Avatara Purusha 2 Release Date: ಸ್ಯಾಂಡಲ್‌ವುಡ್‌ ಕಾಮಿಡಿ ಕಿಂಗ್‌ ಶರಣ್‌ ಹಾಗೂ ಡೈರೆಕ್ಟರ್‌ ಸಿಂಪಲ್‌ ಕಾಂಬೋದಲ್ಲಿ ಮೂಡಿಬಂದ 'ಅವತಾರ ಪುರುಷ' ಸಿನಿಮಾ ಕಳೆದ ಎರಡು ವರ್ಷದಿಂದೆ ತೆರೆಕಂಡಾಗ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಇದೀಗ ಈ ಚಿತ್ರದ ಎರಡನೇ ಭಾಗ 'ಅವತಾರ ಪುರುಷ'-2 ತ್ರಿಶಂಕು ಪಯಣ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.


COMMERCIAL BREAK
SCROLL TO CONTINUE READING

'ಅವತಾರ ಪುರುಷ' ಸಿನಿಮಾದಲ್ಲಿ ನಟ ಶರಣ್ ಹಾಗೂ ನಟಿ ಆಶಿಕಾ ರಂಗನಾಥ್ ಲೀಡ್ ರೋಲ್‌ಗಳಲ್ಲಿ ಕಾಣಿಸಿಕೊಂಡಿದ್ದರು. ಇನ್ನೂ ಇವರೊಂದಿಗೆ ಡೈಲಾಗ್ ಕಿಂಗ್ ಸಾಯಿಕುಮಾರ್, ಭವ್ಯ, ಸುಧಾರಾಣಿ, ಶ್ರೀನಗರ ಕಿಟ್ಟಿ ಹೀಗೆ ಮುಂತಾದ ಘಟಾನುಘಟಿ ಕಲಾವಿದರೇ ಬಣ್ಣ ಹಚ್ಚಿದ್ದರು. ಈ ಚಿತ್ರವನ್ನು ಪುಷ್ಕರ್ ಮಲ್ಲಿಕಾರ್ಜುನ್ ನಿರ್ಮಾಣ ಮಾಡಿದ್ದರು.


ಮದುವೆಗೂ ಮುನ್ನವೇ ಪ್ರೆಗ್ನೆಂಟ್.. 6 ತಿಂಗಳಲ್ಲೇ ಮಗುವಿಗೆ ಜನ್ಮ ನೀಡಿದ ಸ್ಟಾರ್ ಹೀರೋಯಿನ್!


'ಅವತಾರ ಪುರುಷ' ಸಿನಿಮಾ ಕೆಲವರಿಗೆ ಬೋರ್ ಅನಿಸಿದರೂ, ಆದ್ರೆ  ಕ್ಲೈಮ್ಯಾಕ್ಸ್‌ನಲ್ಲಿ ಮಾತ್ರ ಸಣ್ಣ ಟ್ವಿಸ್ಟ್ ಕೊಟ್ಟು ಮುಂದಿನ ಸರಣಿಯ ಬಗ್ಗೆ ಕುತೂಹಲ ಮೂಡಿಸಿತ್ತು. ಈ ಚಿತ್ರದ ಎರಡು ಸರಣಿ ಒಟ್ಟಿಗೆ ಚಿತ್ರೀಕರಣ ಮಾಡಿದ್ದರು ಮೊದಲ ಭಾಗಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿದ್ದರಿಂದ 2ನೇ ಭಾಗ ಬೇಗ ಬಿಡುಗಡೆ ಮಾಡಲು ಚಿತ್ರತಂಡ ಉತ್ಸಾಹ ತೋರಿಸಿರಲಿಲ್ಲ.


ಸದ್ಯ 'ಅವತಾರ ಪುರುಷ'-2 ಸಿನಿಮಾ ಇದೇ ಮಾರ್ಚ್ 22ಕ್ಕೆ ರಾಜ್ಯಾದಂತ ರಿಲೀಸ್‌ ಮಾಡಲು ಚಿತ್ರತಂಡ ರೆಡಿಯಾಗಿದೆ. ಆದರೆ ಚಿತ್ರ ಬಿಡುಗಡೆಗೆ 20 ದಿನ ಬಾಕಿ ಇರುವಂತೆ ಘೋಷಣೆ ಮಾಡಿರುವ ಬಗ್ಗೆ ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.  ಐಪಿಎಲ್ ಸೀಸನ್ 17 ಸಹ ಆರಂಭದ ವೇಳೆ ಸಿನಿಮಾ ರಿಲೀಸ್ ಮಾಡುತ್ತಿರುವುದಕ್ಕೆ ಕೆಲವರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.