ಬೆಂಗಳೂರು: ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ವಿಶೇಷವಾಗಿ ಕರ್ನಾಟಕ ರತ್ನ ಡಾ.ರಾಜ್‌ಕುಮಾರ್ ಮತ್ತು ಡಾ.ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ವಾರ್ಷಿಕ ಫಲಪುಷ್ಪ ಪ್ರದರ್ಶನದಲ್ಲಿ ದಿವಂಗತ ನಟ ರಾಜಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಅವರಿಗೆ ಪುಷ್ಪ ನಮನ ಸಲ್ಲಿಸಲಾಗಿದೆ.  ಈ ಕುರಿತಂತೆ ಟ್ವೀಟ್ ಮಾಡಿರುವ ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಎಲ್ಲರ ಪ್ರೀತಿಗೆ ಸದಾ ಚಿರಋಣಿ ಎಂದಿದ್ದಾರೆ.


COMMERCIAL BREAK
SCROLL TO CONTINUE READING

ಸಣ್ಣ ವಿಡಿಯೋ ತುಣುಕಿನೊಂದಿಗೆ ಟ್ವೀಟ್ ಮಾಡಿರುವ ಡಾ. ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಕರ್ನಾಟಕ ಸರ್ಕಾರ, ಲಾಲ್‌ಬಾಗ್‌ ಅಧಿಕಾರಿಗಳು ಹಾಗೂ ಎಲ್ಲಾ ಅಭಿಮಾನಿ ದೇವರುಗಳು ಅಪ್ಪು ಅವರ ಮೇಲೆ ಇಟ್ಟಿರುವ ಅಪರಿಮಿತ ಪ್ರೀತಿಗೆ ನಾನು ಸದಾ ಚಿರಋಣಿ ಎಂದು ಬರೆದಿದ್ದಾರೆ.


Jaggesh On Ravichandran: ಕಷ್ಟದ ಕಾಲದಲ್ಲಿ ನೆರಳಾಗಿ ನಿಂತವರು ಕ್ರೇಜಿ ಸ್ಟಾರ್: ಜಗ್ಗೇಶ್


ಕಳೆದ ಎರಡು ವರ್ಷಗಳಿಂದ ಕರೋನಾವೈರಸ್ ಕಾರಣದಿಂದಾಗಿ ಕಳೆಗುಂದಿದ್ದ ಲಾಲ್‌ಬಾಗ್‌  ಫಲಪುಷ್ಪ ಪ್ರದರ್ಶನವನ್ನು ಈ ವರ್ಷ ಆಗಸ್ಟ್ 5 ರಿಂದ 15 ರವರೆಗೆ  ಆಯೋಜಿಸಲಾಗಿದೆ. ಈ ವರ್ಷ ಲಾಲ್‌ಬಾಗ್‌ನ ಫಲಪುಷ್ಪ ಪ್ರದರ್ಶನದಲ್ಲಿ ಡಾ ರಾಜ್‌ಕುಮಾರ್, ಅವರ ಪತ್ನಿ ಪಾರ್ವತಮ್ಮ ರಾಜ್‌ಕುಮಾರ್ ಮತ್ತು ಪುತ್ರ ಪುನೀತ್ ರಾಜ್‌ಕುಮಾರ್ ಅವರ ಪ್ರತಿಮೆಗಳು ಆಕರ್ಷಕ ಕೇಂದ್ರಬಿಂದುವಾಗಿದೆ.


ಲಾಲ್‌ಬಾಗ್‌ನ ಫಲಪುಷ್ಪ ಪ್ರದರ್ಶನದಲ್ಲಿ ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರ 30 ಅಡಿ ಎತ್ತರದ ಪ್ರತಿಮೆ ಜೊತೆಗೆ ಡಾ ರಾಜ್‌ಕುಮಾರ್ ಅವರ ಒಂದು ಪ್ರಸಿದ್ಧ ಪಾತ್ರದ ಗೆಟ್-ಅಪ್‌ ಅನ್ನು ನಿರ್ಮಿಸಲಾಗಿದೆ. ಲಾಲ್‌ಬಾಗ್‌ನಲ್ಲಿ ಆಯೋಜಿಸಿರುವ  ಫಲಪುಷ್ಪ ಪ್ರದರ್ಶನದಲ್ಲಿ ಕರ್ನಾಟಕ ರತ್ನ ಡಾ.ರಾಜ್‌ಕುಮಾರ್ ಹಾಗೂ ಡಾ.ಪುನೀತ್ ರಾಜ್‌ಕುಮಾರ್ ಸಂಸ್ಮರಣಾ ಫಲಪುಷ್ಪ ಪ್ರದರ್ಶನ ಎಲ್ಲರ ಗಮನಸೆಳೆಯುತ್ತಿದೆ. ಸ್ವಾತಂತ್ರ್ಯದ 75 ವರ್ಷಗಳ ಆಚರಣೆಯು ಫಲಪುಷ್ಪ ಪ್ರದರ್ಶನವನ್ನು ಇನ್ನಷ್ಟು ಆಕರ್ಷಕವಾಗಿಸಿದೆ. 


ಇದನ್ನೂ ಓದಿ- WATCHO OTT: ಹಿಂದಿಯಲ್ಲಿ ಡಬ್ ಮಾಡಲಾದ 34 ಕೊರಿಯನ್ ಸಿರೀಸ್ ನೋಡಬೇಕೇ? ಹಾಗಾದ್ರೆ ಈ OTT ಬಳಸಿ


ಕಳೆದ ವರ್ಷ (2021)  ಅಕ್ಟೋಬರ್‌ನಲ್ಲಿ ಹಠಾತ್ ಹೃದಯಾಘಾತದಿಂದ ಪುನೀತ್ ರಾಜ್‌ಕುಮಾರ್ ನಿಧನರಾಗಿದ್ದರು. ಅವರಿಗೆ 46 ವರ್ಷ ವಯಸ್ಸಾಗಿತ್ತು. ಪುನೀತ್ ನಮ್ಮೆಲ್ಲರನ್ನೂ ಅಗಲಿ ಹತ್ತು ತಿಂಗಳಾದರೂ ಪ್ರೀತಿಯ ಅಪ್ಪು ನಮ್ಮೊಂದಿಗಿಲ್ಲ ಎಂಬುದನ್ನು ಯಾರಿಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರ ನಗು ಮುಖವನ್ನು ಯಾರೂ ಮರೆಯಲು ಸಾಧ್ಯವೇ ಇಲ್ಲ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.