Avinash About To Slap Abhi In Srirastu Shubhamastu: ಜೀ ಕನ್ನಡದಲ್ಲಿ ಪ್ರಸ್ತುತ ಪ್ರಸಾರವಾಗುತ್ತಿರುವ ಶೀರಸ್ತು ಶುಭಮಸ್ತು ಧಾರವಾಹಿಯಲ್ಲಿ ಅವಿನಾಶ್‌ ಅಭಿಯ ಮೇಲೆ ಕೈ ಮಾಡಲು ಮುಂದಾಗಿದ್ದನು. ಅವಿನಾಶ್ ಮನೆಗೆಯೊಳಗೆ ಬರುತ್ತಿದ್ದಂತೆ ಜೋರಾಗಿ ಅಭಿ ಎಂದು ಕರೆಯುತ್ತಾನೆ. ಕಂಪನಿಯಲ್ಲಿ ಅವಿನಾಶ್ ತನ್ನ ಸ್ಥಾನವನ್ನು ತಮ್ಮನಿಗೆ ಬಿಟ್ಟು ಕೊಟ್ಟಿರುತ್ತಾನೆ. ಆದರೆ ಅಭಿಯ ಕಡೆಯಿಂದ ಕಂಪನಿಯಲ್ಲಿ ನಷ್ಟವಾಗಿರುತ್ತದೆ.


COMMERCIAL BREAK
SCROLL TO CONTINUE READING

ಮನೆಗೆ ಬಂದ ಅವಿನಾಶ್‌ ಅಭಿಗೆ ನಮ್ಮ ಕಂಪನಿಗೆ ನಿನ್ನಿಂದ 12 ಪರ್ಸೆಂಟ್‌ ಲಾಸ್ ಆಗಿದೆ ಆದರೆ ಯಾಕೆ ಹೀಗೆ ಆಯಿತು ಎಂದು ಪ್ರಶ್ನೆ ಮಾಡುತ್ತಾನೆ. ಆದರೆ ಇದಕ್ಕೆ ಅಭಿ ಅಷ್ಟೊಂದು ತೆಲೆಕೆಡೆಸಿಕೊಳ್ಳದೆ  ಆತನಿಗೆ ಏನು ತಿಳಿಯದ ಹಾಗೆ ವರ್ತಿಸುತ್ತಾನೆ. ಅವಿನಾಶ್‌ ಅಷ್ಟು ಜೋರಾಗಿ ಕಿರುಚಾಡಿದರು ಅಭಿ ಮಾತ್ರ ಸುಮ್ಮನೆ ನಿಂತಿರುತ್ತಾನೆ. ಆಗ ಅಭಿ ನನ್ನ ಕಂಪನಿಯಲ್ಲಿ ನನಗೆ ಲಾಸ್ ಆಗಿರುವುದು ತಿಳಿಯುವುದು ಇಲ್ವಾ? ಎಂದು ಹೇಳುತ್ತಾನೆ. ಅದಕ್ಕೆ ಮಾಧವ್‌  12 ಪರ್ಸೆಂಟ್ ನಷ್ಟೂ ಲಾಸ್ ಆಗಲು ಒಂದು ದಿನದ ಅಸಡ್ಡೆ ಕಾರಣ ಅಲ್ಲ . ಹಲವು ದಿನಗಳಿಂದ ಈ ರೀತಿಯ ಅಸಡ್ಡೆ ಇತ್ತು ಎಂದನಿಸುತ್ತದೆ ಎಂದು ಮಾತನಾಡುತ್ತಾನೆ.


ಇದನ್ನೂ ಓದಿ: Amruthadhaare serial: ಅಮೃತಧಾರೆ ಸೀರಿಯಲ್ ಪಾರ್ಥ್ ನಿಜಕ್ಕೂ ಯಾರು ಗೊತ್ತಾ? ನೆನಪಿದ್ದಾರ ಅರಸಿ ಸೀರಿಯಲ್ ಸಿದ್ಧಾಂತ್?!


ಅದೇ ವೇಳೆ ಸಿಟ್ಟಿಗೆದ್ದ ಅಭಿ ತನ್ನ ಅಪ್ಪನಿಗೆ ಇದೆಲ್ಲವನ್ನೂ ಕೇಳಲು ನೀವು ಯಾರೂ ಎಂದು ಹೇಳುತ್ತಾನೆ. ಮಗನ ಮಾತು ಮಾಧವ ಸುಮ್ಮನಾದರೆ, ಇದೇ ಸಮಯದಲ್ಲಿ  ತುಳಸಿ ಆಫೀಸ್ ನಲ್ಲಿ ಈ ರೀತಿ ಎಲ್ಲಾ ಆದಾಗ ಅದನ್ನು ನೋಡಿಕೊಂಡು ಅವರಿಗೆ ಹೇಗೆ ಸುಮ್ಮನಿರಲು ಸಾಧ್ಯ . ಇದನ್ನು ನೀನು ಯಾವಾಗ ಅರ್ಥ ಮಾಡಿಕೊಳ್ಳುತ್ತಿಯಾ  ಎಂದು ಹೇಳುತ್ತಾಳೆ. ಅದೇ ಸಂದರ್ಭದಲ್ಲಿ ಅಭಿ ನೀವು ನನಗೆ ಬುದ್ದಿ ಹೇಳುತ್ತಿರುವುದು ಒಳ್ಳೆಯ ವಿಚಾರ. ಆದರೆ ಈ ಮನೆಯವರ ಮುಂದೆ ಈ ರೀತಿ ನಡೆದುಕೊಳ್ಳುವುದು ಅವರು ನಿಮ್ಮನ್ನು ಮೆಚ್ಚಲಿ ಎನ್ನುವ ಕಾರಣಕ್ಕೆ ಎಂದ್ಹೇಳುತ್ತಾನೆ.


ಅಭಿಯ ಮಾತನ್ನು ಕೇಳಿದ ಅವಿನಾಶ್ ಬಹಳ ಖಡಕ್ ಆಗಿ ಅಭಿ ನೀನು ಇನ್ನೂ ಒಂದು ಮಾತು ಅವರ ಬಗ್ಗೆ ಹೇಳಿದರೆ ನಾನು ಸುಮ್ಮನೆ ಇರುತ್ತೇನೆ ಎಂದು ಅಂದುಕೊಳ್ಳಬೇಡ ಎಂದು ಹೇಳುತ್ತಾನೆ. ಮತ್ತೆ ಅಭಿಗೆ ಮತ್ತಷ್ಟು ಕೋಪ ಮಾಡಿಕೊಂಡು, ಅಣ್ಣ ತಮ್ಮಂದಿರು ಒಟ್ಟಿಗೆ ಇರಬಾರದು ಅವರಿಬ್ಬರೂ ಜಗಳ ಆಡಬೇಕು ಅದಕ್ಕೆ ತಾನೇ ನೀವು ನಮ್ಮ ನಮ್ಮಲ್ಲಿ ಜಗಳ ತಂದಿಡುವ ಕೆಲಸ ಮಾಡುತ್ತಿದ್ದೀರಾ? ಇದು ಸರಿಯಲ್ಲ ಎಂದು ತುಳಸಿಗೆ ಅಭಿ ಹೇಳಿದಾಗ ಸಿಟ್ಟಾದ ಅವಿನಾಶ್, ಅಭಿ ಮೇಲೆ ಕೈ ಎತ್ತುತ್ತಾನೆ. ಇದನ್ನು ನೋಡಿ ಮನೆ ಮಂದಿ ಶಾಕ್ ಆಗುತ್ತಾರೆ.ಮುಂದೇನಾಗುತ್ತದೆ ಎಂಬುದನ್ನು ಮುಂಬರುವ ಸಂಚಿಕೆಯನ್ನು ನೋಡಿ ತಿಳಿಯಬೇಕು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.