ನವದೆಹಲಿ: ಬಾಲಿವುಡ್ ಖ್ಯಾತ ನಟ ಇರ್ಫಾನ್ ಖಾನ್ (Irfan Khan) ಕೆಲ ದಿನಗಳ ಹಿಂದೆ ಇಹಲೋಕ ತ್ಯಜಿಸಿದ್ದಾರೆ.  ಇರ್ಫಾನ್ ಖಾನ್  ಪುತ್ರ ಬಾಬಿಲ್ (Babil Khan) ಶೀಘ್ರದಲ್ಲೇ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ. ಇದೀಗ ಬಾಬಿಲ್ ಅವರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ (Social media) ಭಾರೀ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ ಬಾಬಿಲ್ ತಮ್ಮ ತಂದೆಯನ್ನು ನೆನೆದು ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. 


COMMERCIAL BREAK
SCROLL TO CONTINUE READING

ವೈರಲ್ ಆಯಿತು ಬಾಬಿಲ್ ವಿಡಿಯೋ :
ಕೆಲವು ದಿನಗಳ ಹಿಂದೆ ನಡೆದ ಫಿಲ್ಮ್‌ಫೇರ್ ಪ್ರಶಸ್ತಿ (Filmfare Award 2021)  ಪ್ರದಾನ ಸಮಾರಂಭದಲ್ಲಿ ಬಾಬಿಲ್ ಖಾನ್ (Babil Khan) ಭಾಗವಹಿಸಿದ್ದರು. ಇರ್ಫಾನ್ ಅವರಿಗೆ 'ಇಂಗ್ಲಿಷ್ ಮೀಡಿಯಮ್' ಚಿತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ನೀಡಲಾಯಿತು. ಸಮಾರಂಭದಲ್ಲಿ ಪ್ರಶಸ್ತಿ ವಿತರಣೆ ವೆಳೆ ಇರ್ಫಾನ್ ಖಾನ್ (Irfan Khan) ಕುರಿತಾದ ವಿಡಿಯೋ ತುಣುಕನ್ನು ಪ್ರದರ್ಶಿಸಲಾಗಿತ್ತು. ಇದನ್ನು ನೋಡುತ್ತಿದ್ದಂತೆ, ಬಾಬಿಲ್ ತನ್ನ ತಂದೆಯನ್ನು ನೆನೆದು ಬಿಕ್ಕಿ ಬಿಕ್ಕಿ ಅಳಲು ಆರಂಭಿಸಿದ್ದಾರೆ. 


ತಮನ್ನಾ ಭಾಟಿಯಾ ಫೋಟೋದಲ್ಲಿ ವಿರಾಟ್ ಕೊಹ್ಲಿ..? ಫ್ಯಾನ್ಸ್ ಹೇಳಿದ್ದೇನು ಗೊತ್ತಾ?


ಪ್ರಶಸ್ತಿ ಸ್ವೀಕರಿಸಲು ತಂದೆಯ ಬಟ್ಟೆಗಳನ್ನು ತೊಟ್ಟು ಆಗಮಿಸಿದ್ದ ಬಾಬಿಲ್ : 
ರ್ಫಾನ್ ಖಾನ್ ಪರವಾಗಿ ಅವರ ಪುತ್ರ ಬಾಬಿಲ್ ಪ್ರಶಸ್ತಿ ಸ್ವೀಕರಿಸುತ್ತಿದ್ದಂತೆ ನೆರೆದಿದ್ದವರ ಕಣ್ಣುಗಳು ತೇವವಾಗಿತ್ತು. ಈ ಸಮಯದಲ್ಲಿ ಬಾಬಿಲ್ ತನ್ನ ತಂದೆ ಇರ್ಫಾನ್ ಖಾನ್ ಅವರ ಬಟ್ಟೆಗಳನ್ನು ಧರಿಸಿ ಆಗಮಿಸಿದ್ದು ವಿಶೇಷವಾಗಿತ್ತು.  ಬಾಬಿಲ್ ಅವರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ (Social Media) ತುಂಬಾ ವೈರಲ್ ಆಗುತ್ತಿದೆ. 


ಮಾರ್ಚ್ 29 ರಂದು ನಿಧನರಾದ ಇರ್ಫಾನ್ ಖಾನ್ : 
ಮಾರ್ಚ್ 29, 2020 ರಂದು, ಇರ್ಫಾನ್ ಖಾನ್ ಅನಾರೋಗ್ಯದ ಹಿನ್ನೆಲೆಯಲ್ಲಿ ಮೃತಪಟ್ಟಿದ್ದರು.  2 ವರ್ಷಗಳಿಂದ ಕ್ಯಾನ್ಸರ್ ನಂತಹ (Cancer) ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದರು. ಆರೋಗ್ಯ ತೀರಾ ಹದಗೆಟ್ಟ ಕಾರಣ, ಮಾರ್ಚ್ 28 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಾರ್ಚ್ 29ರಂದು ಅವರು ಇಹ ಲೋಕ ತ್ಯಜಿಸಿದ್ದರು. 


ಇದನ್ನೂ ಓದಿ : MAMI ಅಧ್ಯಕ್ಷೆ ಸ್ಥಾನಕ್ಕೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ರಾಜೀನಾಮೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.