`ಕೆಜಿಎಫ್-2` ಟ್ರೇಲರ್ ನೋಡಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಏನಂದ್ರು ಗೊತ್ತಾ..?
'ಕೆಜಿಎಫ್-2' (KGF Chapter 2 Trailer) ಸಿನಿಮಾ ಎಲ್ಲೆಲ್ಲೂ ಹವಾ ಎಬ್ಬಿಸಿದೆ ಅದು ಎಷ್ಟರಮಟ್ಟಿಗೆ ಅಂದ್ರೆ ಹಾಲಿವುಡ್ ಸಿನಿಮಾ ಜಗತ್ತು ಕೂಡ 'ಕೆಜಿಎಫ್-2' ಆರ್ಭಟಕ್ಕೆ ಬೆಚ್ಚಬಿದ್ದಿದೆ.ಅದರಲ್ಲೂ ಕನ್ನಡಿಗರು ಹೆಮ್ಮೆಯಿಂದ 'ಕೆಜಿಎಫ್' ನಮ್ಮ ಭಾಷೆಯ ಸಿನಿಮಾ ಎಂದು ಎಲ್ಲೆಡೆ ಸಾರುವಂತಾಗಿದೆ.ಇನ್ನು ಈ ಹೊತ್ತಲ್ಲೇ ದೊಡ್ಮನೆ ಸೊಸೆ ಹಾಗೂ ಕರ್ನಾಟಕ ರತ್ನ ಡಾ. ಪುನೀತ್ ರಾಜ್‍ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್ 'ಕೆಜಿಎಫ್-2' ಚಿತ್ರದ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ್ದಾರೆ.
KGF 2 Trailer) ಟ್ರೇಲರ್ ನೋಡಿ ತಮ್ಮ ಅಧಿಕೃತ ಖಾತೆಯಲ್ಲಿ ಟ್ಬೀಟ್ ಮಾಡಿರುವ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರು, ' #KGFChapter2 ಟ್ರೇಲರ್ ಅದ್ಭುತವಾಗಿದೆ. 💥Best wishes to the entire team and @hombalefilms for producing amazing films right from 'Ninnindale'. A big thanks to you all for dedicating this film to Appu 🙏' ಎಂದು ಬರೆದುಕೊಂಡಿದ್ದಾರೆ. ಜೊತೆಗೆ @VKiragandur @TheNameIsYash @prashanth_neel ಅವರನ್ನು ಟ್ಯಾಗ್ ಮಾಡಿ ಕನ್ನಡ ಚಿತ್ರಕ್ಕೆ ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದಾರೆ. ಈ ಮೂಲಕ ದೊಡ್ಮನೆಯ ಪರಂಪರೆಯನ್ನು ದೊಡ್ಮನೆಯ ಸೊಸೆ ಮುಂದುವರಿಸಿಕೊಂಡು ಬಂದಿದ್ದಾರೆ.
ಈ ಮೊದಲಿನಿಂದಲೂ ಉತ್ತಮ ಕನ್ನಡ ಚಿತ್ರಗಳಿಗೆ ಡಾ.ರಾಜ್‍ಕುಮಾರ್ ಅವರ ಕುಟುಂಬ ಸದಸ್ಯರು ಬೆನ್ನುತಟ್ಟಿ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ತಮ್ಮ ಬ್ಯಾನರ್ ಅಡಿಯಲ್ಲಿ ಪ್ರತಿಬಾರಿ ಹೊಸ ಸಿನಿಮಾ ತೆಗೆದಾಗಲೂ ಹೊಸ ನಟ ಹಾಗೂ ನಟಿಯರನ್ನು ಕನ್ನಡ ಚಿತ್ರರಂಗಕ್ಕೆ ದೊಡ್ಮನೆ ಸದಸ್ಯರು ಪರಿಚಯಿಸುತ್ತಾ ಬಂದಿದ್ದಾರೆ.ಈಗಲೂ ಅಷ್ಟೇ 'ಕೆಜಿಎಫ್-2' ಚಿತ್ರಕ್ಕೆ ನಟ ಶಿವಣ್ಣ ಸೇರಿದಂತೆ ಪವರ್ ಸ್ಟಾರ್ ಡಾ.ಪುನೀತ್ ರಾಜ್‍ಕುಮಾರ್ ಅವರ ಪತ್ನಿ ಅಶ್ವಿನಿ ಅವರು ಕೂಡ ಬೆಂಬಲ ಸೂಚಿಸಿದ್ದಾರೆ. ಈ ಮೂಲಕ ದೊಡ್ಮನೆಯ ಪರಂಪರೆಯನ್ನು ದೊಡ್ಮನೆ ಸೊಸೆ ಮುಂದುವರಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.