ಬೆಂಗಳೂರು: ನೀನಾಸಂ ಸತೀಸ್ ರಂಗಭೂಮಿಯಿಂದ ಸಿನಿಮಾಗೆ ಬಂದ ಅಪ್ಪಟ ದೇಶೀ ಪ್ರತಿಭೆ. ಇವರ ನಟನೆಯಲ್ಲಿರುವ ನೈಜತೆಯಿಂದಲೇ ಕನ್ನಡ ಚಿತ್ರ ರಸಿಕರ ಮನದಲ್ಲಿ ತಮ್ಮ ಮೊಹರನ್ನು ಒತ್ತಿದ್ದಾರೆ,ಈಗ ಅವರ ಬಹು ನಿರೀಕ್ಷಿತ ಚಿತ್ರ ಅಯೋಗ್ಯದ ಹಾಡುಗಳು ಈಗ ಯೂಟ್ಯೂಬ್ ನಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿವೆ.


COMMERCIAL BREAK
SCROLL TO CONTINUE READING

ಅದರಲ್ಲೂ  ಭರ್ಜರಿ ಚೇತನ್ ಕುಮಾರ್  ರಚಿಸಿ ವಿಜಯ ಪ್ರಕಾಶ್  ಮತ್ತು ಪಾಲಕ್ ಮುಚ್ಚಾಲ್ ಹಾಡಿರುವ  ಏನಮ್ಮಿ ಏನಮ್ಮಿ ಹಾಡಂತೂ ಈಗ ಯ್ಯೂಟೂಬ್ ನಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದೆ. ಜುಲೈ 8 ರಂದು ಬಿಡುಗಡೆಯಾಗಿರುವ ಲಿರಿಕಲ್ ವೀಡಿಯೋ ಸಾಂಗ್ ಈಗಾಗಲೇ 10 ಲಕ್ಷಕ್ಕೂ ಅಧಿಕ ಬಾರಿ ಯೂಟ್ಯೂಬ್ ನಲ್ಲಿ ವಿಕ್ಷಿಸಲಾಗಿದೆ. ಅರ್ಜುನ್ ಜನ್ಯಾ ಅವರ ಸಂಗೀತದಲ್ಲಿ ಮೂಡಿ ಬಂದಿರುವ ಈ ಹಾಡಂತೂ ನಿಜಕ್ಕೂ ಎಲ್ಲರ ಮನದಲ್ಲಿ ಗುನಗುನಿಸುವಂತಿದೆ.


ಆಗಷ್ಟ್  ಮೊದಲ ವಾರದಲ್ಲಿ ಬಿಡುಗಡೆ ಯಾಗುತ್ತಿರುವ ಅಯೋಗ್ಯನಿಗೆ ಈ ಹಾಡಂತೂ ಈಗ ಭರ್ಜರಿಯಾಗಿ ಪೀಠಿಕೆ ಹಾಕಿದೆ ಎಂದು ಹೇಳಬಹುದು. ಹಳ್ಳಿ ಸೊಗಡಿನ ಕಥಾ ಹಂದರವನ್ನು ಹೊಂದಿರುವ ಈ ಅಯೋಗ್ಯ ಮತ್ತೆ ಸ್ಯಾಂಡಲ್ ವುಡ್ ಲ್ಲಿ ತನ್ನ ನಟನೆಯ ಹೂರಣವನ್ನು ಬಡಿಸಲಿದ್ದಾನೆ ಎನ್ನಬಹುದು.