Avika Gor On Marriage: ‘ಬಾಲಿಕಾ ವಧು’ ದಾರವಾಹಿಯ ಆನಂದಿ ಪಾತ್ರದಲ್ಲಿ ನಟಿಸಿ ಫೇಮಸ್ ಆದ ನಟಿ ಅವಿಕಾ ಗೋರ್ ಅವರು ತಮ್ಮ ವೈಯಕ್ತಿಕ ಬದುಕಿನಲ್ಲಿ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಇತ್ತೀಚೆಗೆ, ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿ ತನ್ನ ವೈಯಕ್ತಿಕ ಜೀವನದ ಹಲವಾರು ಸ್ವಾರಸ್ಯಕರ ವಿಚಾರಗಳನ್ನು ಬಹಿರಂಗ ಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಅವಿಕಾ ಗೌರ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ನಟಿ ತನಗಿಂತ 18 ವರ್ಷ ಹಿರಿಯ ವ್ಯಕ್ತಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಭಾರಿ ಸದ್ದು ಮಾಡಿತ್ತು. ಇತ್ತೀಚೆಗೆ ನಟಿ ತನ್ನ ಬಾಯ್‌ಫ್ರೆಂಡ್‌ನನ್ನು ರಹಸ್ಯವಾಗಿ ಮದುವೆಯಾಗಿದ್ದಾಳೆ ಎಂದು ಹೇಳಲಾಗುತ್ತಿದೆ. ಆದರೆ, ಈಗ ಈ ಎಲ್ಲಾ ವದಂತಿಗಳಿಗೆ ಸ್ವತಃ ಅವಿಕಾ ಉತ್ತರಿಸುವ ಮೂಲಕ ಎಲ್ಲ ಅನುಮಾನಗಳಿಗೆ ತೆರೆ ಎಳೆದಿದ್ದಾರೆ. 


ಇದನ್ನೂ ಓದಿ: ಚೆಲುವೆಯ ಮನಮೋಹಕ ಮೈಮಾಟಕ್ಕೆ ಮನಸೋತ ಸಲ್ಮಾನ್‌ ಖಾನ್‌..ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಿಕ್ಕಾಪಟ್ಟೆ ವೈರಲ್‌


ಹರ್ಷ್ ಲಿಂಬಾಚಿಯಾ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿರುವ ಅವಿಕಾ ಗೌರ್, 'ನಾನು ಮತ್ತು ಮಿಲಿಂದ್ ಚಂದ್ವಾನಿ ನಾಲ್ಕು ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದೇವೆ. ಆತ ನಮ್ಮ ಇಂಡಸ್ಟ್ರಿಯವರಲ್ಲ, ಅವರು ಎನ್‌ಜಿಒ ನಡೆಸುತ್ತಿದ್ದಾರೆ. ನಮ್ಮ ನಾವು ಭೇಟಿಯಾಗಿ ಆರು ತಿಂಗಳುಗಳ ವರೆಗೂ ಸ್ನೇಹಿತಾರಿಗಿಯೇ ಇದ್ದೆವು, ನಾವಿಬ್ಬರೂ ಸಂಬಂಧದ ಕುರಿತು ಯಾವುದೇ ದುಡುಕು ನಿರ್ಧಾರ ತೆಗೆದುಕೊಳ್ಳಬಾರದು ಎಂದುಕೊಂಡಿದ್ದೆವು. ನಮ್ಮ ಆರು ತಿಂಗಳ ಸ್ನೇಹದ ನಂತರ ಮಿಲಿಂದ್‌ ನನ್ನ ಎದುರು ಪ್ರೇಮ ಪ್ರಸ್ತಾಪ ಮಾಡಿದರು. ಮಿಲಿಂದ್ ಒಳ್ಳೆ ಸ್ವಭಾವದವರು ಹಾಗಾಗಿಯೇ ನನ್ನ ಮನಸಿನಲ್ಲಿ ನಾನು ಅವನನ್ನು ಈಗಾಗಲೇ ಮದುವೆಯಾಗಿ ಬಿಟ್ಟಿದ್ದೇನೆ. ಒಂದು ಚ್ಯಾನ್ಸ್‌ ಸಿಕ್ಕರೆ ಇವತ್ತೇ ಅವರನ್ನು ನಾನು ಮದುವೆಯಾಗಬೇಕೆಂದು ಅನಿಸುತ್ತಿದೆ. ಆದರೆ ನಾವು ಹೆಚ್ಚು ಸಮಯ ತೆಗೆದುಕೊಳ್ಳಬೇಕು ಎಂದು ಮಿಲಿಂದ್ ಭಾವಿಸುತ್ತಾರೆ" ಎಂದು ಹೇಳಿದ್ದಾರೆ. 


ಬಾಲಿಕಾ ವಧು ಧಾರಾವಾಹಿಯ ನಂತರ, ಅವಿಕಾ ಗೌರ್ ಟಿವಿ ಧಾರಾವಾಹಿಗಳು ಅಷ್ಟೇ ಅಲ್ಲದೆ ಹಲವಾರು ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ