ವೈರಲ್ ಆಯ್ತು ಆರ್ಯನ್ ಖಾನ್ ವಿಡಿಯೋ, ಸಾಮಾಜಿಕ ಜಾಲತಾಣದಲ್ಲಿ ಹೊರಬಿತ್ತು ಆಕ್ರೋಶ
ಪ್ರಕರಣ ಬಹಿರಂಗವಾಗುತ್ತಿದಂತೆಯೇ, ಆರ್ಯನ್ ಖಾನ್ ಅನೇಕ ವೀಡಿಯೊಗಳು ಮತ್ತು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.
ನವದೆಹಲಿ : ಹೈ ಪ್ರೊಫೈಲ್ ರೇವ್ ಪಾರ್ಟಿಯ (Rave Party) ಮೇಲೆ ದಾಳಿ ನಡೆಸಿದ ಎನ್ ಸಿಬಿ, ಶನಿವಾರ 8 ಜನರನ್ನು ವಶಕ್ಕೆ ಪಡೆದಿತ್ತು. ಭಾನುವಾರ ಸಂಜೆಯವರೆಗೂ ಎಲ್ಲರನ್ನೂ ವಿಚಾರಣೆಗೆ ಒಳಪಡಿಸಲಾಗಿತ್ತು. ನಂತರ ಶಾರುಖ್ ಖಾನ್ (Sharukh khan) ಅವರ ಪುತ್ರ ಆರ್ಯನ್ ಖಾನ್ (aryan khan)ಸೇರಿದಂತೆ ಎಲ್ಲಾ ಆರೋಪಿಗಳನ್ನು ಬಂಧಿಸಲಾಯಿತು.
ವೈರಲ್ ಆಗಿದೆ ಆರ್ಯನ್ ವಿಡಿಯೋ :
ಪ್ರಕರಣ ಬಹಿರಂಗವಾಗುತ್ತಿದಂತೆಯೇ, ಆರ್ಯನ್ ಖಾನ್ (Aryan khan) ಅನೇಕ ವೀಡಿಯೊಗಳು ಮತ್ತು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ (Social meia) ವೈರಲ್ ಆಗುತ್ತಿವೆ. ಈ ಮಧ್ಯೆ, ಆರ್ಯನ್ ಖಾನ್ ಹಳೆಯ ವಿಡಿಯೋ ಕೂಡ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ, ಆರ್ಯನ್ ಖಾನ್ ಸ್ಟಂಟ್ ಮಾಡುತ್ತಿರುವುದನ್ನು ಕಾಣಬಹುದು. ಈ ವಿಡಿಯೋವನ್ನು (video) 2013 ರಲ್ಲಿ ಚಿತ್ರೀಕರಿಸಲಾಗಿದೆ. ಇದನ್ನು ಆರ್ಯನ್ ತನ್ನ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ : Income Tax Department recruitment 2021: ಆದಾಯ ತೆರಿಗೆ ಇಲಾಖೆಯಲ್ಲಿನ ಕೆಲಸಕ್ಕೆ ಈಗಲೇ ಅರ್ಜಿ ಹಾಕಿ
ಹೊರ ಬಿಟ್ಟು ಜನರ ಆಕ್ರೋಶ :
ಶರ್ಟ್‌ಲೆಸ್ ಆರ್ಯನ್ ಖಾನ್ ಒಂದರ ನಂತರ ಒಂದರಂತೆ ಸ್ಟಂಟ್ ಮಾಡುತ್ತಿರುವುದು ವಿಡಿಯೋದಲ್ಲಿ ಕಂಡುಬರುತ್ತದೆ. ಈ ವಿಡಿಯೋ (Viral video) ನೋಡಿ ಅನೇಕ ಜನರು ಕಮೆಂಟ್ ಮಾಡುತ್ತಿದ್ದಾರೆ. ಈ ಕಮೆಂಟ್ ಗಳಲ್ಲಿ ಸಾರ್ವನಿಕರ ಅಕ್ರೋಶವನ್ನು ಕಾಣಬಹುದು.
Bhabanipur bypoll:'ನಾನೇ ಪಂದ್ಯ ಶ್ರೇಷ್ಠಳು' ಎಂದ ಪ್ರಿಯಾಂಕಾ ತಿಬ್ರೆವಾಲ್
ಎನ್‌ಸಿಬಿಯಿಂದ ಬಂಧನ :
ಈ 8 ಜನರಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ (Sharukh khan) ಅವರ ಮಗ ಆರ್ಯನ್ ಖಾನ್ ಹೆಸರನ್ನು ಕೂಡ ಸೇರಿಸಲಾಗಿದೆ. ಎನ್‌ಸಿಬಿ ಮೊದಲು ಅವರೆಲ್ಲರನ್ನೂ ವಿಚಾರಣೆಗೆ ಒಳಪಡಿಸಿತು ಮತ್ತು ನಂತರ ಭಾನುವಾರ ಮಧ್ಯಾಹ್ನ, ನಿಷೇಧಿತ ವಸ್ತುಗಳ ಬಳಕೆ, ಮಾರಾಟ ಮತ್ತು ಖರೀದಿಯಲ್ಲಿ ಭಾಗಿಯಾದ ಆರೋಪದಡಿಯಲ್ಲಿ ಆರ್ಯನ್ ಸೇರಿದಂತೆ 3 ಆರೋಪಿಗಳನ್ನು ಬಂಧಿಸಲಾಯಿತು. ಎನ್‌ಸಿಬಿ ಪ್ರಕಾರ, ಆರೋಪಿಗಳಿಂದ 13 ಗ್ರಾಂ ಕೊಕೇನ್, 5 ಗ್ರಾಂ ಎಂಡಿ, 21 ಗ್ರಾಂ ಚರಸ್ ಮತ್ತು ಎಮ್‌ಡಿಎಂಎ 22 ಟ್ಯಾಬ್ಲೆಟ್‌ಗಳು , 1.33 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಸಂಜೆ 6: 30 ಕ್ಕೆ, ಮೂವರು ಆರೋಪಿಗಳನ್ನು ಮುಂಬೈನ ಫೋರ್ಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಅಲ್ಲಿಂದ ಒಂದು ದಿನದ ಎನ್ ಸಿಬಿ ಕಸ್ಟಡಿಗೆ ಪಡೆಯಲಾಯಿತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.