ನವದೆಹಲಿ : ಶಾರುಖ್ ಖಾನ್ ಮತ್ತು ಗೌರಿ ಖಾನ್ ತಮ್ಮ ಪುತ್ರ ಆರ್ಯನ್ ಖಾನ್ (Aryan Khan) ಬಗ್ಗೆ ಬಹಳ ಚಿಂತಿತರಾಗಿದ್ದಾರೆ. ಡ್ರಗ್ಸ್ ಪ್ರಕರಣದ ನಂತರ, ಶಾರುಖ್ ಖಾನ್ ಮತ್ತು ಅವರ ಕುಟುಂಬವು ಅನೇಕ ಹೊಸ ನಿರ್ಧಾರಗಳನ್ನು ತೆಗೆದುಕೊಂಡಿದೆ.  ಅದರಲ್ಲಿ ಅವರ ಮಗ ಆರ್ಯನ್ ಖಾನ್ ಸುರಕ್ಷತೆಗೆ ಸಂಬಂಧಿಸಿದ ನಿರ್ಧಾರ ಕೂಡಾ ಒಂದು. ಡ್ರಗ್ಸ್ ಪ್ರಕರಣದ ನಂತರ ಇದೀಗ ಶಾರುಖ್ (Sharukh khan) ಮತ್ತು ಗೌರಿ ತೆಗೆದುಕೊಂಡಿರುವ ನಿರ್ಧಾರದಿಂದ ಇನ್ನು ಮುಂದೆ ಆರ್ಯನ ತನಗೆ ಬೇಕಾದಂತೆ ನಡೆದುಕೊಳ್ಳುವುದು ಸಾಧ್ಯವಿಲ್ಲ ಎನ್ನಲಾಗಿದೆ. 


COMMERCIAL BREAK
SCROLL TO CONTINUE READING

ಶಾರುಖ್ ಖಾನ್  (Sharukh khan) ತನ್ನ ಪುತ್ರನಿಗಾಗಿ ಪ್ರತ್ಯೇಕ ಬಾಡಿಗಾರ್ಡ್ ಇರಿಸಿರುವುದು ಇದೀಗ ಸುದ್ದಿಯಾಗಿದೆ. ಈ ಅಂಗರಕ್ಷಕ  ಸದಾ ಆರ್ಯನ್ ಚಟುವಟಿಕೆಗಳ ಮೇಲೆ ನಿಗಾ ಇಡುತ್ತಾನೆ ಎನ್ನಲಾಗಿದೆ. ಈ ಇಡೀ ಘಟನೆಯ ನಂತರ ಶಾರುಖ್ ಖಾನ್ ಬೆಚ್ಚಿ ಬಿದ್ದಿದ್ದು, ಪುತ್ರನಿಗೆ ಮೊದಲೇ  ಅಂಗ ರಕ್ಷಕನನ್ನು (Body guard) ಒದಗಿಸಿದ್ದರೆ, ಪ್ರಕರಣ ಇಷ್ಟೊಂದು ಮುಂದುವರಿಯುತ್ತಿರಲಿಲ್ಲ ಎಂದು ಶಾರುಖ್ ಯೋಚಿಸುವಂತಾಗಿದೆ ಎನ್ನಲಾಗಿದೆ.  


ಇದನ್ನೂ  ಓದಿ : Puneeth Rajkumar: ನಟ ಪುನೀತ್ ರಾಜ್ ಕುಮಾರ್ ಕಣ್ಣು ನಾಲ್ವರಿಗೆ ಅಳವಡಿಕೆ


ಶೀಘ್ರದಲ್ಲೇ ಬಾಡಿಗಾರ್ಡ್ ನೇಮಕ : 
ಶಾರುಖ್ ಖಾನ್ ವೈಯಕ್ತಿಕ ಸೆಕ್ಯೂರಿಟಿ ಇನ್ ಚಾರ್ಜ್ ರವಿ, ಪ್ರಸ್ತುತ ಇಡೀ ಕುಟುಂಬದ ಭದ್ರತೆಯನ್ನು ನೋಡಿಕೊಳ್ಳುತ್ತಿದ್ದಾರೆ. ಆದರೆ ಈಗ ಆರ್ಯನ್ ಖಾನ್ ಗೆ (Aryan Khan) ಪ್ರತ್ಯೇಕ ಬಾಡಿ ಗಾರ್ಡ್ ಅನ್ನು ನೇಮಕ ಮಾಡಲಿದ್ದಾರೆ ಎನ್ನಲಾಗಿದೆ.  


ಮನ್ನತ್‌ನಲ್ಲಿ ವಾಸವಿರುವುದಿಲ್ಲ ಆರ್ಯನ್ : 
ಶಾರುಖ್ ಖಾನ್ ಅವರ ನಿಕಟ ಮೂಲಗಳ ಪ್ರಕಾರ, ಅವರು ಶೀಘ್ರದಲ್ಲೇ ಈ ನಿರ್ಧಾರವನ್ನು ಜಾರಿಗೆ ತರಲಿದ್ದಾರೆ. ಇಷ್ಟೇ ಅಲ್ಲ, ದೀಪಾವಳಿಯ ನಂತರ ಪುತ್ರ ಆರ್ಯನ್ ಖಾನ್ ಅವರನ್ನು ತಮ್ಮ ನಿವಾಸ ಮನ್ನತ್ ನಿಂದ  ದೂರವಿಡುವ ಯೋಚನೆಯಲ್ಲಿದ್ದಾರೆ ಎನ್ನಲಾಗಿದೆ. ಮುಂಬೈನಿಂದ ದೂರದಲ್ಲಿರುವ ಅಲಿಬಾಗ್‌ಗೆ ತಮ್ಮ ಪುತ್ರನನ್ನು ಕಳುಹಿಸುವ ಬಗ್ಗೆ ಶಾರುಖ್ ಯೋಚಿಸುತ್ತಿದ್ದಾರೆ ಎನ್ನಲಾಗಿದೆ. 


ಇದನ್ನೂ  ಓದಿ : ನವೆಂಬರ್ ನಲ್ಲಿ ನಟ ರಾಜ್‌ಕುಮಾರ್ ರಾವ್ ಮತ್ತು ಪತ್ರಲೇಖಾ ಮದುವೆ?


ಮನೆ ದೂರದ ಫಾರ್ಮ್‌ಹೌಸ್ :
ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಇನ್ನು ಮುಂದೆ ಅಲಿಬಾಗ್‌ನಲ್ಲಿರುವ  ಫಾರ್ಮ್‌ಹೌಸ್  ವಾಸವಿರಲಿದ್ದಾರೆ.  ನ್ಯಾಯಾಲಯವು ಜಾಮೀನಿಗೆ ಹಾಕಿರುವ ಷರತ್ತುಗಳಲ್ಲಿ ಆರ್ಯನ್ ಖಾನ್ ಪಾಸ್‌ಪೋರ್ಟ್ ಅನ್ನು ಮುಟ್ಟುಗೋಲುಹಾಕಲಾಗಿದೆ. ಅಂದರೆ ಆರ್ಯನ್ ಖಾನ್ ಜಾಮೀನಿನ (Aryna khan bail) ಮೇಲೆ ಹೊರಗಿರುವವರೆಗೂ ಮತ್ತು ಅವರ ಮೇಲೆ ಈ ಪ್ರಕರಣ ನಡೆಯುತ್ತಿರುವವರೆಗೂ ಅವರ ಪಾಸ್‌ಪೋರ್ಟ್ ಅನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ