Avneet Kaur: ಟಿವಿ ಅಥವಾ ದೊಡ್ಡ ಪರದೆ ಆಗಿರಲಿ, ಎರಡು ದಶಕಗಳಿಂದ ಬಾಲ ಕಲಾವಿದರು ನಟಿಸುವುದನ್ನು ನಾವು ನೋಡುತ್ತಿದ್ದೇವೆ. ಚಿತ್ರರಂಗದಲ್ಲಿ ಬಾಲ ಕಲಾವಿದರು ಅನೇಕರಿದ್ದಾರೆ ಮತ್ತು ಅವರು ಬೆಳೆದ ನಂತರವೂ ಚಲನಚಿತ್ರ ಮತ್ತು ಧಾರಾವಾಹಿಗಳಲ್ಲಿ ನಟಿಸಿ  ಹೆಸರು ಮಾಡುತ್ತಿದ್ದಾರೆ. 


COMMERCIAL BREAK
SCROLL TO CONTINUE READING

ಕೇವಲ 8 ನೇ ವಯಸ್ಸಿನಲ್ಲಿ ಡ್ಯಾನ್ಸ್ ರಿಯಾಲಿಟಿ ಶೋ ಮೂಲಕ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ಬಾಲಕಲಾವಿದೆ ಇಂದು ಜನಪ್ರಿಯತೆಯ ವಿಷಯದಲ್ಲಿ ದೊಡ್ಡ ದೊಡ್ಡ ನಟಿಯರನ್ನೇ ಹಿಂದಿಕ್ಕಿದ ನಟಿಯ ಬಗ್ಗೆ ಇದೀಗ ತಿಳಿಯೋಣ.. 


ಇದನ್ನೂ ಓದಿ-Bhagyalakshmi Serial:ಮ್ಯಾರೇಜ್ ಆನಿವರ್ಸರಿ ದಿನದಂದು ಭಾಗ್ಯಾಗೆ ಪಾನಿಪುರಿ ತಿನ್ನಿಸಿದ ತಾಂಡವ್!


ನಾವು ಇಲ್ಲಿ ಮಾತನಾಡುತ್ತಿರುವ ಚೆಲುವೆ ಬೇರೆ ಯಾರೂ ಅಲ್ಲ.. ಪ್ರಸಿದ್ಧ ಟಿವಿ ಹಾಗೂ ಬಾಲಿವುಡ್‌ ನಟಿ ಅವನೀತ್ ಕೌರ್. ಅವನೀತ್ ಕೌರ್ ಅನೇಕ ಟಿವಿ ಧಾರಾವಾಹಿಗಳಲ್ಲಿ ಮತ್ತು ಬಾಲಿವುಡ್‌ನಲ್ಲಿಯೂ ಕೆಲಸ ಮಾಡಿದ್ದಾರೆ.  


ಅವನೀತ್ ಕೌರ್ ಬಾಲ್ಯದಿಂದಲೂ ನಟನೆ ಮತ್ತು ನೃತ್ಯದಲ್ಲಿ ತುಂಬಾ ಆಸಕ್ತಿ ಹೊಂದಿದ್ದರು.. ಅವರು ತಮ್ಮ ವೃತ್ತಿಜೀವನವನ್ನು ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಲಿಟಲ್ ಮಾಸ್ಟರ್ ರಿಯಾಲಿಟಿ ಶೋನಿಂದ ಪ್ರಾರಂಭಿಸಿದರು. ಅವನೀತ್ ಈ ಶೋನಲ್ಲಿ ಭಾಗವಹಿಸಿ ತನ್ನ ಡಾನ್ಸ್‌ ಜೊತೆಗೆ ತನ್ನ ಅದ್ಭುತವಾದ ವ್ಯಕ್ತಿತ್ವದಿಂದ ಎಲ್ಲರ ಮನ ಗೆದ್ದಿದ್ದರು.. 


ಡ್ಯಾನ್ಸ್ ಶೋ ಮುಗಿಸಿ 2 ವರ್ಷಗಳ ನಂತರ ಈಕೆ ನಟನೆಗೆ ಪಾದಾರ್ಪಣೆ ಮಾಡಿದಳು.. ಅನೇಕ ಸಿರೀಯಲ್‌ಗಳಲ್ಲಿ ಕಾಣಿಸಿಕೊಂಡ ನಟಿ ಅವನೀತ್ ರಾಣಿ ಮುಖರ್ಜಿಯವರ ಚಿತ್ರ 'ಮರ್ದಾನಿ' ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಆ ಸಮಯದಲ್ಲಿ ಅವನೀತ್ ಅತಿ ಹೆಚ್ಚು ಸಂಭಾವನೆ ಪಡೆಯುವ ಬಾಲ ಕಲಾವಿದರಾಗಿದ್ದರು. ಒಂದು ಸಂಚಿಕೆಗೆ ನಟಿ ಸುಮಾರು 30 ಸಾವಿರ ರೂ. ಪಡೆದಿದ್ದರು ಎನ್ನಲಾಗಿದೆ..


ಇದನ್ನೂ ಓದಿ-Yuva: ʻಯುವʼ ಸಿನಿಮಾ ರಿಲೀಸ್‌ಗೂ ಮುನ್ನ ಚಿತ್ರಕಥೆ ರಿವೀಲ್‌ ಮಾಡಿದ ನಿರ್ದೇಶಕ!


 ವರದಿಯ ಪ್ರಕಾರ ಅವನೀತ್ ಕೌರ್ ಅವರ ನಿವ್ವಳ ಮೌಲ್ಯವು ಸುಮಾರು 11 ಕೋಟಿ ಮತ್ತು ಈಕೆ ಪ್ರತಿ ತಿಂಗಳು 8-10 ರೂ ಗಳಿಸುತ್ತಾರೆ.. ಇಷ್ಟೇ ಅಲ್ಲ ಅವನೀತ್ ನಟಿ ಮಾತ್ರವಲ್ಲದೆ ಸೋಷಿಯಲ್‌ ಮಿಡಿಯಾ ಸ್ಟಾರ್‌ ಕೂಡಾ ಹೌದು.  


ಜನಪ್ರಿಯತೆಯಲ್ಲಿ ಅವನೀತ್ ಕರೀನಾ ಕಪೂರ್ ಮತ್ತು ಜಾನ್ವಿ ಕಪೂರ್ ಅವರನ್ನೇ ಹಿಂದಿಕ್ಕಿದ್ದಾರೆ ಎಂದು ಹೇಳಬಹುದು.. ಈ ನಟಿಯರು ಕೇವಲ 12 ಮತ್ತು 24 ಮಿಲಿಯನ್ ಫಾಲೋವರ್ಸ್‌ ಹೊಂದಿದ್ದರೆ.. ಅವನೀತ್ ಇನ್ಸ್ಟಾಗ್ರಾಮ್ನಲ್ಲಿ 32.4 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.