Nayana Motamma : ಚಿಕ್ಕಮಂಗಳೂರು ಮೀಸಲು ಕ್ಷೇತ್ರದ ಮೂಡಿಗೆರೆಯ ಎಂಎಲ್‌ಎ ನಯನಾ ಅವರು ಮೊದಲ ಬಾರಿ ದೊಡ್ಡ ಅಧಿಕಾರ ಗೆದ್ದಿರುವ ಖುಷಿಯಲ್ಲಿದ್ದರು. ಇದೇ ವೇಳೆ ಅವರ ಖಾಸಗಿ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಇವು ಎಲ್ಲೆಡೆ ಚರ್ಚೆ ಮತ್ತು ಗ್ರಾಸಕ್ಕೆ ಎಡೆಮಾಡಿಕೊಟ್ಟಿವೆ. 


COMMERCIAL BREAK
SCROLL TO CONTINUE READING

ಇದಕ್ಕೆ ತಿರುಗೇಟಾಗಿ ಸ್ವತಃ ನಯನಾ ಮೋಟಮ್ಮ ಅವರೇ ಅದೇ ವಿಡಿಯೋವನ್ನು ತಮ್ಮ ಸೋಷಿಯಲ್‌ ಮಿಡಿಯಾ ಅಕೌಂಟ್‌ನಲ್ಲಿ ಶೇರ್‌ ಮಾಡಿಕೊಂಡಿದ್ದರು. ಇದೀಗ ಶಾಸಕಿ ನಯನಾ ಮೊಟಮ್ಮಗೆ ಸ್ಯಾಂಡಲ್‌ವುಡ್‌ ನಟ ಹಾಗೂ ಹೋರಾಟಗಾರ ಚೇತನ್‌ ಅಹಿಂಸಾ ಬೆಂಬಲ ನೀಡುತ್ತಿದ್ದಾರೆ. 


 


ಇದನ್ನೂ ಓದಿ-ಇಂಟರ್‌ನೆಟ್‌ನಲ್ಲಿ ಸೆನ್ಸೇಷನ್‌ ಕ್ರಿಯೇಟ್‌ ಮಾಡುತ್ತಿದೆ ಶ್ವೇತಾ ಅಂದ..! ಫೋಟೋಸ್‌ ನೋಡಿ


ಹೋರಾಟಗಾರ ಮತ್ತು ನಟ ಚೇತನ್‌ ಅಹಿಂಸಾ ಮೂಡಿಗೆರೆಯ ನೂತನ ಶಾಸಕಿ ನಯನಾ ಮೋಟಮ್ಮ ಬೆಂಬಲಕ್ಕೆ ನಿಂತಿದ್ದಾರೆ. ಖಾಸಗಿ ಪೋಟೋಗಳನ್ನು ಶೇರ್‌ ಮಾಡುವ ಮೂಲಕ ಮರ್ಯಾದೆ ಹತ್ಯೆಗೆ ಯತ್ನಿಸಿದ್ದಾರೆ ಎಂದು ಆರೋಪ ಮಾಡಿದ್ದು, ಪೋಲಿಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ. 


"ಹೊಸದಾಗಿ ಚುನಾಯಿತ ಶಾಸಕಿ ನಯನಾ ಮೋಟಮ್ಮ ಅವರ ಖಾಸಗಿ ಚಿತ್ರಗಳನ್ನು ಪ್ರಕಟಿಸುವ ಮೂಲಕ ರಾಜಕೀಯ ಪ್ರತಿಸ್ಪರ್ಧಿಗಳು ಅವರ ಮರ್ಯಾದೆ ಹತ್ಯೆಗೆ ಯತ್ನಿಸಿದ್ದಾರೆ. ಭಾರತದಲ್ಲಿನ ಎಲ್ಲಾ ಮಹಿಳೆಯರು ವಿವಿಧ ಹಂತಗಳಲ್ಲಿ ಪುರುಷಪ್ರಧಾನ ವ್ಯವಸ್ಥೆಗೆ ಬಲಿಪಶುಗಳಾಗಿದ್ದಾರೆ/ಬಲಿಪಶುಳಾಗುತ್ತಿದ್ದಾರೆ ಮತ್ತು ಅಧಿಕಾರದ ಉನ್ನತ ಸ್ಥಾನಗಳಿಗೆ ಏರುವ ಮಹಿಳೆಯರು ಅದನ್ನು ಸಾರ್ವಜನಿಕ ರೀತಿಯಲ್ಲಿ ಎದುರಿಸುತ್ತಾರೆ. ದೃಢವಾಗಿ ನಿಂತಿರುವ ಶಾಸಕರಿಗೆ ಅಭಿನಂದನೆಗಳು-- ಪೊಲೀಸರು ತಪ್ಪು ಮಾಡಿದವರ ವಿರುದ್ಧ ತಕ್ಷಣ ಕ್ರಮ ತೆಗೆದುಕೊಳ್ಳಬೇಕು" ಎಂದು ತಮ್ಮ ಫೇಸ್ಬುಕ್‌ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ. 


ಇದನ್ನೂ ಓದಿ-ಮೀಟರ್ ಹಾಕಿ ಪ್ಲೀಸ್ʼ ಅಂತ ಮತ್ತೆ ತೆರೆಗೆ ಬಂದ ವಿನಾಯಕ ಜೋಶಿ..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ