ಬಾಹುಬಲಿ ಕಟ್ಟಪ್ಪ ಖ್ಯಾತಿಯ ಸತ್ಯರಾಜ್ ಗೆ ಕೋವಿಡ್ ದೃಢ.. ಆಸ್ಪತ್ರೆಗೆ ದಾಖಲು
Sathyaraj aka: ಬಾಹುಬಲಿ ಕಟ್ಟಪ್ಪ ಖ್ಯಾತಿಯ ನಟ ಸತ್ಯರಾಜ್ ಅಕಾ ಅವರಿಗೆ ಕೊರೊನಾ ದೃಢಪಟ್ಟಿದೆ. ಈ ಹಿನ್ನೆಲೆ ಅವರನ್ನು ಚೆನ್ನೈನ ಖಾಸಗಿ ಕ್ಲಿನಿಕ್ಗೆ ದಾಖಲಿಸಲಾಗಿದೆ.
ಬಾಹುಬಲಿಯ (Baahubali) ಕಟ್ಟಪ್ಪ (Kattappa) ಅಭಿಮಾನಿಗಳಿಗೆ ಆತಂಕದ ಸುದ್ದಿಯೊಂದಿದೆ. ಕಟ್ಟಪ್ಪ ಎಂದೇ ಮನೆಮಾತಾಗಿರುವ ನಟ ಸತ್ಯರಾಜ್ ಅಕಾ ಕೋವಿಡ್-19 ನಿಂದ ಬಳಲುತ್ತಿದ್ದಾರೆ.
ಕೆಲವು ಸೌತ್ ನ್ಯೂಸ್ ಪೋರ್ಟಲ್‌ಗಳ ವರದಿಗಳ ಪ್ರಕಾರ, ಸತ್ಯರಾಜ್ (Sathyaraj aka) ಅವರ ಆರೋಗ್ಯ ಹದಗೆಟ್ಟ ನಂತರ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು. ಅವರು ಈಗ ಚೆನ್ನೈನ ಅಮಿಂಜಿಕರೈನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸತ್ಯರಾಜ್ ಅವರು ಚೆನ್ನೈ ಎಕ್ಸ್‌ಪ್ರೆಸ್ ಮತ್ತು ಬಾಹುಬಲಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಬಾಹುಬಲಿಯಲ್ಲಿ ಕಟ್ಟಪ್ಪನ ಪಾತ್ರದಲ್ಲಿ ಅವರ ಅಭಿನಯದಿಂದ ಭಾರತ ಮತ್ತು ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಪಡೆದರು.
ಸದ್ಯ ಆರೋಗ್ಯ ಸ್ಥಿರವಾಗಿದ್ದು, 2-3 ದಿನಗಳಲ್ಲಿ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಕೆಲವು ವರದಿಗಳು ಹೇಳುತ್ತಿದ್ದರೂ ಆಸ್ಪತ್ರೆ ಅಥವಾ ಅವರ ಕುಟುಂಬದಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.
ಈ ವಾರ, ಮಹೇಶ್ ಬಾಬು, ಚಲನಚಿತ್ರ ನಿರ್ಮಾಪಕ ಪ್ರಿಯದರ್ಶನ್ ಸಹ ಕೊರೊನಾ ಸೋಂಕಿಗೆ ಒಳಗಾದರು. ಪ್ರಿಯದರ್ಶನ್ ಕೂಡ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ತಮ್ಮ ನೆಚ್ಚಿನ ನಟ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
ಇದನ್ನೂ ಓದಿ: Ramesh Babu:ಟಾಲಿವುಡ್ ನಟ ಮಹೇಶ್ ಬಾಬು ಸಹೋದರ ರಮೇಶ್ ಬಾಬು ವಿಧಿವಶ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.