Anushka Sharma: ಐತಿಹಾಸಿಕ ನಗರವಾದ ಅಯೋಧ್ಯೆಯು ಆಧ್ಯಾತ್ಮಿಕ ಸೌಂದರ್ಯದಿಂದ ಕೂಡಿದೆ. ಇಲ್ಲಿ ಜನವರಿ 22ರಂದು ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭದ ಹಿನ್ನೆಲೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.. ಈ ಸಮಾರಂಭದಲ್ಲಿ ದೇಶದ ರಾಜಕೀಯ, ಚಲನಚಿತ್ರ, ಕ್ರೀಡಾ ಮತ್ತು ಕೈಗಾರಿಕಾ ಕ್ಷೇತ್ರದ ಪ್ರಮುಖರು ಭಾಗವಹಿಸಲಿದ್ದಾರೆ. 


COMMERCIAL BREAK
SCROLL TO CONTINUE READING

ಅನೇಕ ಸೆಲೆಬ್ರಿಟಿಗಳಿಗೆ ಈಗಾಗಲೇ ಆಹ್ವಾನ ಬಂದಿದೆ. ಬಾಲಿವುಡ್ ತಾರೆಯರಾದ ಅಮಿತಾಭ್ ಬಚ್ಚನ್, ರಣಬೀರ್ ಕಪೂರ್, ಆಯುಷ್ಮಾನ್ ಖುರಾನಾ, ಆಲಿಯಾ ಭಟ್, ಕಂಗನಾ ರನೌತ್ ಈ ಶುಭ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಸದ್ಯ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರಿಗೂ ಆಹ್ವಾನ ಬಂದಿದೆ. ಆದರೆ ಇದೀಗ ಚರ್ಚೆಯಾಗುತ್ತಿರುವ ವಿಷಯವೆಂದರೇ ಬಾಲಿವುಡ್ ನಟಿ ಅನುಷ್ಕಾ ಶರ್ಮಾಗೆ ಅಯೋಧ್ಯೆ ನಗರದೊಂದಿಗಿನ ನಂಟಿನ ಬಗ್ಗೆ.. 


ಇದನ್ನೂ ಓದಿ-Rashmika Mandanna: ಪುಷ್ಪಾ 2 ಚಿತ್ರಕ್ಕೆ ಗುಡ್ ಬೈ ಹೇಳಿದ ರಶ್ಮಿಕಾ.. ಕಾರಣ?


* ಅನುಷ್ಕಾ ಹುಟ್ಟಿದ್ದು ಅಯೋಧ್ಯೆಯಲ್ಲಿ: 
ಅನುಷ್ಕಾ ಶರ್ಮಾ ತಂದೆ ಅಜಯ್ ಕುಮಾರ್ ಶರ್ಮಾ ಮಾಜಿ ಸೇನಾಧಿಕಾರಿ. ಅವರು ದೇಶದ ವಿವಿಧ ಸೇನಾ ಕೇಂದ್ರಗಳಲ್ಲಿ ಕೆಲಸ ಮಾಡಿದ್ದಾರೆ... ಅನುಷ್ಕಾ ಶರ್ಮಾ ಅವರು ಅಯೋಧ್ಯೆಯಲ್ಲಿ ಭಾರತೀಯ ಸೇನೆಯ ಡೋಗ್ರಾ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸುತ್ತಿರುವಾಗ ಅಲ್ಲಿನ ಮಿಲಿಟರಿ ಆಸ್ಪತ್ರೆಯಲ್ಲಿ ಮೇ 1, 1988 ರಂದು ಜನಿಸಿದರು. ಹೀಗಾಗಿ ಆಕೆಯ ಕುಟುಂಬಕ್ಕೂ ಮತ್ತು ಅಯೋಧ್ಯೆಗೂ ನಿಕಟ ಸಂಪರ್ಕವಿದೆ.. ಜೊತೆಗೆ ನಟಿ ಅನುಷ್ಕಾಗೆ ಧಾರ್ಮಿಕ ವಿಷಯಗಳಲ್ಲಿ ತುಂಬಾ ಆಸಕ್ತಿ.. ಅವರು ಆಗಾಗ್ಗೆ ದೇಶದ ಪ್ರಸಿದ್ಧ ದೇವಾಲಯಗಳಿಗೆ ಭೇಟಿ ನೀಡುತ್ತಿರುತ್ತಾರೆ.. 


ಇದನ್ನೂ ಓದಿ-ಸೋನು ಸೂದ್ ಡೀಪ್ ಫೇಕ್ ವಿಡಿಯೋ ವೈರಲ್‌..! ಫ್ಯಾನ್ಸ್‌ಗೆ ಎಚ್ಚರಿಕೆ ನೀಡಿದ ನಟ


* ವಿರಾಟ್ ಜೊತೆಗೆ ಸಚಿನ್ ಮತ್ತು ಧೋನಿಗೆ ರಾಮಮಂದಿರಕ್ಕೆ ಆಹ್ವಾನ:
ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯರು ಇತ್ತೀಚೆಗೆ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರಿಗೆ ರಾಮಮಂದಿರ ಪ್ರಾಣ ಪ್ರತಿಷ್ಠಾ ಆಮಂತ್ರಣ ಪತ್ರಿಕೆಯನ್ನು ನೀಡಿ ಶುಭಸಮಾರಂಭಕ್ಕೆ ಆಹ್ವಾನಿಸಿದ್ದಾರೆ.. ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಜೊತೆಗೆ ಕ್ರಿಕೆಟ್ ದಿಗ್ಗಜರಾದ ಸಚಿನ್ ಮತ್ತು ಧೋನಿ ಅವರಿಗೂ ಆಹ್ವಾನ ಬಂದಿದೆ.. 


* ಅಯೋಧ್ಯೆಯಲ್ಲಿ ನಾಳೆಯಿಂದ ಮೂರು ದಿನಗಳ ಕಾರ್ಯಕ್ರಮಗಳು
ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಠಾ ಉತ್ಸವಗಳು ಜನವರಿ 16ರಂದು ಆರಂಭಗೊಂಡಿವೆ.. ಜನವರಿ 20 ರಂದು ರಾಮಜನ್ಮಭೂಮಿ ದೇವಸ್ಥಾನದ ಗರ್ಭಗುಡಿಯನ್ನು ಸರಯೂ ನೀರಿನಿಂದ ಸ್ವಚ್ಛಗೊಳಿಸಲಾಗುತ್ತದೆ. ಬಳಿಕ ವಾಸ್ತು ಶಾಂತಿ ವಿಧಿವಿಧಾನಗಳು ನಡೆಯುತ್ತವೆ. ಜನವರಿ 21 ರಂದು ರಾಮಲಲ್ಲಾ ಪ್ರತಿಮೆಗೆ 125 ಕಲಶಗಳಿಂದ ಸ್ನಾನ ಮಾಡಿಸಿ ಶಂಕುಸ್ಥಾಪನೆ ನೆರವೇರಿಸಲಾಗುವುದು. ಮತ್ತು ಜನವರಿ 22 ರಂದು ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.