ನವದೆಹಲಿ:  ಸಿನಿಮಾ ಆರ್ಟಿಕಲ್ 15 ರ ಪ್ರೊಮೊ ಹಾಗೂ ಟ್ರೈಲರ್ ಈಗ ಸಾಕಷ್ಟು ಸದ್ದು ಮಾಡಿದೆ. ಭಾರತೀಯ ಸಂವಿಧಾನದ ಕಲಂ 15 ರ ಮಹತ್ವವನ್ನು ಕಥೆ ಮೂಲಕ ಹೇಳ ಹೊರಟಿದೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಬಾಲಿವುಡ್ ನಟ ಆಯುಷ್ಮಾನ್ ಖುರಾನಾ #Don'tSayBhangi ಭಂಗಿ ಎಂದು ಬಳಸಕೂಡದು ಎಂದು ವಿನಂತಿಸಿಕೊಂಡಿದ್ದಾರೆ. 



COMMERCIAL BREAK
SCROLL TO CONTINUE READING

ತಮ್ಮ ಇನ್ಸ್ಟಾ ಗ್ರಾಂ ನಲ್ಲಿ ವೀಡಿಯೋವೊಂದನ್ನು ಶೇರ್ ಮಾಡಿಕೊಂಡು "ಹಮ್ ಸಬ್ ಏಕ್ ಸಮನ್ ಹೈ, ಔರ್ ಜಾನತೇ ಹೂಯಿ ಬಿ   ಹ್ಯೂ ಭಿ ಹಮ್ ಬೇದ ಭಾವ ಕರ್ತೆ ಹೈ. ಹುಮಾರಾ ಸಂವಿದಾನ್ ಭಿ ಹುಮೈನ್ ಇಸ್ಕಿ ಇಜಾಜತ್ ನಹಿ ದೇತಾ. ಆಪ್ ಭಿ ಲಿಜಿಯೆ. ಏಕ್ ಶಪತ್ #DontSayBhangi, ಅರ್ಜಿಗೆ ಸಹಿ ಮಾಡಿ. " ಎಂದು ಬರೆದುಕೊಂಡಿದ್ದಾರೆ. 


ತನಿಖಾ ಕಥಾ ಹಂದರವನ್ನು ಒಳಕೊಂಡಿರುವ ಈ ಸಿನಿಮಾ ಈಗ ಸಾಕಷ್ಟು ಕೂತುಹಲವನ್ನು ಕೆರಳಿಸಿದ್ದು ಈ ವರ್ಷ ನೋಡಲೇ ಬೇಕಾದ ಚಿತ್ರಗಳಲ್ಲಿ ಇದು ಒಂದು ಎನ್ನುವ ಮಟ್ಟಕ್ಕೆ ಈಗ ಕೂತೂಹಲವನ್ನು ಕೆರಳಿಸಿದೆ.ಈ ಚಿತ್ರದಲ್ಲಿ ಇಶಾ ತಲ್ವಾರ್, ಎಂ ನಾಸರ್, ಮನೋಜ್ ಪಹ್ವಾ, ಸಯಾನಿ ಗುಪ್ತಾ, ಕುಮುದ್ ಮಿಶ್ರಾ ಮತ್ತು ಮೊಹಮ್ಮದ್  ಅಯೂಬ್ ನಟಿಸಿದ್ದಾರೆ. ಅನುಭವ್ ಸಿನ್ಹಾ ನಿರ್ದೇಶಿಸಿದ್ದು ಬೆನಾರಸ್ ಮೀಡಿಯಾ ವರ್ಕ್ಸ್ ಮತ್ತು ಜೀ ಸ್ಟುಡಿಯೋಸ್ ನಿರ್ಮಿಸಿದೆ.