Aishwarya Rai: ಶಾರುಖ್ ಖಾನ್, ತಮ್ಮ ಹಳೆಯ ಸ್ನೇಹಿತ ಕರಣ್ ಜೋಹರ್ ಅವರೊಂದಿಗೆ IIFA ಪ್ರಶಸ್ತಿ ಕಾರ್ಯಕ್ರಮವನ್ನು ಆಯೋಜಿಸಿದ್ದು, ಸಮಾರಂಭಕ್ಕೆ ಕ್ಷಣಗಣನೆ ಶುರುವಾಗಿದೆ. 


COMMERCIAL BREAK
SCROLL TO CONTINUE READING

ರೇಖಾ, ಕೃತಿ ಸನೋನ್, ಶಾಹಿದ್ ಕಪೂರ್ ಮತ್ತು ವಿಕ್ಕಿ ಕೌಶಲ್ ಅವರಂತಹ ತಾರೆಗಳು ತಮ್ಮ ಪ್ರದರ್ಶನವನ್ನು ನೀಡಲು ಸಜ್ಜಾಗುತ್ತಿದ್ದಾರೆ.ಹೀಗಿರುವಾಗ ಐಶ್ವರ್ಯಾ ರೈ ಅವರು ಅಮಿತಾಬ್ ಬಚ್ಚನ್ ಮತ್ತು ಪತಿ ಅಭಿಷೇಕ್ ಬಚ್ಚನ್ ಅವರೊಂದಿಗೆ 'ಕಜ್ರಾ ರೇ' ಹಾಡಿನಲ್ಲಿ ನೃತ್ಯ ಮಾಡಿದ ವಿಡಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್‌ ಆಗುತ್ತಿದೆ. ಐಶ್ವರ್ಯಾ ರೈ ಮಾವ ಅಮಿತಾಭ್ ಮತ್ತು ಪತಿ ಅಭಿಷೇಕ್ ಅವರೊಂದಿಗೆ 2005 ರಲ್ಲಿ IIFA ಪ್ರಶಸ್ತಿ ಸಮಾರಂಭದಲ್ಲಿ ತಮ್ಮ ನೃತ್ಯದ ಮೂಲಕ ಸಮಾರಂಭದಲ್ಲಿ ನೆರದಿದ್ದವರನ್ನು ಹುಚ್ಚೆಬ್ಬಿಸಿದ್ದರು,  ಇದು  ಪ್ರಶಸ್ತಿ ಪ್ರದಾನ ಸಮಾರಂಭದ ಇತಿಹಾಸದಲ್ಲಿ ಸ್ಮರಣೀಯ ಕ್ಷಣವಾಗಿ ಉಳಿದಿದೆ. 


ಐಶ್ವರ್ಯ ರೈ, ಸಿಲ್ವರ್‌ ಬಣ್ಣದ ಡ್ರೆಸ್‌ ತೊಟ್ಟು ವೇದಿಕೆ ಮೇಲೆ ಹೆಜ್ಜೆ ಹಾಕಿದ್ರೆ, ಅಭಿಷೇಕ್‌ ಬಚ್ಚನ್‌ ಕಪ್ಪು ಉಡುಪಿನಲ್ಲಿ ವೇದಿಕೆಯ ಮೇಲೆ ನೃತ್ಯ ಮಾಡಿದರು, ಆದರೆ ಅಮಿತಾಬ್ ಬಚ್ಚನ್ ಅವರ ಅಭಿನಯವು ಅತ್ಯಂತ ಆಶ್ಚರ್ಯಕರವಾಗಿತ್ತು, ಇದರಲ್ಲಿ ಅವರು ಸೂಟ್ ಧರಿಸಿ ತಮ್ಮ ಸೊಸೆ ಮತ್ತು ಮಗನೊಂದಿಗೆ ಬೋಲ್ಡ್ ಆಗಿ ನೃತ್ಯ ಮಾಡಿದರು.


IIFA ವೇದಿಕೆಯಲ್ಲಿ ಮೂವರು ತಾರೆಯರ ಈ ನೃತ್ಯ ಪ್ರದರ್ಶನ ಹೇಗಿತ್ತು ಎಂದರೆ, ಶಸ್ತಿ ಸಮಾರಂಭದಲ್ಲಿ ಹಾಜರಿದ್ದ ಎಲ್ಲರೂ ಕೂಡ ಇವರ ನೃತ್ಯ ನೋಡಿ ಎದ್ದು ನಿಂತು ಚಪ್ಪಾಳೆ ತಟ್ಟಿದ್ದರು. ಅಲ್ಲಿ ನೆರೆದಿದ್ದ ಪ್ರೇಕ್ಷಕರೆಲ್ಲ ಈ ಮೂವರ ನೃತ್ಯಕ್ಕೆ ಫಿದಾ ಆಗಿದ್ದರು, ಅಷ್ಟೆ ಅಲ್ಲ ನಟಿ ರೇಖಾ ಅವರ ರಿಯಾಕ್ಷನ್‌ ಕೂಡ ಕ್ಯಾಮರಾದಲ್ಲಿ ಸೆರೆಯಾಗಿತ್ತು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.