದೇಶಾದ್ಯಂತ 11 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಈ ವೈರಸ್ ಮನರಂಜನಾ ಪ್ರಪಂಚದ ಮೇಲೂ ಹೆಚ್ಚಿನ ಪ್ರಭಾವ ಬೀರಿದೆ. ಪ್ರಸ್ತುತ ಅಮಿತಾಬ್ ಬಚ್ಚನ್, ಅವರ ಮಗ ಅಭಿಷೇಕ್ ಬಚ್ಚನ್, ಸೊಸೆ ಐಶ್ವರ್ಯಾ ರೈ ಬಚ್ಚನ್ ಮತ್ತು ಮೊಮ್ಮಗಳು ಆರಾಧ್ಯ ಬಚ್ಚನ್ ಈ ವೈರಸ್‌ನಿಂದ ಬಳಲುತ್ತಿದ್ದು ಅವರೆಲ್ಲರನ್ನೂ ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಸ್ಯಾಂಡಲ್ ವುಡ್ ನಟ ಧ್ರುವ ಸರ್ಜಾ ತಮಗೂ ತಮ್ಮ ಪತ್ನಿಗೂ ಕರೋನಾ ದೃಢಪಟ್ಟಿರುವ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ನೀಡಿದ್ದರು. ಇದೀಗ ಅವರ ಕುಟುಂಬದವರೇ ಆದ ದಕ್ಷಿಣದ ಪ್ರಸಿದ್ಧ ನಟಿ ಐಶ್ವರ್ಯಾ ಅರ್ಜುನ್ (Aishwarya Arjun) ಅವರಿಗೂ ಕೂಡ ಕರೋನಾವೈರಸ್ ಪಾಸಿಟಿವ್ ಕಂಡು ಬಂದಿದೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಸ್ವತಃ ಸಾಮಾಜಿಕ ಮಾಧ್ಯಮದ ಮೂಲಕ ಐಶ್ವರ್ಯ ಮಾಹಿತಿ ಹಂಚಿಕೊಂಡಿದ್ದು ಕೋವಿಡ್ -19 (Covid 19) ರ ತನಿಖೆಯಲ್ಲಿ ನನಗೆ ಪಾಸಿಟಿವ್ ಕಂಡುಬಂದಿದೆ ಮತ್ತು ಪ್ರಸ್ತುತ ಹೋಂ ಕ್ವಾರಂಟೈನ್ ನಲ್ಲಿರುವುದಾಗಿ ತಿಳಿಸಿದ್ದಾರೆ.



ಸೋಮವಾರ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಐಶ್ವರ್ಯಾ ಇದನ್ನು ಖಚಿತಪಡಿಸಿದ್ದು ಇತ್ತೀಚಿಗೆ ನನಗೆ ಕೋವಿಡ್ -19 ಪಾಸಿಟಿವ್ ದೃಢಪಟ್ಟಿದೆ. ವೃತ್ತಿಪರ ವೈದ್ಯಕೀಯ ತಂಡದ ನಿರ್ದೇಶನದಂತೆ ಎಲ್ಲಾ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಾ, ನಾನು ಮನೆಯಲ್ಲಿಯೇ  ಕ್ವಾರಂಟೈನ್ ನಲ್ಲಿದ್ದೇನೆ ಎಂದು ಬರೆದಿದ್ದಾರೆ.


ಇದಲ್ಲದೆ ಕಳೆದ ಕೆಲ ದಿನಗಳಿಂದ ತನ್ನ ಸಂಪರ್ಕಕ್ಕೆ ಬಂದಿರುವವರೆಲ್ಲಾ ದಯವಿಟ್ಟು ಕಾಳಜಿ ವಹಿಸಿ. ಎಲ್ಲರೂ ಸುರಕ್ಷಿತವಾಗಿರಿ ಮತ್ತು ದಯವಿಟ್ಟು ಮಾಸ್ಕ್ ಧರಿಸಿ. ಶೀಘ್ರದಲ್ಲೇ ನನ್ನ ಆರೋಗ್ಯ ಸುಧಾರಿಸುತ್ತದೆ. ದೇವರು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ಐಶ್ವರ್ಯಾ ಅರ್ಜುನ್ ಬರೆದಿದ್ದಾರೆ.


ಐಶ್ವರ್ಯಾ ಪ್ರಸಿದ್ಧ ತಮಿಳು, ತೆಲುಗು ಮತ್ತು ಕನ್ನಡ ನಟ-ಚಲನಚಿತ್ರ ನಿರ್ಮಾಪಕ 'ಆಕ್ಷನ್ ಕಿಂಗ್' ಅರ್ಜುನ್ ಸರ್ಜಾ ಅವರ ಮಗಳು.