ಸ್ಯಾಂಡಲ್ವುಡ್ ನಟಿ ಮೇಲೆ ಆಟೋ ಚಾಲಕನ ಹಲ್ಲೆ
ನಟಿ ಆಶ್ರಿನ್ ಮೆಹ್ತಾ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬೆಂಗಳೂರು: ಸ್ಯಾಂಡಲ್ವುಡ್ ನಟಿಯ ಮೇಲೆ ಆಟೋ ಚಾಲಕನೊಬ್ಬ ಹಲ್ಲೆ ನಡೆಸಿದ ಘಟನೆ ಮಂಗಳವಾರ ರಾತ್ರಿ ಉತ್ತನಹಳ್ಳಿ ಬಳಿ ನಡೆದಿದೆ.
ಕನ್ನಡದ 'ಬ್ಲಡ್ ಸ್ಟೋರಿ' ಚಿತ್ರದ ನಾಯಕಿ ಆಶ್ರಿನ್ ಮೆಹ್ತಾ ಅವರೇ ಆಟೋ ಚಾಲಕನಿಂದ ಹಲ್ಲೆಗೊಳಗಾದ ನಟಿ. ಉತ್ತರಹಳ್ಳಿ ಬಳಿ ನಟಿ ಕೆಲಸದ ನಿಮಿತ್ತ ಆಟೋ ಹತ್ತಿದ ನಟಿ ಆಶ್ರಿನ್ ಮೆಹ್ತಾ ಅವರು, ಆಟೋ ಚಾಲಕನಿಗೆ ಡಬಲ್ ಚಾರ್ಜ್ ತೆಗೆದುಕೊಳ್ಳದಂತೆ ತಿಳಿಸಿದ್ದಾರೆ. ಆದರೆ ಇಷ್ಟಕ್ಕೇ ಕೋಪಗೊಂಡ ಆಟೋ ಚಾಲಕ ನಟಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ನಟಿ ಆಶ್ರಿನ್ ಮೆಹ್ತಾ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.