ಎಲಿಮಿನೆಟ್ ಆಗಿದ್ದ ಸ್ಪರ್ಧಿ ಮತ್ತೆ ಬಿಗ್ ಬಾಸ್ ಮನೆಗೆ ವಾಪಸ್ ! ಮನೆಯಲ್ಲಿರುವ ಈ ಕಂಟೆಸ್ಟೆಂಟ್ ಈಗ ಫುಲ್ ಟಾರ್ಗೆಟ್ !
Biggboss : ಇತ್ತೀಚೆಗೆ ಮನೆಯಿಂದ ಹೊರ ನಡೆದಿದ್ದ ಸ್ಪರ್ಧಿ ಇದೀಗ ಮತ್ತೆ ಬಿಗ್ ಮನೆಗೆ ವಾಪಾಸಾಗಿದ್ದಾರೆ. ಇವರು ಮನೆಗೆ ಮರಳುತ್ತಿರುವಂತೆಯೇ ಮನೆಯ ಎಲ್ಲಾ ಲೆಕ್ಕಾಚಾರವೇ ತಲೆಕೆಳಗಾಗಿದೆ.
Biggboss : ಬಿಗ್ ಬಾಸ್ ರಿಯಾಲಿಟಿ ಶೋ ದಿನದಿಂದ ದಿನಕ್ಕೆ ವೀಕ್ಷಕರ ಕುತೂಹಲ ಹೆಚ್ಚಿಸುತ್ತಿದೆ. ಇತ್ತೀಚೆಗೆ ಮನೆಯಿಂದ ಹೊರ ನಡೆದಿದ್ದ ಸ್ಪರ್ಧಿ ಇದೀಗ ಮತ್ತೆ ಬಿಗ್ ಮನೆಗೆ ವಾಪಾಸಾಗಿದ್ದಾರೆ. ಇವರು ಮನೆಗೆ ಮರಳುತ್ತಿರುವಂತೆಯೇ ಮನೆಯ ಎಲ್ಲಾ ಲೆಕ್ಕಾಚಾರವೇ ತಲೆಕೆಳಗಾಗಿದೆ. ಈ ವೈಲ್ಡ್ ಕಾರ್ಡ್ ಸ್ಪರ್ಧಿ ಮತ್ತೆ ಮನೆಗೆ ಮರಳುವುದರ ಬಗ್ಗೆ ಬಿಗ್ ಬಾಸ್ ಪ್ರೊಮೊ ರಿಲೀಸ್ ಮಾಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮತ್ತೆ ಮನೆಗೆ ವಾಪಾಸಾದ ಸ್ಪರ್ಧಿ :
ಹೌದು ಬಿಗ್ ಬಾಸ್ 17 ರ ವೈಲ್ಡ್ ಕಾರ್ಡ್ ಸ್ಪರ್ಧಿ ಆಯೇಶಾ ಖಾನ್ ಪ್ರಜ್ಞೆ ತಪ್ಪಿ ಬಿದ್ದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚೇತರಿಸಿಕೊಂಡಿರುವ ಅವರು ಕಾರ್ಯಕ್ರಮಕ್ಕೆ ಮತ್ತೆ ಹಿಂತಿರುಗಿದ್ದಾರೆ. ಆಯೇಶಾ ಖಾನ್ ಮನೆಗೆ ವಾಪಾಸಾಗುತ್ತಿರುವುದರ ಬಗ್ಗೆ ಬಿಗ್ ಬಾಸ್ ಪ್ರೊಮೊ ರಿಲ್ಲಿಸ್ ಮಾಡಿದೆ. ಆಯೇಶಾ ಖಾನ್ ಇದರಲ್ಲಿ ಮುನಾವರ್ ಫರುಕಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವುದನ್ನು ಗಮನಿಸಬಹುದು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ : ಸಂಗೀತಾ, ಪ್ರತಾಪ್ ಅಲ್ಲ… ಈ ಸ್ಪರ್ಧಿಯೇ ಕಳೆದ ವಾರ ಬಿಗ್ ಬಾಸ್’ನಲ್ಲಿ ಅತಿ ಹೆಚ್ಚು ಓಟ್ ಪಡೆದಿದ್ದು!
ಬಿಡುಗಡೆಯಾಗಿದೆ ಪ್ರೊಮೊ :
ರಕ್ತದೊತ್ತಡ ಕಡಿಮೆಯಾದ ಕಾರಣ ಆಯೇಶಾ ಖಾನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೊಸ ವರ್ಷದ ಬಿಗ್ ಬಾಸ್ 17 ರ ಮೊದಲ ಸಂಚಿಕೆಯ ಪ್ರೋಮೋವನ್ನು ಇದೀಗ ಹಂಚಿಕೊಳ್ಳಲಾಗಿದ್ದು, ಇದರಲ್ಲಿ ಸ್ಪರ್ಧಿಗಳು ಆಯೇಶಾ ಖಾನ್ ಅವರನ್ನು ಮನೆಗೆ ಸ್ವಾಗತಿಸುತ್ತಿರುವುದನ್ನು ತೋರಿಸಲಾಗಿದೆ.ಆಯೇಷಾ ಮನೆಯಲ್ಲಿದ್ದವರನ್ನೆಲ್ಲ ಅಪ್ಪಿಕೊಂಡರೂ ಮುನಾವರ್ ಫರೂಕಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಾರೆ.
ಇದನ್ನೂ ಓದಿ : ಬಿಗ್ ಬಾಸ್ ಮನೆಗೆ ಈ ಸ್ಪರ್ಧಿಯೇ ಶನಿ…! ಬಹಿರಂಗ ಹೇಳಿಕೆ ಕೊಟ್ಟ ವರ್ತೂರ್ ಸಂತೋಷ್
ಬಿಗ್ ಬಾಸ್ ನ ಹೊಸ ಟ್ರಿಕ್ ನಿಂದ ಸ್ಪರ್ಧಿಗಳು ಬೆಚ್ಚಿಬಿದ್ದ ಸ್ಪರ್ಧಿಗಳು :
ಈ ನಡುವೆ ಹೊಸ ವರ್ಷದ ಮೊದಲ ದಿನವೇ ಬಿಗ್ ಬಾಸ್ ಮತ್ತೊಂದು ಟ್ವಿಸ್ಟ್ ಪರಿಚಯಿಸಿದ್ದಾರೆ. ಬಿಗ್ ಬಾಸ್ ನಾಮಿನೇಷನ್ ಕಾರ್ಯವನ್ನು ಘೋಷಿಸುತ್ತಾರೆ. ಅಲ್ಲಿ ಮನೆಯ ಮೂವರು ಸದಸ್ಯರಾದ ಮುನಾವರ್ ಫರುಕಿ,ಇಶಾ ಮಾಲ್ವಿಯಾ ಮತ್ತು ಔರಾಗೆ ಮಾತ್ರ ಸ್ಪರ್ಧಿಗಳನ್ನು ನಾಮಿನೇಟ್ ಮಾಡುವ ಹಕ್ಕನ್ನು ನೀಡುತ್ತಾರೆ.ಮುನವ್ವರ್ ಅವರು ಅನುರಾಗ್ ದೋವಲ್ ಅವರನ್ನು ನಾಮಿನೇಟ್ ಮಾಡಿದರೆ, ಇಶಾ ಅವರು ಆಯೇಶಾ ಖಾನ್ ಮತ್ತು ಔರಾ ಅವರು ಅಭಿಷೇಕ್ ಕುಮಾರ್ ಅವರನ್ನು ನಾಮಿನೇಟ್ ಮಾಡುತ್ತಾರೆ. ಇದಾದ ನಂತರ ಇವರಲ್ಲಿ ಒಬ್ಬರನ್ನು ಈ ಕೂಡಲೇ ಮನೆಯಿಂದ ಹೊರ ಹಾಕುವುದಾಗಿ ಬಿಗ್ ಬಾಸ್ ಘೋಷಿಸುತ್ತಾರೆ. ಆ ಸ್ಪರ್ಧಿ ಯಾರು ಎನ್ನುವುದನ್ನು ನಿರ್ಧರಿಸಬೇಕು ಎಂದು ಕೂಡಾ ಹೇಳುತ್ತಾರೆ. ಈ ಪ್ರಕಾರ ಮನೆಯಿಂದ ಹೊರ ಬೀಳುವ ಸ್ಪರ್ಧಿ ಯಾರು ಎನ್ನುವುದನ್ನು ತಿಳಿದುಕೊಳ್ಳುವುದು ಬಹಳ ಆಸಕ್ತಿದಾಯಕವಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ