ಬೆಂಗಳೂರು : ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಅಭಿನಯದ ಕೊನೆಯ ಚಿತ್ರ ಗಂಧದ ಗುಡಿ ಅಕ್ಟೋಬರ್ 28 ರಂದು ಬಿಡುಗಡೆಯಾಗಲಿದೆ. ಸದ್ಯ ಫ್ಯಾನ್ಸ್‌ಗಳಿಗೊಂದು ಸಿಹಿ ಸುದ್ದಿ ಕಾಯ್ದಿದ್ದು, ಅಪ್ಪು ನೆನಪಿಗಾಗಿ ಅವರ ಪತ್ನಿ ಅಶ್ವಿನಿ ಪುನೀತ್‌ ರಾಜಕುಮಾರ್‌ ಅವರು ಗಂಧದಗುಡಿಗೆ ಧ್ವನಿ ನೀಡಲಿದ್ದಾರೆ. 


COMMERCIAL BREAK
SCROLL TO CONTINUE READING

ಹೌದು, ಕನ್ನಡಿಗರ ಎದೆಯಾಳುವ ದೊರೆ ನಟ ಪುನೀತ್ ರಾಜ್ ಕುಮಾರ್ ನಮ್ಮನ್ನ ಅಗಲಿ ಇದೆ ತಿಂಗಳು 29ಕ್ಕೆ ಒಂದು ವರ್ಷ ಕಳೆಯಲಿದೆ. ಗಂಧದ ಗುಡಿ ಅಕ್ಟೋಬರ್ 28 ರಂದು ಬಿಡುಗಡೆಯಾಗಲಿದೆ. ಇನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಗಂಧದ ಗುಡಿ ಚಿತ್ರಕ್ಕೆ ಧ್ವನಿ ನೀಡಿದ್ದು, ಕಾನನದ ದೃಶ್ಯ ಕಾವ್ಯದ ನರೇಟ್ ಮಾಡಲಿದ್ದಾರೆ. 


ಇದನ್ನೂ ಓದಿ: ʼಡಿವೈನ್‌ ಸ್ಟಾರ್‌ʼ ಆಗ್ತಾರಾ ರಿಷಬ್‌ ಶೆಟ್ಟಿ : ಕರಾವಳಿ, ನ್ಯಾಚುರಲ್‌ ಸ್ಟಾರ್‌ ಅಂತಿದಾರೆ ಫ್ಯಾನ್


ಅಪ್ಪು ಕನಸ್ಸನ್ನು ಬೆಳ್ಳಿ ಪರದೆ ಮೇಲೆ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. ಅಲ್ಲದೆ, ಫಸ್ಟ್ ಟೈಮ್ ಅಶ್ವಿನಿ ಪುನೀತ್ ರಾಜ್ ಕುಮಾರ್ ಆಪ್ ಸ್ಕ್ರೀನ್ ನಿಂದ ಆನ್ ಸ್ಕ್ರೀನ್ ಬಂದಿರುವುದು ಅಭಿಮಾನಿಗಳಿಗೆ ಡಬಲ್‌ ಖುಷಿ ನೀಡಿದೆ. ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾದ ಅಶ್ವಿನಿ ಪುನೀತ್ ರಾಜಕುಮಾರ್, ರಾಘವೇಂದ್ರ ರಾಜ್ ಕುಮಾರ್ ಹಾಗೂ ಕುಟುಂಬದವರು ಪುನೀತ್ ರಾಜಕುಮಾರ್ ಅವರ ಕೊನೆಯ ಚಿತ್ರ ಗಂಧದ ಗುಡಿ ಸಿನಿಮಾದ ಪ್ರಿರಿಲೀಸ್‌ ಇವೆಂಟ್‌ಗೆ ಆಹ್ವಾನ ನೀಡಿದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.