BBKS 9 : ಬಿಗ್‌ ಬಾಸ್‌ ಮೂರನೇ ವಾರಕ್ಕೆ ಕಾಲಿಟ್ಟಿದೆ. ಐಶ್ವರ್ಯ ಪಿಸ್ಸೆ ಎಲಿಮಿನೇಟ್‌ಗೆ ಮೊದಲ ಬಲಿಯಾದ್ರೆ, ನವಾಜ್‌ ಅವಾಜ್‌ ದೊಡ್ಮನೆಯಲ್ಲಿ ನಡಿಲಿಲ್ಲ. ಸದ್ಯ ಆರ್ಯವರ್ಧನ್‌ ಗುರೂಜಿ ಮನೆಯಿಂದ ಹೊರ ಹೋಗುವ ಮಾತನಾಡುತ್ತಿದ್ದಾರೆ. ಅಲ್ಲದೆ, ಇಂದು ನಡೆದ ಗೋಲ್ಡ್‌ ಮೈನ್‌ ಟಾಸ್ಕ್‌ ವೇಳೆ ಬಿಗ್‌ಬಾಸ್‌ ರೂಲ್ಸ್‌ ಉಲ್ಲಂಘಿಸಿದ್ದು ಅಲ್ಲದೆ, ಮನೆಯ ಸದಸ್ಯರ ಮೇಲೆ ಅವಾಜ್‌ ಹಾಕಿದ್ದಾರೆ.


COMMERCIAL BREAK
SCROLL TO CONTINUE READING

ಬಿಗ್‌ ಬಾಸ್‌ನಲ್ಲಿ ಗೋಲ್ಡ್‌ ಮೈನಿಂಗ್‌ ಟಾಸ್ಕ್‌ ನೀಡಲಾಗಿದೆ. ಆಟದ ವೇಳೆ ಆರ್ಯವರ್ಧನ್‌ ಗುರೂಜಿ ಮನೆಯವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕ್ಯಾಪ್ಟನ್‌ ಗುರೂಜಿ ವರ್ಸಸ್‌ ಮನೆ ಸದಸ್ಯರ ನಡುವೆ ಟಾಕ್‌ ವಾರ್‌ ಆಗಿದೆ. ಈ ವೇಳೆ ನಿಯಮ ಮೀರಿ ಆಟ ಆಡಿದ್ರೆ ಆಚೆ ಹೋಗಿ ಎಂದು ಸ್ಪರ್ಧಿಗಳು ಗುಡುಗಿದ್ದಾರೆ. ಅದಕ್ಕೆ ಗುರೂಜಿ ʼನಾನು ಇರೋದೆ ಹೀಗೆ.. ಏನ್‌ ಮಾಡ್ತೀರಾ, ಇಲ್ಲಿ ನಾನೇ ನಾಯಕ ನನ್ನ ಮಾತೇ ನಡಿಬೇಕುʼ ಎಂದು ಅವಾಜ್‌ ಹಾಕಿದ್ದಾರೆ. ಅಲ್ಲದೆ, ನಿಯಮ ಮೀರಿದ ತಪ್ಪಿಗೆ ಮನೆಯ ಮಂದಿ ಕ್ಯಾಪ್ಟನ್‌ ದಂಡ ಪಾವತಿಸಬೇಕು ಎಂದಾಗ ಗುರೂಜಿ ಕೆಂಡಾಮಂಡಲವಾಗಿದ್ದಾರೆ.


ಇದನ್ನೂ ಓದಿ: ಸಾನ್ಯಾ ಇರೋವರೆಗೂ ಬಿಗ್‌ಬಾಸ್‌ಗೆ ಸೋಲಿಲ್ಲ : ದೊಡ್ಮನೆ ಸೆಂಟರ್‌ ಅಟ್ರ್ಯಾಕ್ಷನ್‌ ಈ ಬೇಬಿ ಡಾಲ್


ಸದ್ಯ ಬಿಗ್‌ಬಾಸ್‌ ಟಾಸ್ಕ್‌ಗೆ ಮನೆ ಮಂದಿ ನಡುವೆ ಭಾರಿ ಪೈಪೋಟಿ ಶುರುವಾಗಿದೆ. ಪ್ರಾಂಕ್‌ ಅಂತೂ ಗುರೂಜಿಗೆ ಕುತ್ತಿಗೆ ಹಗ್ಗವಾಗಿತ್ತು. ಇನ್ನು ಪ್ರಾಂಕ್‌ನಿಂದ ಮನನೊಂದ ಆರ್ಯವರ್ಧನ್‌ ಆಪ್ಷನ್‌ ಇದ್ರೆ ಮನೆಯಿಂದ ಹೊರಗೆ ಕಳುಹಿಸಿ ಎಂದು ಬಿಗ್‌ಬಾಸ್‌ಗೆ ಕೇಳುವುದಾಗಿ ಹೇಳಿದ್ದಾರೆ. ಒಟ್ಟಾರೆಯಾಗಿ ದಿನಗಳು ಹತ್ತಿರ ಬಂದಂತೆ ಸ್ಪರ್ಧಿಗಳ ನಡುವೆ ವಿನ್ನಿಂಗ್‌ ಪೈಟ್‌ ತಾರಕ್ಕೇರಿದೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.