Ashika Ranganath in Megastar Chiranjeevi movie : ಚುಟು ಚುಟು ಚೆಲುವೆ ಆಶಿಕಾ ರಂಗನಾಥ್ ಕನ್ನಡದ ಜೊತೆಗೆ ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 


COMMERCIAL BREAK
SCROLL TO CONTINUE READING

ಜೂನಿಯರ್ ಎನ್ ಟಿಆರ್ ಸಹೋದರ ಕಲ್ಯಾಣ್ ರಾಮ್ ಅಭಿನಯದ ಅಮಿಗೋಸ್‌ ಸಿನಿಮಾ ಮೂಲಕ ತೆಲುಗಿಗೆ ಎಂಟ್ರಿ ಕೊಟ್ಟಿದ್ದ  ಆಶಿಕಾ ಆ ಬಳಿಕ  ನಾ ಸಾಮಿ ರಂಗ ಚಿತ್ರದಲ್ಲಿ ಅಕ್ಕಿನೇನಿ ನಾಗಾರ್ಜುನ್ ಜೋಡಿಯಾಗಿ ನಟಿಸಿದ್ದರು. ಈಗ ಮೆಗಾ ಸ್ಟಾರ್ ಚಿರಂಜೀವಿ ಜೊತೆ ನಟಿಸುವ ಅವಕಾಶ ತಮ್ಮದಾಗಿಸಿಕೊಂಡಿದ್ದಾರೆ. 


ಇದನ್ನು ಓದಿ : ಚನ್ನಗಿರಿ ಪ್ರಕರಣದಲ್ಲಿ DYSP, CPI ಅಮಾನತ್ತು: ಪೊಲೀಸ್ ಬಲ ಕುಗ್ಗಿಸಿದ ಸಿಎಂ


ಚಿರು ಅಭಿನಯಿಸುತ್ತಿರುವ ‘ವಿಶ್ವಂಭರ’ ಚಿತ್ರದಲ್ಲಿ ಚುಟುಚುಟು ಚೆಲುವೆ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. ಅವರ ಪಾತ್ರದ ಬಗ್ಗೆ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿದೆ.


ಮೆಗಾಸ್ಟಾರ್ ಚಿರಂಜೀವಿಗೆ ನಾಯಕಿಯಾಗಿ ತ್ರಿಷಾ ಕೃಷ್ಣನ್​ ನಟಿಸಲಿದ್ದಾರೆ. ಯು ವಿ ಕ್ರಿಯೇಷನ್ ಬ್ಯಾನರ್ ನಡಿ ವಿಕ್ರಮ್, ವಂಶಿ ಹಾಗೂ ಪ್ರಮೋದ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಬಿಂಬಿಸಾರ ಚಿತ್ರ ನಿರ್ದೇಶಿಸಿದ್ದ ವಸಿಷ್ಠ ವಿಶ್ವಂಭರ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. 


ಇದನ್ನು ಓದಿ : Gangs Of Godavari : ಗ್ಯಾಂಗ್ಸ್ ಆಫ್ ಗೋದಾವರಿ ಟ್ರೇಲರ್ ರಿಲೀಸ್ ಹೇಗಿದೆ ಗೊತ್ತಾ! 


ಆಸ್ಕರ್ ವಿಜೇತ ಎಂಎಂ ಕೀರವಾಣಿ ಅವರು ಈ ಸಿನಿಮಾಗೆ ಸಂಗೀತ ಮಾಡುತ್ತಿದ್ದಾರೆ. ಚೋಟಾ ಕೆ ನಾಯ್ಡು    ಛಾಯಾಗ್ರಹಣ, ರಾಮ ಲಕ್ಷ್ಮಣ ಸಾಹಸ ನಿರ್ದೇಶನ ವಿಶ್ವಂಭರ ಚಿತ್ರಕ್ಕಿದೆ. 2025ರ ಸಂಕ್ರಾಂತಿ ಹಬ್ಬಕ್ಕೆ ಸಿನಿಮಾ ಬಿಡುಗಡೆಯಾಗಲಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ