ಮುಂಬೈ:  ರಾಜಕಾರಣಿ ಬಾಬಾ ಸಿದ್ದಿಕ್ ಹತ್ಯೆಯ ಸುದ್ದಿ ತಿಳಿದ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ತಮ್ಮ ರಿಯಾಲಿಟಿ ಶೋ 'ಬಿಗ್ ಬಾಸ್ 18' ರ ಚಿತ್ರೀಕರಣವನ್ನು ರದ್ದುಗೊಳಿಸಿದ್ದಾರೆ. 


COMMERCIAL BREAK
SCROLL TO CONTINUE READING

ಎನ್‌ಸಿಪಿಯ ಅಜಿತ್ ಪವಾರ್ ಬಣ ಸೇರಿದ ಬಾಬಾ ಸಿದ್ದಿಕ್ ಅಪರಿಚಿತ ವ್ಯಕ್ತಿಗಳ ಗುಂಡಿಗೆ ಬಲಿಯಾಗಿದ್ದಾರೆ.ಮುಂಬೈನ ಬಾಂದ್ರಾ ಪ್ರದೇಶದ ನಿರ್ಮಲ್ ನಗರದ ಕೋಲ್ಗೇಟ್ ಮೈದಾನದ ಬಳಿಯಿರುವ ಅವರ ಶಾಸಕ ಪುತ್ರ ಜೀಶನ್ ಸಿದ್ದಿಕ್ ಅವರ ಕಚೇರಿಯ ಹೊರಗೆ ಗುಂಡಿನ ದಾಳಿ ನಡೆದಿದೆ.ಸುದ್ದಿ ತಿಳಿದ ನಂತರ ಸಲ್ಮಾನ್ ಶನಿವಾರ 'ಬಿಗ್ ಬಾಸ್' ಚಿತ್ರೀಕರಣವನ್ನು ರದ್ದುಗೊಳಿಸಿ ಸೆಟ್‌ ನಿಂದ ನೇರವಾಗಿ ಮುಂಬೈನ ಲೀಲಾವತಿ ಆಸ್ಪತ್ರೆಗೆ ಧಾವಿಸಿದರು ಎಂದು ವರದಿಯಾಗಿದೆ.ಅಹಿತಕರ ಘಟನೆಯ ಬಗ್ಗೆ ತಿಳಿದ ನಂತರ ಬಾಲಿವುಡ್ ನಟ ಸಂಜಯ್ ದತ್ ಕೂಡ ಶನಿವಾರ ತಡರಾತ್ರಿ ಲೀಲಾವತಿ ಆಸ್ಪತ್ರೆ ಭೇಟಿ ನೀಡಿದರು.


ಇದನ್ನೂ ಓದಿ: ಮಜ್ಜಿಗೆಯಲ್ಲಿ ಈ 2 ಪದಾರ್ಥಗಳನ್ನು ಬೆರೆಸಿ ಸೇವಿಸಿ; ದೀರ್ಘಕಾಲದ ಮಲಬದ್ಧತೆ ದೂರವಾಗುತ್ತದೆ, ಹೊಟ್ಟೆ ಸ್ವಚ್ಛವಾಗುತ್ತದೆ!


ಸಲ್ಮಾನ್ ವಾಸಿಸುವ ಕ್ಷೇತ್ರದಲ್ಲಿರುವುದರಿಂದ ಸಲ್ಮಾನ್ ಮತ್ತು ಬಾಬಾ ಸಿದ್ದಿಕ್ ಆತ್ಮೀಯ ಸ್ನೇಹಿತರಾಗಿದ್ದರು. ಬಾಬಾ ಸಿದ್ದಿಕ್ ಅವರ ಇಫ್ತಾರ್ ಕೂಟಗಳನ್ನು ಭಾರತದ ಮನರಂಜನಾ ರಾಜಧಾನಿಯ ಉನ್ನತ ಕಾರ್ಯಕ್ರಮಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.ಬಾಲಿವುಡ್‌ನ ಇಬ್ಬರು ಸೂಪರ್‌ಸ್ಟಾರ್‌ಗಳಾದ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಕೆಲವು ವರ್ಷಗಳ ಕಾಲ ಕಡುವೈರಿಗಳಾಗಿದ್ದರು ಇಂತಹ ಸಂದರ್ಭದಲ್ಲಿ 2013 ರಲ್ಲಿ ನಡೆದ ಬಾಬಾ ಸಿದ್ದಿಕ್ ಇಫ್ತಾರ್ ಕೂಟದಲ್ಲಿ ಈ ಇಬ್ಬರು ನಟರ ನಡುವಿನ ವೈಷ್ಯಮ್ಯವನ್ನು ಕೊನೆಗಾಣಿಸುವಲ್ಲಿ ಯಶಸ್ವಿಯಾಗಿದ್ದರು.


ಇದನ್ನೂ ಓದಿ: ಹನುಮಾನ್ ಸಿನಿಮಾ ನಿರ್ದೇಶಕರ 'ಮಹಾಕಾಳಿ'ಗೆ ಮಹಿಳಾ ನಿರ್ದೇಶಕಿ ಸಾರಥಿ


ಪೊಲೀಸ್ ಇಲಾಖೆಯ ಮೂಲಗಳ ಪ್ರಕಾರ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕ್ ಅವರ ಗುಂಡಿನ ದಾಳಿಗೆ ಸಂಬಂಧಿಸಿದ ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.