Arrest Warrant Against Pakistan`s Famous Actress: ಮಸೀದಿಯ ಮುಂದೆ ವಿಡಿಯೋ ಶೂಟ್ ಪ್ರಕರಣ, ಪ್ರಸಿದ್ಧ ನಟಿ ವಿರುದ್ಧ ಬಂಧನ ವಾರಂಟ್
Arrest Warrant Against Pakistan`s Famous Actress: ಮಸೀದಿಯನ್ನು ಅಪವಿತ್ರಗೊಳಿಸಿದ ಆರೋಪದ ಮೇಲೆ ಪಾಕಿಸ್ತಾನದ ಖ್ಯಾತ ನಟಿ ಸಬಾ ಕಮರ್ (Actress Saba Qamar) ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸಲಾಗಿದೆ.
ಲಾಹೋರ್: ಪಾಕಿಸ್ತಾನದ ಲಾಹೋರ್‌ನ ಐತಿಹಾಸಿಕ ಮಸೀದಿಯ (Mosque) ಮುಂದೆ ನೃತ್ಯ ಮಾಡುವ ವಿಡಿಯೋ ಚಿತ್ರೀಕರಣಕ್ಕಾಗಿ 'ಹಿಂದಿ ಮೀಡಿಯಂ' ಚಲನಚಿತ್ರ ನಟಿ ಸಬಾ ಕಮರ್ (Actress Saba Qamar) ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಜೀರ್ ಖಾನ್ ಮಸೀದಿಯನ್ನು (Wazir Khan mosque) ಅಪವಿತ್ರಗೊಳಿಸಿದ ಆರೋಪದ ಪ್ರಕರಣದಲ್ಲಿ ನಟಿ ಸಬಾ ಕಮರ್ ಮತ್ತು ಗಾಯಕರಾದ ಬಿಲಾಲ್ ಸಯೀದ್ ಅವರಿಗೆ ಲಾಹೋರ್ ಜಿಲ್ಲಾ ನ್ಯಾಯಾಲಯ ಬುಧವಾರ ಜಾಮೀನುರಹಿತ ಬಂಧನ ವಾರಂಟ್ ಜಾರಿ ಮಾಡಿದೆ.
ಮಸೀದಿ ವಜೀರ್ ಖಾನ್ ನನ್ನು ಅಪವಿತ್ರಗೊಳಿಸಿದ ಆರೋಪ:
ಪ್ರಕರಣಕ್ಕೆ ಸಂಬಂಧಿಸಿದಂತೆ ಇವರಿಬ್ಬರೂ ನ್ಯಾಯಾಲಯದ ವಿಚಾರಣೆಯಲ್ಲಿ ತಮ್ಮ ಹಾಜರಿಯನ್ನು ತಪ್ಪಿಸಿಕೊಳ್ಳುತ್ತಿದ್ದ ಹಿನ್ನಲೆಯಲ್ಲಿ ಲಾಹೋರ್‌ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ನಟಿ ಸಬಾ ಕಮರ್ (Actress Saba Qamar) ಮತ್ತು ಬಿಲಾಲ್ ಸಯೀದ್ (Bilal Saeed) ವಿರುದ್ಧ ಜಾಮೀನುರಹಿತ ವಾರಂಟ್‌ಗಳನ್ನು ಹೊರಡಿಸಿದೆ. ಇದರೊಂದಿಗೆ, ನ್ಯಾಯಾಲಯವು ಮುಂದಿನ ವಿಚಾರಣೆಗೆ ಅಕ್ಟೋಬರ್ 6 ರ ದಿನಾಂಕವನ್ನು ನಿಗದಿಪಡಿಸಿದೆ.
ಇದನ್ನೂ ಓದಿ- Deepika Padukone: ಬೆಂಗಳೂರಿನಲ್ಲಿ 7 ಕೋಟಿ ರೂ. ಮೌಲ್ಯದ ಫ್ಲ್ಯಾಟ್ ಖರೀದಿಸಿದ ದೀಪಿಕಾ ಪಡುಕೋಣೆ
ಕಳೆದ ವರ್ಷ ಆಗಸ್ಟ್ 2020 ರಲ್ಲಿ ಇಬ್ಬರೂ "ಕುಬುಲ್ ಹೈ" (Qubool hai) ಹಾಡಿನ ವೀಡಿಯೊದಲ್ಲಿ ಕೆಲಸ ಮಾಡುವಾಗ ಐತಿಹಾಸಿಕ ವಜೀರ್ ಖಾನ್ ಮಸೀದಿಯ (Wazir Khan mosque) ಒಳಗೆ ದೃಶ್ಯಾವಳಿಗಳನ್ನು ಚಿತ್ರೀಕರಿಸಿದ್ದಾರೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಭಾರೀ ಟೀಕೆಗೆ ಗುರಿಯಾಗಿದ್ದರು. ವೀಡಿಯೋ ಚಿತ್ರೀಕರಣಕ್ಕಾಗಿ ಇಬ್ಬರ ವಿರುದ್ಧ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಲು ಕೋರಿ ಸಲ್ಲಿಸಿದ ಅರ್ಜಿಯ ಆಧಾರದ ಮೇಲೆ ಕಾನೂನಿನ ಪ್ರಕಾರ ಮುಂದುವರಿಯುವಂತೆ ಸೆಷನ್ಸ್ ನ್ಯಾಯಾಲಯವು ಅಕ್ಬರಿ ಗೇಟ್ ಪೊಲೀಸ್ ಠಾಣೆಯ ಗೃಹ ಅಧಿಕಾರಿಗೆ ಸೂಚಿಸಿತ್ತು .
ತರುವಾಯ, ಅಕ್ಬರಿ ಗೇಟ್ ಪೊಲೀಸರು ಪಾಕಿಸ್ತಾನ ದಂಡ ಸಂಹಿತೆಯ ಸೆಕ್ಷನ್ 295 ರ ಅಡಿಯಲ್ಲಿ ಇಬ್ಬರ ವಿರುದ್ಧ ಪ್ರಥಮ ಮಾಹಿತಿ ವರದಿಯನ್ನು (ಎಫ್ಐಆರ್) ದಾಖಲಿಸಿದ್ದರು. ಯಾವುದೇ ವರ್ಗದ ಧರ್ಮವನ್ನು ಅವಮಾನಿಸುವ ಉದ್ದೇಶದಿಂದ ಆರಾಧನಾ ಸ್ಥಳವನ್ನು ಅಪವಿತ್ರಗೊಳಿಸುವುದು ಅಥವಾ ಆ ಧರ್ಮದವರಿಗೆ ಅವಮಾನಿಸುವ ಅಪರಾಧಗಳ ಬಗ್ಗೆ ಈ ವಿಭಾಗವು ವ್ಯವಹರಿಸುತ್ತದೆ.
ಬಳಿಕ ಈ ಇಬ್ಬರಿಗೂ ಆಗಸ್ಟ್ 15, 2020 ರಂದು ಮಧ್ಯಂತರ ಪೂರ್ವ ಜಾಮೀನು (Interim Pre-Arrest Bail) ನೀಡಲಾಯಿತು. ಆಗಸ್ಟ್ 25 ರವರೆಗೆ, ಸೆಪ್ಟೆಂಬರ್ 2020 ರಲ್ಲಿ ಮತ್ತಷ್ಟು ವಿಸ್ತರಣೆಯನ್ನು ನೀಡಲಾಯಿತು.
ಇದನ್ನೂ ಓದಿ- Sandalwood Drug Case: ನಟಿ ಅನುಶ್ರೀಗೆ ಎದುರಾಗುತ್ತಾ ಸಂಕಷ್ಟ..?
ಎಫ್‌ಐಆರ್ ಆಧಾರರಹಿತ ಮತ್ತು ಸತ್ಯಗಳಿಗೆ ವಿರುದ್ಧವಾಗಿದೆ. ಎಫ್‌ಐಆರ್‌ನಲ್ಲಿ ಆರೋಪಿಸಿರುವಂತೆ ಮಸೀದಿಯಲ್ಲಿ ಯಾವುದೇ ನೃತ್ಯ ಅಥವಾ ಸಂಗೀತವನ್ನು ಪ್ರದರ್ಶಿಸಲಾಗಿಲ್ಲ ಮತ್ತು ಇಬ್ಬರೂ ನಿರ್ದೋಷಿಗಳು ಮತ್ತು ದುರುದ್ದೇಶದಿಂದ ಈ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಇವರ ಕಾನೂನು ಸಲಹೆಗಾರರು ಹೇಳಿಕೆ ನೀಡಿದ್ದರು.
ಪ್ರಕರಣದಲ್ಲಿ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ:
ಎಫ್ಐಆರ್ ಪ್ರಕಾರ, ಸಬಾ ಕಮರ್ ಮತ್ತು ಬಿಲಾಲ್ ಸಯೀದ್ ಅವರು ಮಸೀದಿಯ ಮುಂದೆ ನೃತ್ಯ ಮಾಡುವ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ. ಪಾಕಿಸ್ತಾನದ ಜನರು ಕೂಡ ಈ ಘಟನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಪಂಜಾಬ್ ಪ್ರಾಂತ್ಯದ ಸರ್ಕಾರವು ಈ ಸಂಬಂಧ ಇಬ್ಬರು ಹಿರಿಯ ಅಧಿಕಾರಿಗಳನ್ನು ವಜಾಗೊಳಿಸಿತ್ತು. ಕಮರ್ ಮತ್ತು ಸಯೀದ್ ಕೂಡ ಸಾಮಾಜಿಕ ಮಾಧ್ಯಮದಲ್ಲಿ (Social Media) ಟೀಕೆಗೆ ಗುರಿಯಾಗಿದ್ದರು. ಬಳಿಕ ಸಬಾ ಕಮರ್ ಮತ್ತು ಬಿಲಾಲ್ ಸಯೀದ್ ಕೂಡ ಘಟನೆಯ ಬಗ್ಗೆ ಕ್ಷಮೆಯಾಚಿಸಿದರು ಮತ್ತು ವೀಡಿಯೊ ಚಿತ್ರೀಕರಣದ ಸನ್ನಿವೇಶದಲ್ಲಿ ಮತ್ತಷ್ಟು ಬೆಳಕು ಚೆಲ್ಲುವ ವಿವರಣೆಯನ್ನು ನೀಡಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.