BBK9 : ರಾತ್ರೋರಾತ್ರಿ ಬಿಗ್‌ಬಾಸ್‌ ಮನೆಯಿಂದ ಆರ್ಯವರ್ಧನ್‌ ಗುರೂಜಿ ಔಟ್‌ ಆಗಿದ್ದಾರೆ. ಮಂಗಳವಾರ ಸಂಚಿಕೆಯಲ್ಲಿ ಗುರೂಜಿ ಎಲಿಮಿನೆಟ್‌ ಆಗಿದ್ದರು. ಬಿಗ್‌ಹೌಸ್‌ನಿಂದ ಹೊರಬರುವಾಗ ಅವರು ಮಗುವಿನಂತೆ ಕಣ್ಣೀರು ಹಾಕಿದ್ದರು. ಇದೀಗ ಮತ್ತೇ ರೂಪೇಶ್‌ ಶೆಟ್ಟಿ ನೆನೆದು ಆರ್ಯವರ್ಧನ್‌ ಗುರೂಜಿಯವರು ಕಣ್ಣೀರಿಟ್ಟಿದ್ದಾರೆ. ಅಲ್ಲದೆ, ರೂಪೇಶ್‌ ಗೆಲ್ಬೇಕು, ಅವನು ನನ್ನ ಮನಗ ರೀತಿ ಅಂತ ಬಾವುಕವಾಗಿ ಮಾತನಾಡಿದ್ದಾರೆ.


COMMERCIAL BREAK
SCROLL TO CONTINUE READING

ಹೌದು.. ಬಿಗ್‌ ಮನೆಯಲ್ಲಿ ಈಗ ಕೇವಲ 5 ಜನರಿದ್ದಾರೆ. ಅವರ ನಡುವೆ ಹೋರಾಟ ಶುರುವಾಗಿದೆ. ಯಾರು ಗೆಲ್ತಾರೆ ಎನ್ನುವ ಕುತೂಹಲವೂ ಸಹ ಪ್ರೇಕ್ಷಕರಲ್ಲಿ ಹೆಚ್ಚಾಗಿದೆ. ಇದೀಗ ಬಿಗ್‌ಬಾಸ್‌ ಕನ್ನಡ ಸೀಸನ್‌ 9ರಿಂದ ಹೊರಬಂದಿರುವ ಗುರೂಜಿ ಜೀ ಕನ್ನಡ ಸುದ್ದಿವಾಹಿನಿಯ ಜೊತೆ ಮನಬಿಚ್ಚಿ ಮಾತನಾಡಿದ್ದಾರೆ. ಈ ವೇಳೆ ಬಾವುಕರಾದ ಅವರು, ಮೊದಲಿಗೆ ಒಂದು ಮಾತು ಹೇಳ್ತೀನಿ, ರೂಪೇಶ್‌ ಶೆಟ್ಟಿ ಗೆಲ್ಬೇಕು. ಅವನು ನನ್ನ ಮಗನ ರೀತಿ, ಇದನ್ನ ನಾನು ನೂರಾರು ಅರ್ಥದಿಂದ ಹೇಳುತ್ತಿದ್ದೇನೆ ಎಂದರು.


ಇದನ್ನೂ ಓದಿ: BBK9 : ವಾಪಾಸ್‌ ಬನ್ನಿ ಗುರೂಜಿ.. ಅಂತ ಬಿಕ್ಕಿ ಬಿಕ್ಕಿ ಅತ್ತ ರೂಪೇಶ್ ಶೆಟ್ಟಿ..!


ಅಲ್ಲದೆ, ನನಗೆ ಪಕ್ಕ ಗೊತ್ತಿತ್ತು.. ಮಿಡ್‌ನೈಟ್‌ ನಾನು ಬಿಗ್‌ಬಾಸ್‌ನಿಂದ ಔಟ್‌ ಆಗ್ತೀನಿ ಅಂತ. ರಾಕಿ ಆವಾಗ ಆವಾಗ ಕೇಳಿತ್ತಿದ್ದ ನಾನು ಹೇಳಿದ್ದೇ 4 ರಿಂದ 7 ಸಂಖ್ಯೆಯ ಒಳಗೆ ಇರೋರು ಹೋಗ್ತಾರೆ ಅಂತ. ಅದರಂತೆ ನಾನು ಹೊರ ಬಂದಿದ್ದೇನೆ. ನಾನು ಗೆಸ್‌ ಮಾಡಿದ್ದೆ. ಆದ್ರೆ ಯಾವಾಗ್ಲೂ ನಾನು ಒಂದು ಮಾತು ಹೇಳ್ತೀನಿ ರೂಪೇಶ್‌ ಶೆಟ್ಟಿ ಗೆಲ್ಬೇಕು.. ಗೆಲ್ಲು ಮಗನೇ ನಾನು ನಿನ್ನ ಹಿಂದೆ ಇರ್ತೀನಿ ಅಂತ ಗುರೂಜಿ ಕಣ್ಣೀರು ಸುರಿಸಿದ್ರು. ಅಲ್ಲದೆ, ಎರಡನೇ ವಾರವೇ ನನಗೆ ನಾನು ಮೆನೆಯಿಂದ ಹೊರ ಬರ್ತೀನಿ ಅಂತ ಗೊತ್ತಿತ್ತು. ಕಷ್ಟ ಪಟ್ಟ ಆಟ ಆಡಿ ಕಿಚ್ಚ ಸುದೀಪ್‌ ಅವರ ಹತ್ರ ಚಪ್ಪಾಳೆ ತಗೊಂಡೆ. ಕನ್ನಡಿಗರ ಮನ ಗೆದ್ದೆ.


ನಾನು ಸಣ್ಣ ಪುಟ್ಟು ತಪ್ಪು ಮಾಡಿದ್ದೇನೆ. ತಪ್ಪಾಗಿ ಮಾತನಾಡಿದ್ದೇನೆ. ನಾನು ಇಲ್ಲಿಂದಲೇ ಸ್ಪರ್ಧಿಗಳಿಗೆಲ್ಲರಿಗೂ ಸ್ವಾರಿ ಕೆಳ್ತೀನಿ. 16 ಜನರಿಗೂ ಕ್ಷಮಿಸಿ ಅಂತ ಕೆಳ್ಕೋತೀನಿ. ಚನ್ನಾಗಿ ಆಟ ಆಡಿದಿನಿ. ನಾನು ಬಿಗ್‌ಬಸ್‌ ಮನೆ ಅಂದುಕೊಂಡಿಲ್ಲ. ಅಲ್ಲಿ ಇದ್ದವರೆಲ್ಲರೂ ನನ್ನ ಮನೆಯವರು ಅಂತ ತಿಳಿದುಕೊಂಡಿದ್ದೆ. ದೀಪಿಕಾ ದಾಸ್‌ ಹೊರಗೆ ಹೋಗಿ ಬಂದ್ರು, ಆಗ ನಾನು 5 ಜನರಲ್ಲಿ ಒಬ್ಬ ಅಂದುಕೊಂಡಿದ್ದೆ. ಪರವಾಗಿಲ್ಲ.. ಕರ್ನಾಟಕ ಜನರು ನನ್ನ ನೋಡಿ ಖುಷಿ ಪಟ್ಟಿದಾರೆ. ಅಷ್ಟು ಸಾಕು ಅಂತ ಆರ್ಯವರ್ಧನ್‌ ಗುರೂಜಿ ಹೇಳಿದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.