Bigg Boss : ಪುತ್ರಿ ಆಸ್ಪತ್ರೆಗೆ ದಾಖಲು.. ಬಿಗ್ಬಾಸ್ ಮನೆಯಿಂದ ಹೊರ ನಡೆದ ಅರುಣ್ ಸಾಗರ್
Bigg Boss Kannada Season 9 : ಇದು ಬಿಗ್ ಬಾಸ್ ಅಭಿಮಾನಿಗಳಿಗೆ ಶಾಕ್ ಸಂಗತಿ. ಮೊದಲ ದಿನದಿಂದಲೂ ಎಲ್ಲರನ್ನೂ ರಂಜಿಸಿದ್ದ ಅರುಣ್ ಸಾಗರ್ ಇದ್ದಕ್ಕಿದ್ದಂತೆ ಮನೆಯಿಂದ ಹೊರ ನಡೆದಿದ್ದಾರೆ.
Arun Sagar went out from Bigg Boss : ಇದು ಬಿಗ್ ಬಾಸ್ ಅಭಿಮಾನಿಗಳಿಗೆ ಶಾಕ್ ಸಂಗತಿ. ಮೊದಲ ದಿನದಿಂದಲೂ ಎಲ್ಲರನ್ನೂ ರಂಜಿಸಿದ್ದ ಅರುಣ್ ಸಾಗರ್ ಇದ್ದಕ್ಕಿದ್ದಂತೆ ಮನೆಯಿಂದ ಹೊರ ನಡೆದಿದ್ದಾರೆ. ಅವರ ಪುತ್ರಿ ಬಿದ್ದು ಗಲ್ಲಕ್ಕೆ ಗಾಯ ಮಾಡಿಕೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ವಿಚಾರವನ್ನು ಬಿಗ್ ಬಾಸ್ ಅರುಣ್ ಸಾಗರ್ ಅವರಿಗೆ ತಿಳಿಸಿದ್ದು, ಅವರು ದೊಡ್ಮನೆಯಿಂದ ಹೊರ ನಡೆದಿದ್ದಾರೆ.
ಈಗ ಬಂದಿರುವ ಸುದ್ದಿ ಮೂಲಗಳ ಪ್ರಕಾರ ಪುತ್ರಿಗೆ ತಲೆ ಸುತ್ತಿ ಬಿದ್ದಿದರಿಂದಾಗಿ ದವಡೆ ಭಾಗಕ್ಕೆ ಪೆಟ್ಟಾಗಿತ್ತು, ಈ ಹಿನ್ನೆಲೆಯಲ್ಲಿ ವೈದ್ಯರು ಶಸ್ತ್ರ ಚಿಕಿತ್ಸೆಗೆ ಸೂಚಿಸಿದ್ದರು ಎನ್ನಲಾಗಿದೆ. ಈಗ ಆಕೆಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ಆಗಿರುವ ಹಿನ್ನೆಲೆಯಲ್ಲಿ ಮತ್ತೆ ಬಿಗ್ ಬಾಸ್ ಮನೆಗೆ ಅರುಣ್ ಸಾಗರ್ ಸೇರಿಕೊಂಡಿದ್ದಾರೆ ಎನ್ನಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.