ಸೌರವ್ ಗಂಗೂಲಿ ಬಯೋಪಿಕ್ ನಲ್ಲಿ ನಟಿಸಲಿರುವ ಬಾಲಿವುಡ್ ನಟ ಯಾರು ಗೊತ್ತಾ?
Sourav Ganguly biopic: ಭಾರತದಲ್ಲಿ ಎಂಎಸ್ ಧೋನಿ, ಮೇರಿ ಕೋಮ್, ಕಪಿಲ್ ದೇವ್, ಮಿಥಾಲಿ ರಾಜ್ ಮತ್ತು ಸಚಿನ್ ತೆಂಡೂಲ್ಕರ್ರಂಹತ ಕ್ರಿಕೆಟ್ ಸೆಲೆಬ್ರಿಟಿಗಳ ಜೀವನ ಚರಿತ್ರೆಗಳು ಸಿನಿಮಾಗಳಾಗಿವೆ... ಅದೇ ರೀತಿ ಇದೀಗ ಸೌರವ್ ಗಂಗೂಲಿ ಅವರ ಬಯೋಪಿಕ್ ತೆರೆಗೆ ಬರಲಿದೆ ಎನ್ನಲಾಗಿದೆ..
Cricketer Sourav Ganguly biopic: ಸೌರವ್ ಗಂಗೂಲಿ ಅವರ ಜೀವನ ಚರಿತ್ರೆ ಸಿನಿಮಾ ಆಗುತ್ತಿದ್ದು.. ಮುಖ್ಯ ಪಾತ್ರದಲ್ಲಿ ಪಾತ್ರದಲ್ಲಿ ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ನಟಿಸಲಿದ್ದಾರೆ ಎನ್ನಲಾಗಿದೆ. ವಿಕ್ರಮಾದಿತ್ಯ ಮೋಟ್ವಾನೆ ಅವರು ಗಂಗೂಲಿ ಬಯೋಪಿಕ್ ಅನ್ನು ನಿರ್ದೇಶಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಕಳೆದ ವರ್ಷದಿಂದ ಚಿತ್ರ ಚರ್ಚೆಯಲ್ಲಿದ್ದು..ಶೀಘ್ರವೇ ಇದಕ್ಕೆ ಸಿದ್ಧತೆ ಆರಂಭಿಸಲಿದ್ದಾರೆ ಎನ್ನಲಾಗುತ್ತಿದೆ.. ಶೂಟಿಂಗ್ ಪ್ರಾರಂಭವಾಗುವ ಮೊದಲು ನಾಯಕ ಕ್ರೀಡೆಯಲ್ಲಿ ಕೆಲವು ಗಂಭೀರ ತರಬೇತಿಯನ್ನು ಪಡೆಯಬೇಕಾಗಿರುವುದರಿಂದ ಇದು 2024 ರ ದ್ವಿತೀಯಾರ್ಧದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಇದನ್ನೂ ಓದಿ-Ramarajya: ಮಹಾತ್ಮಾ ಗಾಂಧಿಯವರು ವೀಕ್ಷಿಸಿದ.. ಅಮೆರಿಕಾದಲ್ಲಿ ಪ್ರದರ್ಶನಗೊಂಡ ಪ್ರಥಮ ಭಾರತೀಯ ಚಲನಚಿತ್ರ ಇದು!
ಲವ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿರುವ ನಿರ್ಮಾಪಕರಾದ ಲವ್ ರಂಜನ್ ಮತ್ತು ಅಂಕುರ್ ಗಾರ್ಗ್ ಅವರು ಆಯುಷ್ಮಾನ್ ಖುರಾನಾ ಮತ್ತು ವಿಕ್ರಮಾದಿತ್ಯ ಮೋಟ್ವಾನೆಯವರ ಜೊತೆ ಸಿಕ್ಸರ್ ಬಾರಿಸಲು ರೆಡಿಯಾಗಿದ್ದಾರೆ..
ಇದನ್ನೂ ಓದಿ-Thaina Fields: ಇಂಡಸ್ಟ್ರಿಯಲ್ಲಿ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡಿದ ಕೆಲವೇ ತಿಂಗಳಲ್ಲಿ ನಟಿಯ ನಿಗೂಢ ಸಾವು!
ಗಂಗೂಲಿಯಂತಹ ಎಡಗೈ ಬ್ಯಾಟ್ಸ್‌ಮನ್ ಪಾತ್ರಕ್ಕೆ ಆಯುಷ್ಮಾನ್ ಸೂಕ್ತವಾಗಿ ಹೊಂದಿಕೊಳ್ಳುತ್ತಾರೆ. ಅಲ್ಲದೇ ಮೋಟ್ವಾನೆ ಈಗಾಗಲೇ ಸೂಪರ್ ಹಿಟ್ ಚಿತ್ರಗಳ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.. ಇನ್ನು ಶೀಘ್ರದಲ್ಲೇ ಚಿತ್ರದ ಬಗ್ಗೆ ಅಧಿಕೃತ ಪ್ರಕಟಣೆಯನ್ನು ನಿರೀಕ್ಷಿಸಲಾಗಿದೆ..
ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ 8 ಜುಲೈ 1972 ರಂದು ಕೋಲ್ಕತ್ತಾದ ಬೆಹಾಲಾದಲ್ಲಿ ಜನಿಸಿದರು. ಅವರು 1992 ರಿಂದ 2008 ರವರೆಗೆ ಭಾರತ ತಂಡದಲ್ಲಿ ಆಡಿದ್ದು ಒಟ್ಟು 113 ಟೆಸ್ಟ್ ಪಂದ್ಯಗಳಲ್ಲಿ ಭಾಗವಹಿಸಿ.. 7212 ರನ್ ಗಳಿಸಿದ್ದಾರೆ. ಇದಲ್ಲದೇ 311 ಏಕದಿನ ಪಂದ್ಯಗಳನ್ನು ಆಡಿದ ಇವರು 11,363 ರನ್ ಗಳಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ