Baby OTT Release Date : ಟಾಲಿವುಡ್‌ ʼಬೇಬಿʼ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. ಕನ್ನಡದಲ್ಲೂ ಈ ಸಿನಿಮಾ ಉತ್ತಮ ಕ್ರೇಜ್‌ ಪಡೆದುಕೊಂಡಿತು. ತ್ರಿಕೋನ ಪ್ರೇಮಕಥೆಯಾಗಿ ಮೂಡಿಬಂದಿರುವ ಈ ಸಿನಿಮಾ ಪ್ರೇಕ್ಷಕರಿಗೆ ಒಂದು ರೇಂಜ್ ನಲ್ಲಿ ಇಷ್ಟವಾಗಿತ್ತು. ಸಾಯಿ ರಾಜೇಶ್ ನಿರ್ದೇಶನದ ಈ ಚಿತ್ರದಲ್ಲಿ ಆನಂದ್ ದೇವರಕೊಂಡ, ವೈಷ್ಣವಿ ಚೈತನ್ಯ ಮತ್ತು ವಿರಾಜ್ ಅಶ್ವಿನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಎಸ್‌ಕೆಎನ್‌ ನಿರ್ಮಿಸಿದ್ದಾರೆ.


COMMERCIAL BREAK
SCROLL TO CONTINUE READING

ಬೇಬಿ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ನೋಡದ ಪ್ರೇಕ್ಷಕರು ಒಟಿಟಿ ಬಿಡುಗಡೆ ದಿನಾಂಕಕ್ಕಾಗಿ ಕಾಯುತ್ತಿದ್ದಾರೆ. ಅದರಲ್ಲೂ ಯುವಕರು ಈ ಸಿನಿಮಾದ ಒಟಿಟಿ ಸ್ಟ್ರೀಮಿಂಗ್‌ಗಾಗಿ ತುದಿಗಾಲಿನಲ್ಲಿ ನಿಂತಿದ್ದಾರೆ. ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ರೂ.80 ಕೋಟಿ ಕಲೆಕ್ಷನ್ ಮಾಡಿದೆ. ಇತ್ತೀಚೆಗೆ, ಈ ಚಲನಚಿತ್ರದ OTT ಸ್ಟ್ರೀಮಿಂಗ್ ದಿನಾಂಕದ ಕುರಿತು ಒಂದು ಅಪ್‌ಡೇಟ್ ಇದೆ.


ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ಗಿಚ್ಚಿ ಗಿಲಿಗಿಲಿ ಜಾಹ್ನವಿ..! ಸಿನಿಮಾ ಯಾವುದು ಗೊತ್ತೆ..?


ಬೇಬಿ ಸಿನಿಮಾ ಈ ತಿಂಗಳ 25 ರಿಂದ ಆಹಾದಲ್ಲಿ ಸ್ಟ್ರೀಮಿಂಗ್ ಆಗಲಿದೆ. ಈ ನಿಟ್ಟಿನಲ್ಲಿ ಆಹಾ ವಿಶೇಷ ಪೋಸ್ಟರ್ ಬಿಡುಗಡೆ ಮಾಡಿದೆ. ಅದೇ ರೀತಿ ಆಹಾ ಗೋಲ್ಡ್ ಚಂದಾದಾರರು 12 ಗಂಟೆ ಮುಂಚಿತವಾಗಿ ಬೇಬಿ ಚಿತ್ರವನ್ನು ವೀಕ್ಷಿಸಬಹುದು ಎಂದು ತಿಳಿದುಬಂದಿದೆ. ಅದೇನೆಂದರೆ.. ಇದೇ 24ರಂದು ಸಂಜೆ 6 ಗಂಟೆಯಿಂದ ಆಹಾ ಗೋಲ್ಡ್‌ ಸದಸ್ಯತ್ವ ಹೊಂದಿರುವವರು ಈ ಸಿನಿಮಾ ವೀಕ್ಷಿಸಬಹುದಾಗಿದೆ.  


ಈ ಸಿನಿಮಾದ ಮೂಲಕ ನಾಯಕಿ ವೈಷ್ಣವಿ ಚೈತನ್ಯ ಟಾಲಿವುಡ್ ನಲ್ಲಿ ಭಾರೀ ಕ್ರೇಜ್ ಹುಟ್ಟು ಹಾಕಿದ್ದರು. ವೈಷ್ಣವಿ ಪಾತ್ರ ಸಿನಿ ಪ್ರೇಕ್ಷಕರನ್ನು ಆಕರ್ಷಿಸಿತು. ಈ ಸಿನಿಮಾದಲ್ಲಿ ಆನಂದ್ ದೇವರಕೊಂಡ ಆಟೋ ಡ್ರೈವರ್ ಆಗಿ.. ಲವ್ ಫೇಲ್ಯೂರ್ ಆದ ಹುಡುಗನಾಗಿ ಅದ್ಭುತವಾಗಿ ನಟಿಸಿದ್ದಾರೆ. ಭಾವನಾತ್ಮಕ ದೃಶ್ಯಗಳಲ್ಲಿ ಆನಂದ್‌ ಅತ್ಯಂತ ಪ್ರಭಾವಿತರಾಗಿ ನಟಿಸಿದ್ದಾರೆ. ವಿರಾಜ್ ಕೂಡ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಸಧ್ಯ ಸಿನಿಮಾವನ್ನು ಥಿಯೇಟರ್‌ಗಳಲ್ಲಿ ಮಿಸ್ ಮಾಡಿಕೊಂಡವರು ಒಟಿಟಿಯಲ್ಲಿ ನೋಡಿ ಆನಂದಿಸಬಹುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.