ಬೆಂಗಳೂರು: ಇತ್ತೀಚೆಗೆ ಪಾರ್ಟ್-1‌, ಪಾರ್ಟ್-2‌ ಟ್ರೆಂಡ್‌ ಆಗುತ್ತಿದೆ. ಅದರಲ್ಲೂ ಮೊದಲನೇ ಭಾಗ ಹಿಟ್‌ ಆಗಿದ್ದರೆ, ಆ ಸಿನಿಮಾದ 2ನೇ ಭಾಗ ರಿಲೀಸ್‌ ಆಗೋದು 100 ಪರ್ಸೆಂಟ್‌ ಗ್ಯಾರಂಟಿ.ಇದೇ ರೀತಿ ಸ್ಯಾಂಡಲ್‌ವುಡ್‌ನ ಹಿಟ್‌ ಸಿನಿಮಾಗಳ ಲಿಸ್ಟ್‌ ಸೇರಿರುವ 'ಅಯೋಗ್ಯ' ಚಿತ್ರತಂಡದಿಂದಲೂ ಇಂತಹದ್ದೇ ಸಿಹಿ ಸುದ್ದಿ ಅಭಿಮಾನಿಗಳಿಗೆ ಸಿಕ್ಕಿದೆ.


COMMERCIAL BREAK
SCROLL TO CONTINUE READING

ಹೌದು, ಯೋಗರಾಜ್‌ ಭಟ್ಟರ ಜೊತೆ ಅಸಿಸ್ಟೆಂಟ್‌ ಆಗಿ ಕಾರ್ಯನಿರ್ವಹಿಸಿದ್ದ ಮಹೇಶ್ ಕುಮಾರ್ ನಿರ್ದೇಶಿಸಿದ ಮೊದಲ ಸಿನಿಮಾ 'ಅಯೋಗ್ಯ' 2018ರಲ್ಲಿ ರಿಲೀಸ್‌ ಆಗಿ ದೊಡ್ಡ ಹಿಟ್‌ ಕಂಡಿತ್ತು. ಹಾಗೇ ಗಲ್ಲಾ ಪೆಟ್ಟಿಗೆಯಲ್ಲೂ ಸಖತ್‌ ಸದ್ದು ಮಾಡಿತ್ತು. ಇದೀಗ ಇದೇ ಚಿತ್ರದ 'ಏನಮ್ಮಿ ಏನಮ್ಮಿ' ಹಾಡಿಗೆ 100 ಮಿಲಿಯನ್ ವೀವ್ಸ್ ಸಿಕ್ಕಿದ್ದು, ಈ ಖುಷಿಯನ್ನ ಅದ್ಧೂರಿಯಾಗಿ ಆಚರಿಸಿಕೊಂಡಿತ್ತು ಚಿತ್ರತಂಡ.


ಇದನ್ನೂ ಓದಿ: Sourav Ganguly: ಬಿಸಿಸಿಐ ಮುಖ್ಯಸ್ಥ ಗಂಗೂಲಿ ಕುರ್ಚಿಯೂ ಹೋಗುತ್ತಾ? ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ಸ್ಪರ್ಧಿಗಳು!


ಅಭಿಮಾನಿಗಳಿಗೆ ಹಬ್ಬ:


ಹೀಗೆ ಅದ್ಧೂರಿ ಸಮಾರಂಭದ ಹೊತ್ತಲ್ಲೇ 'ಅಯೋಗ್ಯ-2' ಸಿನಿಮಾ ಕೂಡ ಸೆಟ್ಟೇರುವುದು ಪಕ್ಕಾ ಆಗಿದ್ದು, ಸುಮಾರು 9 ಕೋಟಿ ರೂಪಾಯಿ ವೆಚ್ಚದಲ್ಲಿ ಸಿನಿಮಾ ನಿರ್ಮಿಸಲು ಪ್ಲ್ಯಾನ್‌ ರೂಪಿಸಲಾಗುತ್ತಿದೆ.ಈ ಮೂಲಕ ನಟ ಸತೀಶ್‌ ಅಭಿಮಾನಿ ಬಳಗಕ್ಕೆ ಹಾಗೂ ರಚಿತಾ ರಾಮ್‌ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ.


'ಅಯೋಗ್ಯ-2' ಸಿನಿಮಾದಲ್ಲಿ ಬಹುತೇಕ ಮೊದಲನೇ ಭಾಗದಲ್ಲಿದ್ದ ತಾರಾ ಬಳಗವೇ ಇರಲಿದ್ದು, ಈ ಬಗ್ಗೆ ನಿರ್ದೇಶಕ ಮಹೇಶ್ ಕುಮಾರ್ ಸುಳಿವನ್ನೂ ನೀಡಿದ್ದಾರೆ. 'ಅಯೋಗ್ಯ' ಮುಂದುವರೆದ ಕಥೆ ಅಯೋಗ್ಯ ಸಿನಿಮಾದ ಎಲ್ಲಿಗೆ ನಿಂತಿತ್ತೋ ಅಲ್ಲಿಂದ ಸಿನಿಮಾ ಮುಂದುವರೆಯಲಿದೆ ಎಂಬ ಹಿಂಟ್‌ ಕೂಡ ಸಿಕ್ಕಿದ್ದು, ಸಿಕ್ಕಾಪಟ್ಟೆ ಹೈಪ್‌ ಕ್ರಿಯೇಟ್‌ ಮಾಡಿದೆ.


ಇದನ್ನೂ ಓದಿ: 'ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಿಂದಾಗಿ ಪ್ರತಿ ಟೆಸ್ಟ್ ಸರಣಿಯು ಅತ್ಯಂತ ಮಹತ್ವದ್ದಾಗಿದೆ'


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.