Actor Prabhas accident: ಪ್ಯಾನ್ ಇಂಡಿಯಾ ಹೀರೋ ಎಂದು ಗುರುತಿಸಿಕೊಂಡಿರುವ ಬಾಹುಬಲಿ ನಟ ಪ್ರಭಾಸ್ ಸಿನಿಮಾವೊಂದರ ಶೂಟಿಂಗ್‌ ವೇಳೆ ಅಪಘಾತಕ್ಕೀಡಾಗಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಪ್ರಭಾಸ್‌ಗೆ ಗಂಭೀರ ಗಾಯವಾಗಿರುವ ಕಾರಣ ಚಿಕಿತ್ಸೆ ಮತ್ತು ವಿಶ್ರಾಂತಿ ಅಗತ್ಯವಿದೆ. ಈ ಕಾರಣದಿಂದ, ಜಪಾನ್‌ನಲ್ಲಿ ಮುಂದಿನ ತಿಂಗಳು ಮೂರರಂದು ಬಿಡುಗಡೆಯಾಗಲಿರುವ ಕಲ್ಕಿ ಚಿತ್ರದ ಪ್ರಚಾರಕ್ಕೆ ಹಾಜರಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಅಭಿಷೇಕ್‌ ಜೊತೆಗಿನ ವಿಚ್ಚೇದನ ವದಂತಿ ಮಧ್ಯ ಮುಂಬೈ ಬೀದಿಗಳಲ್ಲಿ ಐಶ್ವರ್ಯ-ಸಲ್ಮಾನ್‌ ಖಾನ್‌ ಸುತ್ತಾಟ!‌ ಪೋಟೋ ನೋಡಿ ಬೆಚ್ಚಿಬಿದ್ದ ಫ್ಯಾನ್ಸ್!!‌


ಸಿನಿಮಾವೊಂದರ ಶೂಟಿಂಗ್ ವೇಳೆ ಪಾದ ಉಳುಕಾಗಿದ್ದು, ನಡೆಯಲು ಸಾಧ್ಯವಾಗುತ್ತಿಲ್ಲ. ವಿತರಕರ ತಂಡ ಪ್ರಚಾರದಲ್ಲಿ ಭಾಗವಹಿಸಲಿದೆ ಎಂದು ಪೋಸ್ಟ್‌ ಶೇರ್‌ ಮಾಡಿದ್ದಾರೆ. ಈ ಪೋಸ್ಟ್‌ ನೋಡಿದ ಅಭಿಮಾನಿಗಳು ಕಣ್ಣೀರಾಗಿದ್ದು, ಪ್ರಭಾಸ್ ಬೇಗ ಗುಣಮುಖರಾಗಲಿ ಎಂದು ಆಶಿಸುತ್ತಿದ್ದಾರೆ.


ಸದ್ಯಕ್ಕೆ ಪ್ರಭಾಸ್ ಸರಣಿ ಚಿತ್ರಗಳನ್ನು ಮಾಡುತ್ತಾ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಸದ್ಯ ಪ್ರಭಾಸ್, ಮಾರುತಿ ನಿರ್ದೇಶನದ ರಾಜಾ ಸಾಬ್ ಸಿನಿಮಾ ಮಾಡುತ್ತಿದ್ದಾರೆ. ಮತ್ತೊಂದೆಡೆ ಸೀತಾರಾಮ್ ಸಿನಿಮಾದ ಮೂಲಕ ರಾತ್ರೋರಾತ್ರಿ ಸ್ಟಾರ್ ಡೈರೆಕ್ಟರ್ ಎಂದು ಹೆಸರು ಗಳಿಸಿದ್ದ ಹನು ರಾಘವಪುಡಿ ನಿರ್ದೇಶನದಲ್ಲಿಯೂ ಸಿನಿಮಾ ಮಾಡುತ್ತಿರುವುದು ತಿಳಿದುಬಂದಿದೆ.


 ಈ ಸಿನಿಮಾಗಳ ಜೊತೆಗೆ ಪ್ರಭಾಸ್ ಕಲ್ಕಿ 2, ಸ್ಪಿರಿಟ್, ಸಲಾರ್ 2 ಸಿನಿಮಾಗಳನ್ನು ಮಾಡುತ್ತಿದ್ದಾರೆ. ಈ ಎಲ್ಲಾ ಚಿತ್ರಗಳ ಯಶಸ್ಸಿನಿಂದಾಗಿ ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಅವರನ್ನು ಮೀರಿಸುವವರು ಬೇರೆ ಯಾರೂ ಇಲ್ಲ ಎಂಬಂತಾಗಿದೆ.


ಇದನ್ನೂ ಓದಿ: ಅಪ್ಪಿ ತಪ್ಪಿಯೂ ಪೂಜಾ ಕೋಣೆಯಲ್ಲಿ ಈ ದೇವರ ಫೊಟೋಗಳನ್ನು ಇಡಬೇಡಿ..! ದರಿದ್ರ ಬೆನ್ನತ್ತುತ್ತೆ..


ಇನ್ನು ಪ್ರಭಾಸ್ ವಿಚಾರಕ್ಕೆ ಬಂದರೆ ರಾಘವೇಂದ್ರ ಮತ್ತು ಈಶ್ವರ್ ಚಿತ್ರಗಳ ಮೂಲಕ ಅಪಾರ ಜನಪ್ರಿಯತೆ ಗಳಿಸಿದ ಅವರು ಆ ನಂತರ ಹಲವು ಸಿನಿಮಾಗಳನ್ನು ಮಾಡಿದ್ದರು. ಆದರೆ ಯಾವ ಚಿತ್ರವೂ ದೊಡ್ಡ ಹಿಟ್ ಆಗಲಿಲ್ಲ. ಆದರೆ ಒಂದೇ ಒಂದು ಬಾಹುಬಲಿ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಹೀರೋ ಆಗಿ ಮಿಂಚಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.