ನವದೆಹಲಿ : ಡ್ರಗ್ಸ್ ಪ್ರಕರಣದ (Drugs case) ಹಿನ್ನೆಲೆಯಲ್ಲಿ ಬಂಧನಕ್ಕೊಳಗಾಗಿರುವ ಬಾಲಿವುಡ್ ನಟ ಶಾರುಖ್ ಖಾನ್ (Shahrukh Khan)  ಅವರ ಪುತ್ರ ಆರ್ಯನ್ ಖಾನ್, ಜೈಲುವಾಸ ಇನ್ನೂ ಕೂಡಾ ಮುಂದುವರೆದಿದೆ. ಅಕ್ಟೋಬರ್ 3 ರಂದು ರೇವ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಕಾರಣಕ್ಕಾಗಿ ಆರ್ಯನ ಖಾನ್ ನನ್ನು (Aryn khan) ಬಂಧಿಸಲಾಯಿತು. ನಂತರ ಇದುವರೆಗೂ ಆರ್ಯನ್ ಖಾನ್ ಗೆ ಜಾಮೀನು ಸಿಕ್ಕಿಲ್ಲ. ಆರ್ಯನ ಖಾನ್ ಬಂಧನದ ಅನೇಕರನ್ನು ಮತ್ತೆ ವಿಚಾರಣೆಗೆ ಒಳಪಡಿಸಲಾಗಿತ್ತು. ಇದೀಗ ಬಾಲಿವುಡ್ ನಟಿ   ಅನನ್ಯಾ ಪಾಂಡೆ (Ananya Panday) ಮನೆ ಮೇಲೆಯೂ  ಎನ್ ಸಿಬಿ ದಾಳಿ ನಡೆದಿದೆ. ಎನ್‌ಸಿಬಿ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ. 


COMMERCIAL BREAK
SCROLL TO CONTINUE READING

ಇದಲ್ಲದೇ, ಬಾಲಿವುಡ್‌ಗೆ ಹೊಸ ಎಂಟ್ರಿ ನೀಡಿದ ನಟಿಯ ಮನೆಯ ಮೇಲೆ ಕೂಡಾ ಎನ್‌ಸಿಬಿ ದಾಳಿ (NCB Raid) ನಡೆದಿದೆ. ಆರ್ಯನ್ ಖಾನ್ ವಾಟ್ಸಪ್ ಚಾಟ್ ನಲ್ಲಿ ಈ ನಟಿಯ ಹೆಸರು ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ. ಈ ಚಾಟ್ ಅನ್ನು ವಿಶೇಷ NDPS ನ್ಯಾಯಾಲಯದಲ್ಲಿ ಸಲ್ಲಿಸಲಾಗಿದೆ. 


ಇದನ್ನೂ ಓದಿ : money laundering case : 200 ಕೋಟಿ ಅಕ್ರಮ ವರ್ಗಾವಣೆ ಪ್ರಕರಣದ ಆರೋಪಿ ಈ ನಟಿಯರಿಗೆ ಉಡುಗೊರೆ ನೀಡಿದ್ದಾನಂತೆ ಐಶಾರಾಮಿ ಕಾರು


ಮೂಲಗಳ ಪ್ರಕಾರ, ನ್ಯಾಯಾಲಯದಲ್ಲಿ ಸಲ್ಲಿಸಿದ ಚಾಟ್‌ನಲ್ಲಿ, ಆರ್ಯನ್ ಖಾನ್ (Aryan Khan) ಒಬ್ಬ ನಟಿಯೊಂದಿಗೆ ಮಾತುಕತೆ ನಡೆಸುತ್ತಿದ್ದು, ಇಬ್ಬರೂ ಡ್ರಗ್ಸ್ (Drugs) ಬಗ್ಗೆಯೇ  ಚರ್ಚಿಸುತ್ತಿದ್ದರು ಎನ್ನಲಾಗಿದೆ. ಆರ್ಯನ್ ಖಾನ್ ಜಾಮೀನಿನ ವಿಚಾರಣೆಗೆ ಮುನ್ನ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಜೊತೆ ಮುಂಬೈ ರೇವ್ ಪಾರ್ಟಿಯಲ್ಲಿ ಡ್ರಗ್ಸ್ ಬಗ್ಗೆ ಚರ್ಚಿಸಿರುವ ವಾಟ್ಸಾಪ್ ಚಾಟ್ (Whatsapp chat) ಅನ್ನು ಸಲ್ಲಿಸಿದೆ.


ಈ ಮಧ್ಯೆ, ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಥರ್ ರಸ್ತೆ ಜೈಲಿನಲ್ಲಿರುವ ಪುತ್ರ ಆರ್ಯನ್ ಖಾನ್ ಅವರನ್ನು ಬಾಲಿವುಡ್ ನಟ ಶಾರುಖ್ ಖಾನ್ (Shahrukh Khan) ಗುರುವಾರ ಭೇಟಿ ಮಾಡಿದ್ದಾರೆ. ಶಾರುಖ್ ಖಾನ್ ಜೈಲಿಗೆ ಆಗಮಿಸುವ ದೃಶ್ಯಾವಳಿಗಳು ಈಗ ಅಂತರ್ಜಾಲದಲ್ಲಿ ವೈರಲ್ ಆಗಿದೆ. 


ಇದನ್ನೂ  ಓದಿ : Aryan Khan Drugs Case: ಆರ್ಯನ್ ಖಾನ್ ಜಾಮೀನು ಅರ್ಜಿ ತಿರಸ್ಕರಿಸಿದ ನ್ಯಾಯಾಲಯ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ